ರಾಘವ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.03: ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ರಾಘವ ಅವರ 144ನೇ ಜಯಂತಿ ಅಂಗವಾಗಿ ಇಲ್ಲಿನ  ರಾಘವ ಮೆಮೋರಿಯಲ್ ಅಸೋಸಿಯೇಷನ್  ಕನ್ನಡ ಮತ್ತು ತೆಲುಗು ರಂಗಭೂಮಿ ಕಲಾವಿದರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಲು ಅರ್ಹ ರಂಗಭೂಮಿ‌ ಕಲಾವಿದರಿಂದ ಅರ್ಜಿ ಆಹ್ವಾನಿಸಿದೆ.
ಕಲಾವಿದರು ನಾಟಕದಲ್ಲಿ ನಟನೆ, ಕಲಾ ಸೇವೆ ದಾಖಲೆಯ (ಬಯೋಡೇಟಾ) ವಿವರಗಳನ್ನು
ಜುಲೈರೊಳಗಾಗಿ ಅದ್ಯಕ್ಷರು ಇಲ್ಲಾ ಕಾರ್ಯದರ್ಶಿ, ರಾಘವ ಕಲಾ ಮಂದಿರ,ಡಾ||ರಾಜಕುಮಾರ್ ರಸ್ತೆ ಬಳ್ಳಾರಿ ಈ ವಿಳಾಸಕ್ಕೆ ಕಳುಹಿಸಬೇಕಿದೆ.
ಕಲಾವಿದರ ವಯೋಮಿತಿ 50 ವರ್ಷ ಮೇಲ್ಪಟ್ಟಿರಬೇಕು , ಕನಿಷ್ಠ 20 ವರ್ಷಗಳ ಕಾಲ ರಂಗಭೂಮಿ ನಾಟಕದಲ್ಲಿ ಕಲಾ ಸೇವೆಯನ್ನು ಮಾಡಿರಬೇಕು. ಹೆಚ್ಚಿನ ಮಾಹಿತಿಗಾಗಿ ಶ್ರೀ ಎನ್ ಪ್ರಕಾಶ್, ಗೌರವ ಕಾರ್ಯದರ್ಶಿ
9448124243 ಗೆ ಸಂಪರ್ಕಿಸಬೇಕು. ಬರುವ ಅ. 2 ಮತ್ತು 3 ರಂದು ಎರಡು ದಿನಗಳ ಕಾಲ  ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆಂದು ಅಸೋಸಿಯೇಷನ್ ಅಧ್ಯಕ್ಷ
 ಕೆ.ಕೊಟೆಶ್ವರ ರಾವ್ ತಿಳಿಸಿದ್ದಾರೆ.