ಭಕ್ತರ ಸಹಕಾರದಿಂದ ಅಕ್ಷರ ದಾಸೋಹದ ಜೊತೆಗೆ, ಅನ್ನದಾಸೋಹ
ಸಂಜೆವಾಣಿವಾರ್ತೆ
 ಹರಪನಹಳ್ಳಿ, ಜು.3- ತಾಲೂಕಿನ ಅರಸೀಕೆರೆ ಗ್ರಾಮದ ಶ್ರೀ ಕೋಲ ಶಾಂತೇಶ್ವರ ಮಠದಲ್ಲಿ 1992-93 ನೇ ಸಾಲಿನ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ದಾಸೋಹದ ದಿನಸಿಗಳನ್ನು ಮಠಕ್ಕೆ ನೀಡಿದರು.
ದಿನಸಿಗಳನ್ನು ಸ್ವೀಕರಿಸಿ ಶ್ರೀ ಶಾಂತಲಿಂಗ ದೇಶೀಕೇಂದ್ರ ಮಹಾಸ್ವಾಮಿಗಳು ಮಾತನಾಡಿ:-2004 ರಿಂದ ಪ್ರತಿ ಅಮವಾಸೆಯ ದಿನ ಪ್ರಸಾದ ವ್ಯವಸ್ಥೆ ಪ್ರಾರಂಭಿಸಲಾಯಿತು.
ನಂತರ ಕೊಟ್ಟೂರಿನ ಪಾದ ಯಾತ್ರೆಗಳಿಗೆ ಪ್ರಸಾದದ ವ್ಯವಸ್ಥೆ, ಬಸವ ಜಯಂತಿ ಪ್ರಯುಕ್ತ ಸಾಮೂಹಿಕ ವಿವಾಹಗಳನ್ನು ನಡೆಸುತ್ತಾ ಬಂದಿದ್ದೇವೆ.
ಐಟಿಐ. ಕಾಲೇಜಿನ 25 ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಯಿತು.
ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು ಹಸಿವಿನಿಂದ ಬಳಲ ಬಾರದೆಂಬ ಉದ್ದೇಶದಿಂದ ಮಧ್ಯಾಹ್ನದ ಅನ್ನ ದಾಸೋಹ ಪ್ರಾರಂಭಿಸಿದ್ದೇವೆ.  ನಾವು ಅನ್ನ ದಾಸೋಹ ನೀಡುತ್ತಿರುವುದನ್ನು ನೋಡಿ ಹಳೆಯ ವಿದ್ಯಾರ್ಥಿಗಳು ದಾಸೋಹದ ದಿನಸಿಗಳನ್ನು ನೀಡಿದ್ದಾರೆ ಎಂದು ಹೇಳಿದರು.
 ಕೆರೆಗುಡಿಹಳ್ಳಿ ಹಾಲೇಶ್ ಮಾತನಾಡಿ:-ಅರಸೀಕೆರೆ ಗೆಳೆಯರ ಬಳಗದ ವತಿಯಿಂದ ಶ್ರೀ ಮಠಕ್ಕೆ ದಾಸೋಹಗಳನ್ನು ನೀಡಿದ್ದೇವೆ, ಶ್ರೀ ಶಾಂತಲಿಂಗ ದೇಶೀಕೇಂದ್ರ ಮಹಾಸ್ವಾಮಿಗಳು ಶಿಕ್ಷಣ ಕೊಡುವುದರ ಜೊತೆಗೆ ಅನ್ನ ದಾಸೋಹ ಸಹ ನೀಡುತ್ತಿದ್ದಾರೆ.    ಇಂದಿನ ವಿದ್ಯೆ ವ್ಯಾಪಾರಿಕರಣವಾಗಿದೆ, ಮಾರಾಟದ ಮಳಿಗೆಗಳಾಗಿವೆ.    ಇಂತಹ ದಿನಗಳಲ್ಲಿ ಶ್ರೀಗಳು ಶಿಕ್ಷಣದ ಜೊತೆಗೆ ಅನ್ನ ದಾಸೋಹ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಶ್ರೀಗಳ ಪ್ರೇರಣೆಯಿಂದ ನಾವೆಲ್ಲ ಹಳೆಯ ವಿದ್ಯಾರ್ಥಿಗಳು ಈದಿನ ಮಠಕ್ಕೆ ದಾಸೋಹದ ದಿನಸಿಗಳನ್ನು ನೀಡಿದೆವು.
 ಅನ್ಯ ಮಠಗಳಂತೆ ಈ ಮಠವು ಬೆಳೆಯಬೇಕು, ನಮ್ಮ ಗೆಳೆಯರ ಬಳಗ ಈ ಮಠಕ್ಕೆ ಸದಾ ನಿಮ್ಮ ಜೊತೆಗಿರುತ್ತದೆ ಎಂದು ಹೇಳಿದರು.
 ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ.ಎಂ.ಸುರೇಶ್,ಸಿದ್ದೇಶ್,ಹುಲುಗಪ್ಪ, ಶಿವಣ್ಣ,ರೇಣುಕಮ್ಮ,ನಿರ್ಮಲ,ಸುನೀತ ಈ ಸಂದರ್ಭದಲ್ಲಿ ಮಾತನಾಡಿದರು.
 ಎಲ್ಲಾ ವಿದ್ಯಾರ್ಥಿಗಳಿಗೆ ಶ್ರೀಗಳು ಕಠಿಣ ಪರಿಸ್ಥಿತಿಯಲ್ಲಿಯೂ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹದ  ಜೊತೆಗೆ ಅನ್ನ ದಾಸೋಹ ನೀಡುತ್ತಿದ್ದಾರೆ, ಕೃಷಿ ಆಧರಿಸಿ ಇನ್ನೂ ಅನೇಕ ರೀತಿಯ ಕಾರ್ಯ ಶ್ರಮಿತಿಯ ಫಲವಾಗಿ ಮಠದಲ್ಲಿರುವ ಮಕ್ಕಳಿಗೆ ದಿನನಿತ್ಯ ನಿರಂತರ ದಾಸೋಹ ನಡೆಸುತ್ತಿದ್ದಾರೆ.
 ಇದನ್ನು ಗಮನಿಸಿದ ಹಳೆಯ ವಿದ್ಯಾರ್ಥಿಗಳು ಇಂದು ಮಠಕ್ಕೆ ಆಗಮಿಸಿ ಶ್ರೀಗಳ ಸಮ್ಮುಖದಲ್ಲಿ ಅನೇಕ ದಾಸೋಹದ ದಿನಸಿಗಳನ್ನು ಕೊಟ್ಟು ಗುರುಗಳ ಆಶೀರ್ವಾದ ಪಡೆದರು.
ಇದೇ ರೀತಿ ಮುಂದಿನ ದಿನಗಳಲ್ಲಿ ಮಠಕ್ಕೆ ಭೇಟಿ ನೀಡುವ ಅನೇಕ ನೌಕರರು, ಉದ್ಯಮಿಗಳು, ಹಳೆಯ ವಿದ್ಯಾರ್ಥಿಗಳು, ಗಣ್ಯರು, ಭಕ್ತಾಧಿಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮಠಕ್ಕೆ ತನುಮನ ಧನವನ್ನು ಅರ್ಪಿಸಿದ್ದೇ ಆದಲ್ಲಿ ಮುಂದೊಂದು ದಿನ ನಮ್ಮ ಅರಸೀಕೆರೆ ಮಠವು, ಸಿದ್ದಗಂಗಾ ಮಠ, ಕೊಪ್ಪಳ ಮಠ, ಗದುಗಿನ ಮಠಗಳಂತೆ ಬೆಳೆದು ನಿಂತು
 ಶ್ರೀಗಳು ಕಾಯಕ ಯೋಗಿಗಳು, ನೇಗಿಲ ಯೋಗಿಗಳು, ತ್ರಿವಿಧ ದಾಸೋಹಿಗಳು ಆದಂತಹ ಶ್ರೀ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು ಸದ್ದಿಲ್ಲದೇ ಮಾಡಿರುವ ನಿಸ್ವಾರ್ಥ ಸೇವೆಗೆ ಸಮಾಜ ಕಲ್ಯಾಣಕ್ಕೆ ಬಲ ತುಂಬುವ ಕೆಲಸ ಮಾಡಿದಂತಾಗುತ್ತದೆ ಎಂಬುವುದು ಭಕ್ತರ ಹಾಗೂ ಸಾರ್ವಜನಿಕರ ಆಶಯವಾಗಿದೆ.
 ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ.ಎಂ.ಸುರೇಶ್,ಹುಲುಗಪ್ಪ, ಶಿವಣ್ಣ,ರೇಣುಕಮ್ಮ,ನಿರ್ಮಲ, ಸುನೀತಾ ಈ ಸಂದರ್ಭದಲ್ಲಿ ಮಾತನಾಡಿದರು.
 ಮುಖ್ಯ ಅತಿಥಿಗಳಾಗಿ ಎಂ. ಶಂಕರಪ್ಪ,ಚಂದ್ರಪ್ಪ, ರವಿ, ಭಾಗ್ಯಮ್ಮ, ಕೊಟ್ರಮ್ಮ, ಪ್ರೇಮಾ, ರೇಣುಕಾ, ಪ್ರಾಂಶುಪಾಲರಾದ ಸಿದ್ದೇಶ್, ಉಪನ್ಯಾಸಕರಾದ ಮಂಜುನಾಥ್, ಬೆಟ್ಟಪ್ಪ,ರಮೇಶ್, ಪ್ರಶಾಂತ್,ಕಾರ್ಯದರ್ಶಿ ವೃಷಬೇಂದ್ರಯ್ಯ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.