ಸಮಾಜವನ್ನು ಸನ್ನಡತೆಯತ್ತ ಕೊಂಡೈಯಬೇಕಾಗಿದೆ – ಸ್ವಾಮಿ ಮುಕ್ತಿದಾನಂದ ಮಹಾರಾಜ್
ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.03: ಸಮಾಜವನ್ಮು ಸನ್ನಡತೆಯತ್ತ ಕೊಂಡೈಯಲು ದಿವ್ಯತ್ರಯರ ಜೀವನ ಸಾಧನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ರಾಮಕೃಷ್ಣ ವಿವೇಕಾದ ಭಾವಪ್ರಚಾರ ಪರಿಷತ್ ಅಧ್ಯಕ್ಷರಾದ ಮೈಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದ ಮಹಾರಾಜ್ ಹೇಳಿದರು.
ಹೊಸಪೇಟೆಯ ಶ್ರೀ ರಾಮಕೃಷ್ಣ ಗೀತಾಶ್ರಮ ಸ್ಥಳೀಯ ವಾಸವಿವಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ” ದಿವ್ಯತ್ರಯರ ಸ್ಮರಣೋತ್ಸವ”  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಯುವ ಜನಾಂಗ ಯಾವಕಡೆ ಸಾಗುತ್ತಿದೆ ಎಂಬುದನ್ನು ಗಮನಿಸಿದರೆ ನಿಜವಾಗಿಯು ದ್ಗಿಭ್ರಮೆಯಾಗುತ್ತದೆ, ಸ್ವಾರ್ಥ ಸಾಧನೆಯ ನಶ್ವರವಾದ ದೇಹದ ಬಗ್ಗೆ ಹೆಚ್ಚು ವ್ಯಾಮೋಹವನ್ನು ಪಡದೆ, ಸಾದು-ಸಂತರಾಗಲಿ ಸನ್ಯಾಸಿಗಳಾಗಲಿ, ಗೃಹಸ್ಥರಾಗಲಿ ಎಲ್ಲರೂ ಭಗವಥ್  ಸ್ಮರಣೆಯಲ್ಲಿ ತೊಡಗುವ ಮೂಲಕ ಒಳ್ಳೆಯ ವಿಚಾರಗಳನ್ನು ಪಸರಿಸುವ, ಜ್ಞಾನ ಹಾಗೂ ಭಾವಪ್ರಚಾರವನ್ನು ಹಳ್ಳಿ ಹಳ್ಳಿಗೆ ತಲುಪಿಸುವ ಮಹಾ ಕಾರ್ಯವನ್ನು ವಿಶ್ವದಾದ್ಯಂತ ನಡೆಸಿ ಸನ್ಮಾರ್ಗದತ್ತ ಕೊಂಡೈಯಬೇಕು  ಈ ಕಾರ್ಯವನ್ನ ಶ್ರೀ ರಾಮಕೃಷ್ಣ ಆಶ್ರಮ ಮಾಡುತ್ತಿದೆ  ಧರ್ಮಕಾರ್ಯದ ಸ್ವರೂಪ ಮುಂದೆ ನಡೆಯಬೇಕಾದ ಮಾರ್ಗದ ಚಿಂತನ ಮಂಥನ ಇಂದಿನಿಂದ ಎರಡು ದಿನಗಳ ಕಾಲದ ಭಾವಪ್ರಚಾರ ಸಭೆಯಲ್ಲಿ ನಡೆಯಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಚಾಲಕರಾದ ಪ್ರಕಾಶಾನಂದಜೀ ಮಹಾರಾಜ ಮಾತನಾಡಿ  ಕಳೆದ 10ವರ್ಷಗಳಲ್ಲಿ  ಶ್ರೀ ರಾಮಕೃಷ್ಣ ಗೀತಾಶ್ರಮ ಅನೇಕ ಧಾರ್ಮಿಕ ನಮ್ಮ ಸನಾತನ ಸಂಸ್ಕೃತಿಯ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಈ ದಶಕದ ಸಂಭ್ರಮದ ಜೊತೆ 8ನೇ ವಿವೇಕಾನಂದ ಭಾವಪ್ರಚಾರ ಪರಿಷತ್ ಅರ್ಧವಾರ್ಷಿಕ ಸಭೆಯನ್ನು ಹಮ್ಮಿಕೊಂಡಿದೆ ಇದು ಹೊಸ ಮಾರ್ಗಕ್ಕೆ ದಾರಿಯಾಗಲಿದೆ ಎಂದರು.
ಬೆಂಗಳೂರು ರಾಮಕೃಷ್ಣ ಆಶ್ರಮದ ಸ್ವಾಮಿ ಬೋದಸ್ವರೂಪಾನಂದಜೀ ಮಹಾರಾಜ್, ದಾವಣಗೆರೆ ರಾಮಕೃಷ್ಣ ಆಶ್ರಮದ ಸ್ವಾಮಿ ತ್ಯಾಗೀಶ್ವರಾನಂದಜಿ ಮಹಾರಾಜ್ , ಮಾತಾಜೀ ವಿವೇಕಮಯಿ  ಸಹ ಮಾತನಾಡಿ ವಿಜಯನಗರ ಒಂದು ಸಾಮ್ರಾಜ್ಯ ಕಟ್ಟಿ ಜಗತ್ತಿನಲ್ಲಿ ಮರೆಯದ ಸಾಮ್ರಾಜ್ಯದ ಇಂದಿಗೂ ನೆನಪಾಗಿರುವಂತೆ ಮಾಡಿದ ಪುಣ್ಯ ಭೂಮಿ ಇಲ್ಲಿ ಆಧ್ಯಾತ್ಮಿಕ ಚಿಂತನೆ ಹೊಸ ಆಯಾಮಕ್ಕೆ ನಾಂದಿಯಾಗಲಿದೆ ಎಂದರು.
ಬೆಂಗಳೂರು ಶಾರದಾಸೇವಾಶ್ರಮದ ಸಹೋದರಿಯರಾದ ಚಂದ್ರಿಕಾ ಮತ್ತು ಸುಜಾತಾ ಭಗವನ್ನಾಮ ಸಂಕಿರ್ತನೆ ಪ್ರಸ್ತುತಪಡಿಸಿದರು, ಕೊಲ್ಕತ್ತಾ ರಾಮಕೃಷ್ಣ ಮಿಷನ್ ಆಶ್ರಮದ ಪೂಜ್ಯ ಸ್ವಾಮಿ ವಿನಿಶ್ಚಲಾನಂದಜೀ ವiಹಾರಾಜ್ ಹೊಸಪೇಟೆಯ ರಾಮಕೃಷ್ಣ ಗೀತಾಶ್ರಮದ ಸ್ವಾಮಿ ಸುವೇದಾನಂದಜೀ ಮಹಾರಾಜ್ ವೇದಿಕೆಯಲ್ಲಿದ್ದರು, ವಿದ್ಯಾಚೇತನ ಶಿಕ್ಷಣ ಸಂಸ್ಥೆಯ ಹನುಮಂತಪ್ಪ ಕಾರ್ಯಕ್ರಮ ನಿರ್ವಹಿಸಿದ್ದರು. ನಾಡಿನ ವಿವಿಧ ಭಾಗಗಳ ಯತಿಗಳು, ಮಾತೆಯರು ಹಾಗೂ ಆಧ್ಯಾತ್ಮಿಕ ಚಿಂತಕರು ಪಾಲ್ಗಂಡಿದ್ದರು.