ಪ್ರಗತಿಪರ ಶಿಕ್ಷಕರ ವೇದಿಕೆಯಿಂದ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳ ವಿತರಣೆ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜು.03 ತಾಲೂಕಿನ ಪಿಲ್ಲೋಬನಹಳ್ಳಿ  ಸರ್ಕಾರಿ ಕಿರಿಯ ಪ್ರಾಥಮಿಕ   ಶಾಲಾ ಮಕ್ಕಳಿಗೆ ಪ್ರಗತಿಪರ ಶಿಕ್ಷಕರ ವೇದಿಕೆಯಿಂದ ಲೇಖನ ಸಾಮಗ್ರಿ ವಿತರಣೆ ಮಾಡಲಾಯಿತು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ 65 ಮಕ್ಕಳಿಗೆ ಲೇಖನಾ ಸಾಮಗ್ರಿಗಳಾದ ಮಗ್ಗಿ ಪುಸ್ತಕ, ನೋಟು ಪುಸ್ತಕ ,ಪೆನ್ನು, ಪೆನ್ಸಿಲ್,  ರಬ್ಬರ್, ಮೆಂಡರು ಸ್ಕೇಲ್ ವಿತರಿಸಲಾಯಿತು.
ಪ್ರಗತಿಪರ ಶಿಕ್ಷಕರ ವೇದಿಕೆಯ ಮುಖಂಡರಾದ ಸಿವೈ ಮೋರ್ನಾಳ್ ಮಾತನಾಡಿ ಈ  ವರ್ಷ ತಾಲೂಕಿನ13 ವಲಯದ 13 ಶಾಲೆಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಗುವುದು.  ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಕೆ. ಮಲ್ಲಿಕಾರ್ಜುನ. ಪ್ರಾಥಮಿಕ ಶಾಲಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ. ಹುಸೇನ್ ಸಾಹೇಬ್ ಉಪಾಧ್ಯಕ್ಷರಾದ ಕಾಳೇಶ್ ನಾಯ್ಕ, ಮೆಟ್ರಿ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಬಸವರಾಜ, ಗುರುಭವನ ಸಮಿತಿಯ ಸದಸ್ಯರಾದ ಎಲ್. ನೇಮ್ಯಾ ನಾಯ್ಕ, ಯು. ರಾಮಕೃಷ್ಣ, ಬಿ ಷರೀಫ್ ಸಾಹೇಬ್ .ಉಪ್ಪಾರಗಟ್ಟಿ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ವಿ. ಶೇಖರ್ ಶಿಕ್ಷಕರಾದ ಜರೀನಾ,  ವೀರಭದ್ರಯ್ಯ, ಮಾದೂರು ಶಾಲೆಯ ಶಿಕ್ಷಕರಾದ ಸುರೇಶ್, ರೇಣುಕಮ್ಮ ಉಷಾರಾಣಿ, ಗಂಗಮ್ಮ, ವಿದ್ಯಾಶ್ರೀ, ದಶಮಾಪುರ ಪಿಕೆಎಮ್ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಎನ್. ಸುರೇಶ್, ದಶಮಾಪುರ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಸೋಮಕ್ಕ  ಶಿಕ್ಷಕರಾದ ಕವಿತಾ, ಕರಿಬಸಪ್ಪ ವೈ. ಸ್ವಾಮಿ, ಪಿಲ್ಲೋಬನಹಳ್ಳಿ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಸಿದ್ದೇಶ, ಶಿಕ್ಷಕಿ ಮುಬಿನಾ, ಶಿಕ್ಷಕರಾದ ಚಾರಿದುರ್ಗಪ್ಪ ,ಮುನೀರ್ ಸಾಬ್ ಊರಿನ ಮುಖಂಡರಾದ  ಮಹೇಶಪ್ಪ ಲೋಕೇಶ ಉಪಸ್ಥಿತರಿದ್ದರು.
ಎಸ್ ಡಿ ಎಂ ಸಿ ಅಧ್ಯಕ್ಷರಾದ .ಸಿ. ಮಲ್ಲಿಕಾರ್ಜುನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಶಾಲಾ ಮಕ್ಕಳು ಪ್ರಾರ್ಥಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ.ಟಿ.ಸೋಮಶೇಖರ ಕಾರ್ಯಕ್ರಮವನ್ನು ನಿರೂಪಿಸಿದರು.