ಹಬೋಹಳ್ಳಿ : ವಿದ್ಯುತ್ ಸ್ಪರ್ಶಿಸಿ ಯುವ ರೈತ ಸಾವು
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.03 ಪಟ್ಟಣದ ಹೊರವಲಯದ  ಜಮೀನಿನಲ್ಲಿ ವಿದ್ಯುತ್ ಸ್ಪರ್ಶಿಸಿ ಯುವ ರೈತ ಮೃತಪಟ್ಟಿದ್ದಾನೆ.
ಮೃತ ಯುವಕ ಅರಸಿಕೇರಿ  ಸಾಗರ್ (22) ತಮ್ಮ ಹೊಲದಲ್ಲಿರುವ ಬೋರವೆಲ್ ಗೆ  ಸಂಪರ್ಕಿಸಿದ್ದ  ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿ ಅಸುನಿಗಿದ್ದಾನೆ .
 ಜಮೀನಿನಲ್ಲಿ ಕೆಲಸ ಮಾಡುವಾಗ ನೀರು ಕುಡಿಯಲೆಂದು ಮೋಟಾರ್ ಸ್ಟಾರ್ಟ್ ಮಾಡಲು ಹೋದಾಗ ವಿದ್ಯುತ್ ತಗಲಿ ಸ್ಥಳದಲ್ಲಿ ಒದ್ದಾಡಿ ಮೃತ  ಪಟ್ಟಿರುತ್ತಾನೆ 
ಇದೇ ರೀತಿ ಒಂದು ತಿಂಗಳ ಹಿಂದೆ ತಾಲೂಕಿನ ವರಲಹಳ್ಳಿ  ಗ್ರಾಮದಲ್ಲಿ ನಡೆದ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿರುವುದು ದುರದೃಷ್ಟಕರ. ರೈತರು ವಿದ್ಯುತ್ ಬಗ್ಗೆ ಎಚ್ಚರಿಕೆಯಿಂದ ಇರುವುದು ಉತ್ತಮ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.
ಸ್ಥಳಕ್ಕೆ  ಜೆಸ್ಕಾಂ ಇಲಾಖೆಯ ಅಧಿಕಾರಿಗಳು ,, ಕಂದಾಯ ನಿರೀಕ್ಷಕ  ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.