ಜಂಗಮಶೆಟ್ಟಿ ರಂಗ ಪ್ರಶಸ್ತಿಗೆಹಂದ್ಯಾಳ್  ಪುರುಷೋತ್ತಮ ಆಯ್ಕೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.03:   ಕಲ್ಬುರ್ಗಿಯ  ರಂಗ ಸಂಗಮ ಕಲಾ ವೇದಿಕೆ ನೀಡುವ ರಾಜ್ಯಮಟ್ಟದ 11ನೇ ವರ್ಷದ ಎಸ್.ಬಿ.ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ರಂಗಪ್ರತಿಭೆ ಬಳ್ಳಾರಿ ಪುರುಷೋತ್ತಮ ಹಂದ್ಯಾಳ, ಸುಭದ್ರಾದೇವಿ,  ಹಾವೇರಿ ಜಿಲ್ಲೆಯ ಶಿಗ್ಗಾಂವದ ವೃತ್ತಿ ರಂಗಭೂಮಿಯ ನಟಿ ರಾಧಿಕಾ ಬೇವಿನಕಟ್ಟಿ ಆಯ್ಕೆಯಾಗಿದ್ದಾರೆ ಎಂದು ವೇದಿಕೆ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.
ಪ್ರಶಸ್ತಿಯು ತಲಾ 10 ಸಾವಿರ ರೂ. ನಗದು ಬಹುಮಾನ ಹೊಂದಿದೆ. ಜು.18ರಂದು ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
 ಗ್ರಾಮೀಣ ಪ್ರತಿಭೆ:
ಪುರುಷೋತ್ತಮ ಹಂದ್ಯಾಳ ಅವರು ಬಳ್ಳಾರಿ ತಾಲೂಕಿನ ಹಂದ್ಯಾಳದ ಗ್ರಾಮೀಣ ಪ್ರತಿಭೆ, ವೃತ್ತಿಯಲ್ಲಿ ಪತ್ರಿಕಾ ಛಾಯಾಗ್ರಾಹಕ. 30 ವರ್ಷದಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ. ಕುರುಕ್ಷೇತ್ರ, ಧನಿಕರ ದೌರ್ಜನ್ಯ, ಕರ್ತವ್ಯದ ಕಾಣಿಕೆ, ಮಹಿಮಾಪುರ, ಕುಂಕುಮ ತಂದ ಕೈಲಾಸ ಸೇರಿ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರಕ್ತರಾತ್ರಿ ನಾಟಕದಲ್ಲಿಯ ಶಕುನಿ ಪಾತ್ರದ ಅಭಿನಯಕ್ಕೆ ‘ಅಭಿನವ ಶಕುನಿ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಬಳ್ಳಾರಿಯ ಕಾರಾಗೃಹದ ಕೈದಿಗಳ ಮನಪರಿವರ್ತನೆಗಾಗಿ ನಾಟಕ ನಿರ್ದೇಶಿಸಿದ್ದರು. ಕರೊನಾ ಜಾಗೃತಿಗೆ ಕಿರುಚಿತ್ರ ನಿರ್ಮಿಸಿದ್ದಾರೆ