ಡಾ.ಶೋಭಾರಾಣಿ ಬಳ್ಳಾರಿ ನೂತನ ಎಸ್ಪಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.03: ಇಲ್ಲಿನ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರನ್ನು ಸರ್ಕಾರ ವರ್ಗವಾಣೆ ಮಾಡಿ, ಆ ಜಾಗಕ್ಕೆ  ಡಾ.ಶೋಭಾರಾಣಿ ವಿ.ಜೆ.ಅವರನ್ನು ವರ್ಗ ಮಾಡಿದೆ.
ಶೋಭಾರಣಿ ಅವರು ಸಧ್ಯ ಬೆಂಗಳೂರಿನ ಬೃಹತ್ ಮಾಹಾನಗರ ಪಾಲಿಕೆಯ ಕಾರ್ಯತಂಡ ಹೆಚ್ಚುವರಿ ಡಿಜಿಪಿಯಾಗಿದ್ದರು.
2008 ರಲ್ಲಿ ಕೆಎಸ್ಪಿಎಸ್ ಉತ್ತೀರ್ಣರಾಗಿ ಬೆಂಗಳೂರಿನಲ್ಲಿ ಸಂಚಾರಿ ವಿಭಾಗದ ಡಿಸಿಪಿಯಾಗಿ ಕರ್ತವ್ಯಕ್ಕೆ ಸೇರದವರು, ನಂತರ ತುಮಕೂರಿನಲ್ಲಿ ಅಡಿಷನ್ ಎಸ್ಪಿಯಾಗಿ ಬಳಿಕ ಹಾಸನದಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ.
ರಂಜಿತ್ ಕುಮಾರ್ ಬಂಡಾರು ಅವರಿಗೆ ವರ್ಗಾವಣೆಯ ಸ್ಥಳವನ್ನು ಇನ್ನೂ ತೋರಿಸಿಲ್ಲ.