ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಸನ್ನದ್ಧರಾಗಿ
ನವಲಗುಂದ,ಜು.3: : ಪಟ್ಟಣದ ಶಿಕ್ಷಕರ ಸಹಕಾರಿ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕುಗಳ ಸರಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಫ್ರೌಢ ಶಾಲೆಗಳ ಪ್ರಧಾನ ಗುರುಗಳ ಸಭೆಯನ್ನು ಶಾಸಕ ಎನ್ ಎಚ್ ಕೋನರಡ್ಡಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಸರಕಾರ ಬದ್ದವಾಗಿದ್ದು ಅಗತ್ಯ ಸಂಪನ್ಮೂಲಗಳನ್ನು ಬಳಸಿ ಶೇ.100ರಷ್ಟು ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಸನ್ನದ್ಧರಾಗಬೇಕೆಂದರುನವಲಗುಂದ ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಗುರುಭವನ ಕಟ್ಟಣಡ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲು ಬದ್ದರಾಗಿದ್ದು,ಶಿಕ್ಷಕ ಸಂಘಟನೆಗಳು ಈ ಕುರಿತಾಗಿ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿದರು.
ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್,ಎಸ್,ಕೆಳದಿಮಠ ಮಾತನಾಡಿ ಧಾರವಾಡ ಜಿಲ್ಲೆ ಶಿಕ್ಷಣ ಕಾಶಿ ಎಂಬ ಬಿರುದು ಪಡೆದಿದ್ದು ಶಿಕ್ಷಕ ವರ್ಗ ಮಕ್ಕಳನ್ನು ಶೈಕ್ಷಣಿಕವಾಗಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆಂದು ತಿಳಿಸಿದರು.
ನಂತರ ಶಾಸಕರು ಪ್ರಧಾನ ಗುರುಗಳೊಂದಿಗೆ ಸಂವಾದ ನಡೆಸಿ ಶಿಕ್ಷಕರಿಂದ ಅಹವಾಲು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ 22-23ನೇ ಸಾಲಿನ ಎಸ್,ಎಸ್,ಎಲ್,ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳಾದ ಬಸವರಡ್ಡಿ ಚಾಕಲಬ್ಬಿ,ಮಂಜುಳಾ ಖನ್ನೂರ ಹಾಗೂ ಆಶಾ ಪಾಟೀಲ್ ಅವರಿಗೆ ಕರ್ನಾಟಕ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಪೆÇ್ರೀತ್ಸಾಹದಾಯಕವಾಗಿ ನೀಡಿದ ಲ್ಯಾಪ್ ಟಾಪ್‍ಗಳನ್ನು ವಿತರಿಸಲಾಯಿತು.
ಕ್ಷೇತ್ರ ಶೀಕ್ಷಣಾಧಿಕಾರಿ ಎಸ್,ಬಿ,ಮಲ್ಲಾಡದ,ಪುರಸಭೆ ಮಾಜಿ ಅಧ್ಯಕ್ಷ ಮೋದಿನಸಾಬ ಶಿರೂರ,ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು,ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶ್ರೀನಿವಾಸ ಅಮಾತ್ಯನವರ ನಿರೂಪಿಸಿದರು. ವೆಂಕಟೇಶ ಭಜಂತ್ರಿ ವಂದಿಸಿದರು.