ಕಾನೂನು ಅರಿವು ಅಗತ್ಯ
ನವಲಗುಂದ,ಜು.3ಪ್ರತಿನಿತ್ಯ ವಿದ್ಯಾರ್ಥಿಗಳು ಪತ್ರಿಕೆಯನ್ನು ಓದುವದರಿಂದ ಪ್ರಚಲಿತ ಘಟನೆಗಳ ಕುರಿತು ಕಾನೂನು ಅರಿವು ಪಡೆಯುವುದು ಅಗತ್ಯವೆಂದು ಉಮ್ಮತಿ ಫೌಂಡೇಶನ್ ಸಂಸ್ಥಾಪಕ ಝಮಿರಅಹಮ್ಮದ್ ಕಾಗದಗಾರ ಅಭಿಪ್ರಾಯ ಪಟ್ಟರು.
ಅವರು ನಗರದ ಸರಕಾರಿ ಉರ್ದು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಪೆÇೀಕ್ಸೋ ಕಾಯ್ದೆ 2012 ಹಾಗೂ ಬಾಲ್ಯ ವಿವಾಹ ನಿಷೇದ ಕಾಯ್ದೆ 2006 ಕಾನೂನು ಅರಿವು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ರಿಯಾಜಅಹಮ್ಮದ ಪೀರಜಾದೆ ಹಾಗೂ ಮಾಬುಸಾಬ ಯರಗುಪ್ಪಿ ಮಾತನಾಡಿ ಪತ್ರಿಕೆಗಳು ಎಲ್ಲ ರಂಗಕ್ಕೆ ಸಂಬಂಧಪಟ್ಟ ವಿಷಯಗಳನ್ನು ಹೊತ್ತು ತರುವಂತಹ ಜ್ಞಾನದ ಕಣಜವಾಗಿದೆ, ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವುದರ ಮೂಲಕ ಜ್ಞಾನ ಭಂಡಾರದ ಜೊತೆ ಪ್ರಚಲಿತ ವಿದ್ಯಮಾನಗಳ ಕಾನೂನು ಅರಿವು ಹೆಚ್ಚಿಸಿಕೊಳ್ಳಬಹುದು ಎಂದರು.
ಪ್ರಧಾನಗುರುಗಳಾದ ದ್ಯಾಮನಗೌಡ ಹುಲ್ಲೂರ ಮಾತನಾಡಿ ಪ್ರತಿಯೊಬ್ಬ ಪ್ರಜೆಗೂ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಅಗತ್ಯತೆ ಪ್ರಸ್ತುತ ಸಂದರ್ಭದಲ್ಲಿ ಅವಶ್ಯವಿದೆ, ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅಳವಡಿಸಲಾಗಿದೆ. ಜೀವನದಲ್ಲಿ ಯಾವುದೇ ಅಡೆತಡೆಯಿಲ್ಲದೇ ನೆಮ್ಮದಿಯಿಂದ ಸಾಗಲು ಅಲ್ಪ ಪ್ರಮಾಣದಲ್ಲಾದರೂ ಕಾನೂನು ಕುರಿತು ತಿಳಿದುಕೊಳ್ಳಬೇಕು ಎಂದರು.
ಇದೆ ವೇಳೆ ಝಮೀರಅಹಮ್ಮದ ಕಾಗದಗಾರ ಅವರನ್ನು ಶಾಲೆವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಖಾಜಾಹುಸೇನ್ ಮುಲ್ಲಾಹಂಚಿನಾಳ, ಅಬ್ಬಾಸಅಲಿ ದೇವರಿಡು, ದಾವಲಸಾಬ್ ನಾಸಿಪುಡಿ, ಅಬ್ದುಲಖಾದರ್ ಕುನ್ನಿಬಾವಿ, ರಿಯಾಜಅಹ್ಮದ ನಾಶಿಪುಡಿ, ಬಾಬುಷಾ ಮಕಾಂದಾರ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.