ಜಾತ್ರಾ ಮಹೋತ್ಸವ ಸಂಪನ್ನ
ಬೈಲಹೊಂಗಲ,ಜು.3: ಪಟ್ಟಣದ ಇತಿಹಾಸ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಶ್ರೀ ದೊಡ್ಡಾದೇವರ ಜಾತ್ರಾ ಮಹೋತ್ಸವ ಸೋಮವಾರ ಸಂಪನ್ನಗೊಂಡಿತು.
ಜಾತ್ರಾ ಮಹೋತ್ಸವದ ಪ್ರಯುಕ್ತ ವರ್ಷ ಪದ್ಧತಿಯಂತೆ ಮಳೆರಾಯನ ಕೃಪೆಗಾಗಿ ಮಹಿಳೆಯರಿಂದ 5 ದಿನಗಳ ಕಾಲ ಮಳೆರಾಯನ ಪದಗಳು, ಭಜನಾ ಮಂಡಳಿಯಿಂದ ಒಂದು ದಿವಸ ನಿಂತುಕೊಂಡೆ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಾತ್ರಾ ಸಮಾರೋಪದ ಪ್ರಯುಕ್ತ ಬೆಳಿಗ್ಗೆ ದೊಡ್ಡಾದೇವರಿಗೆ ರುದ್ರಾಭಿಷೇಕ, ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು.
ಮದ್ಯಾಹ್ನ ಶ್ರೀ ದೊಡ್ಡಾದೇವರಿಗೆ ಮಹಾ ಮಂಗಳಾರತಿಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಮಂಗಳ ಹಾಡಲಾಯಿತು.
ಮಾಜಿ ಶಾಸಕರುಗಳಾದ ಡಾ. ವಿಶ್ವನಾಥ ಪಾಟೀಲ, ಮಹಾಂತೇಶ ದೊಡ್ಡಗೌಡರ, ಪುರಸಭೆ ಮುಖ್ಯಧಿಕಾರಿ ವಿರೇಶ ಹಸಬಿ ಸೇರಿದಂತೆ ಗಣ್ಯಾತಿಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದರು.
ವೇ.ಮೂ. ಮಹಾಂತಯ್ಯಾ ತೆಗ್ಗಿನಮಠ ಶಾಸ್ತ್ರಿಗಳು, ವೇ.ಮೂ. ಸದಾಶಿವಯ್ಯಾ ತೆಗ್ಗಿನಮಠ ಶಾಸ್ತ್ರಿಗಳಿಂದ ಅಲಂಕಾರಗೊಂಡ ಶ್ರೀ ದೊಡ್ಡಾದೇವರ ದರುಶನವನ್ನು ಪಡೆದ ಭಕ್ತರು ಪ್ರಸಾದ ಸವಿದು ಧನ್ಯತಾ ಭಾವ ಹೊಂದಿದರು.
ಇದೇ ಸಂದರ್ಭದಲ್ಲಿ ದೇವಸ್ಥಾನ ಗರ್ಭ ಗುಡಿಗೆ ಟೈಲ್ಸ್ ಜೋಡಣೆ ಸೇವೆ ಸಲ್ಲಿಸಿದ ಶಂಕರ ಬೋಳನ್ನವರ ದಂಪತಿಯನ್ನು ಸನ್ಮಾನಿಸಲಾಯಿತು.
ಮುಖಂಡರಾದ ಪಾಂಡಪ್ಪ ಇಂಚಲ,
ಶಿವಪ್ಪಮತ್ತಿಕೊಪ್ಪ,
ಶಿವಪ್ಪ ಲಿಂಬೆನ್ನವರ,
ಬಸಪ್ಪ ಜಂಬಗಿ,
ಶ್ರೀಕಾಂತ ಮತ್ತಿಕೊಪ್ಪ, ಕುಮಾರಗೌಡ ಪಾಟೀಲ,ಉಳವಪ್ಪ ಬಡ್ಡಿಮನಿ,
ಅದೃಷ ಹುಚ್ಚನವರ,
ಮಹಾಂತೇಶ ಮಲ್ಲಾಪುರ,ಸೋಮನಾಥ ಸೊಪ್ಪಿಮಠ,ಬಾಬು ಮಿರಜಕರ,ಕಿರಣ ಶಿರವಂತಿ
ಅರುಣ ತುರಮರಿ ಸೇರಿದಂತೆ ಶ್ರೀ ದೊಡ್ಡಾ ದೇವರ ಭಜನಾ ಮಂಡಳಿಯ ಸರ್ವ ಸದಸ್ಯರು ಜಾತ್ರಾ ಮಹೋತ್ಸವ ಯಶಸ್ವಿಯಾಗಲು ಶ್ರಮಿಸಿದರು.