ಸಾಹಿತ್ಯ ಜನರ ಭಾವನೆಗಳನ್ನು ಬೆಸೆಯುವ ಸಂಪರ್ಕ ಕೊಂಡಿಯಾಗಬೇಕು: ಶಂಕರ ಬೈಚಬಾಳ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.3:ಸಾಹಿತ್ಯದ ಕೃತಿಗಳು ಒಂದಕ್ಕೊಂದು ರಾಜ್ಯಗಳ ಸಂಸ್ಕøತಿ ಬೆಸೆಯುವ ಸಾಧನ ಸಂಪರ್ಕಗಳಾಗಿ ಅಲ್ಲಿಯ ಜನರ ಭಾವನೆಗಳಿಗೆ ಸಂಪರ್ಕವನ್ನು ಏರ್ಪಡಿಸುವ ಕೊಂಡಿಗಳಾಗಬೇಕು. ಇಂತಹ ಸಾಹಿತ್ಯದಿಂದ ಜನರ ಹೃದಯ ಅರಳುತ್ತದೆ. ಮನಸ್ಸು ಪಾವಿತ್ರತೆಗೊಳ್ಳುತ್ತದೆ. ಗಡಿ ಭಾಗದ ಜನರನ್ನು ಈ ಕೃತಿ ಬೆಸೆದು ಅವರ ಬದುಕನ್ನು ಘÀಟ್ಟಿಕೊಳಿಸುತ್ತವೆ. ಅದಕ್ಕಾಗಿ ಸಾಹಿತ್ಯದ ಕೃತಿಗಳು ರಾಜ್ಯ-ರಾಜ್ಯಗಳ ನಡುವೆ ಮಾಧ್ಯಮಗಳಾಗಿ ಬರಬೇಕು ಎಂದು ಸಾಹಿತಿ ಶಂಕರ ಬೈಚಬಾಳ ಹೇಳಿದರು.
ಬೆಳಗಾವಿ ಶಿವಾ ಆಫ್‍ಸೆಟ್ ಪ್ರಿಂಟರ್ಸ್ ಮತ್ತು ಪಬ್ಲಿಕೇಶನ ಆಶ್ರಯದಲ್ಲಿ ಐಶ್ವರ್ಯ ನಗರದ ಪಾರ್ವತಿ ಅಂಬಲಿ ಅವರ ಮನೆಯಲ್ಲಿ ನಡೆದ ಅನ್ನದಾತ ಕೃತಿ ವಿಮರ್ಶೆ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಡಾ. ಸುನೀಲ ಪರೀಟ್ ಅವರ ಅನ್ನದಾತ ಕೃತಿಯ ಕುರಿತು ಮಡಿವಾಳಮ್ಮ ಪೂಜಾರಿ ಮಾತನಾಡುತ್ತ, ಸಾಹಿತ್ಯವು ಯಾವುದೇ ಒಂದು ಪ್ರದೇಶಕ್ಕೆ ಸೀಮಿತಗೊಳ್ಳದೆ ಮಹಾರಾಷ್ಟ್ರವೆ ಇರಲಿ ಅಥವಾ ಕರ್ನಾಟಕ ರಾಜ್ಯವೆ ಇರಲಿ ಎಲ್ಲಾ ಪ್ರದೇಶವನ್ನು ಬೆಸೆಯುವ ಸಂಹನವಾಗಬೇಕು ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಶರಣ ಮಾತೆ ಪಾರ್ವತಿ ಅಂಬಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಕನ್ನಡ ಭಾಷೆ ಎಂದರೆ ಸುಲಿದ ಬಾಳೆಹಣ್ಣಿನಂತೆ ಸರಳವಾದ ಭಾಷೆಯಾಗಿದೆ ಎಂದು ಹೇಳಿದರು.
ಕೃತಿಯ ಕರ್ತೃ ಡಾ. ಸುನೀಲ ಪರೀಟ ಅವರು ಮಾತನಾಡುತ್ತ ಸಾಹಿತ್ಯವು ಇಂದು ಸಂಕಟಕ್ಕೆ ಸಿಲುಕಿದ ಕ್ಷೇತ್ರವಾಗಿದೆ. ಓದುವವರ ಕೊರತೆಯನ್ನು ಅದು ಎದುರಿಸುತ್ತಿದೆ. ಅದಕ್ಕೆ ಜೀವ ತುಂಬುವ ಅವಶ್ಯಕತೆಯಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಗರಾಜ ಅಂಗಡಿ, ಜಯಪ್ರಕಾಶ ಅಂಬಲಿ, ಜ್ಯೋತಿ ಅಂಗಡಿ, ಸಿದ್ದರಾಮ ಬಿರಾದಾರ, ರಾಜಶೇಖರ ಸಾಸಟ್ಟಿ, ಶೋಭಾ ಕಟ್ಟಿ ಮುಂತಾದವರು ಇದ್ದರು.