ಪರಿಸರ ಉಳಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ
ಚನ್ನಮ್ಮನ ಕಿತ್ತೂರು,ಜು 3: ನಮ್ಮ ಪರಿಸರ ಉಳಿಸಲು ಈಗಲೇ ನಾವು ಎಚ್ಚೇತ್ತುಕೊಳ್ಳದಿದ್ದರೆ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವಕೀಲರ ಸಂಘದ ಅಧ್ಯಕ್ಷ ನ್ಯಾಯವಾದಿ ಶಿವಾನಂದ ಬೋಗೂರ ಹೇಳಿದರು.
ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ತಾಲೂಕಾಡಳಿತ ಸೌಧದ ಪಕ್ಕದಲ್ಲಿ ಹೊಸಕೋರ್ಟ ನಿವೇಶನದ ಜಾಗೆಯಲ್ಲಿ ವನಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇವಲ ಗಿಡ-ಮರ ಬೆಳೆಸುವುದಷ್ಟೇ ಅಲ್ಲದೇ ನಮ್ಮ ಸುತ್ತಮುತ್ತಲಿನ ವಾತಾವರಣ ಕೆಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ.
ಪ್ಲಾಸ್ಟಿಕ್‍ನಂತಹ ವಿಷಕಾರಿ ವಸ್ತುಗಳು ಪರಿಸರವನ್ನು ಹಾಳು ಮಾಡುತ್ತಿವೆ. ನೀರುನ್ನು ಉಳಿಸುವುದು. ಗಾಳಿ ಮಲೀನವಾಗದಂತೆ ನೋಡಿಕೊಳ್ಳುವುದು ಮತ್ತು ಪರಿಸರ ಕಾಪಾಡುವುದು ನಮ್ಮ ಕರ್ತವ್ಯ. ಪರಿಸರ ನಾಶದಿಂದ ದುಷ್ಟಪರಿಣಾಮವನ್ನು ಎದುರಿಸುತ್ತಿದ್ದೇವೆ ಋತುಮಾನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸಕಾಲಕ್ಕೆ ಮಳೆ ಬಾರದೇ ಅತಿವೃಷ್ಟಿ-ಅನಾವೃಷ್ಠಿವುಂಟಾಗುತ್ತಿವೆ. ಹಾಗಾಗಿ ಆದಷ್ಟು ಬೇಗ ಜಾಗೃತರಾಗುವುದು ಅತ್ಯವಶ್ಯ ಎಂದರು.
ಈ ವೇಳೆ ದಿವಾನಿ ಹಾಗೂ ಜೆಎಂಎಫ್‍ಸಿ ನ್ಯಾಯಾಧೀಶರಾದ ಪರಹಾಬೇಗಂ ಸೈಯದ್ ಇವರು ಸಭೆ ಅಧ್ಯಕ್ಷತೆವಹಿಸಿದ್ದರು. ಅರಣ್ಯ ಅಧಿಕಾರಿ ಸಂಜೀವ ಮಗದುಮ, ಉಪಾಧ್ಯಕ್ಷ ಬಿ.ಬಿ.ಹಿರೇಮಠ, ಕಾರ್ಯದರ್ಶಿ ಪಿ.ಬಿ.ತಳವಾರ, ಲೋಕೋಪಯೋಗಿ ಇಲಾಖೆ ಎಇಇ ಸಂಜೀವ ಮಿರಜಕರ, ಪಿಡಬ್ಲೂಡಿ ವ್ಯವಸ್ಥಾಪಕ ಶ್ರೀಧರ ಪೂಜಾರಿ, ನ್ಯಾಯವಾದಿಗಳಾದ ಡಿ.ಆರ್‍ಹವಾಲ್ದಾರ್, ಎನ್.ಬಿ.ಚೌಡಣ್ಣವರ, ಎಂ.ಎಸ್.ಪಾಟೀಲ, ಎನ್,ಏಮರೇದ, ಕೆ.ಎನ್.ಸರದಾರ, ಬಿ.ಕೆ.ಸವದತ್ತಿ ಮತ್ತಿತರರು ಇದ್ದರು.