ಗ್ರಾಪಂಗೆ ಭೇಟಿ: ಪರಿಶೀಲನೆ
ಚನ್ನಮ್ಮನ ಕಿತ್ತೂರು,ಜು3: ಸಾರ್ವಜನಿಕರ, ಕೂಲಿಕಾರ್ಮಿಕರ, ರೈತರ, ಹಿತ ಕಾಪಾಡುವಲ್ಲಿ ಗ್ರಾಪಂ ಸದಸ್ಯರು ಅಧಿಕಾರಿಗಳು ಮುತವರ್ಜಿವಹಿಸಿ ಸ್ಪಂದಿಸಬೇಕೇಂದು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಸಮೀಪದ ಖಾನಾಪೂರ ತಾಲೂಕಿನ ಗಂದಿಗವಾಡ ಗ್ರಾಮದ ಗ್ರಾಪಂಗೆ ಚುನಾವಣೆಯಲ್ಲಿ ಆಯ್ಕೆಯಾದ ಮೊದಲ ಬಾರಿಗೆ ಭೇಟಿ ನೀಡಿ ದಾಖಲೆಯನ್ನು ಪರಿಶೀಲಿಸಿ ತಾಲೂಕ ಮಟ್ಟದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿ, ಗ್ರಾಮದಲ್ಲಿ ಪಿಡಬ್ಲೂಡಿ ವ್ಯಾಪ್ತಿಗೆ ಒಳಪಡುವ ರಸ್ತೆಗಳು ತಗ್ಗು-ಗುಂಡಿಗಳು ಕಂಡರೆ ಗ್ರಾಪಂಗಳ ಅಲ್ಪ-ಸ್ವಲ್ಪ ಖರ್ಚಿನಿಂದ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕು. ಗ್ರಾಮದಲ್ಲಿ, ಶಾಲೆಗಳಲ್ಲಿ, ನೀರಿನ ಕೊರತೆಯಾಗಬಾರದು ಶುದ್ಧ ನೀರು ಪೂರೈಕೆಯಾಗಬೇಕು. ಮಲೇರಿಯಾ ಆವರಿಸದಂತೆ ಗಮನಹರಿಸಿ ಗ್ರಾಮ ಶುಚಿಗೊಳಿಸಬೇಕು ಎಂದು ಖಡಕ್ಕಾಗಿ ಹೇಳಿದರು.
ಪಂಚಾಯತಿ ವ್ಯಾಪ್ತಿಯ ಎಲ್ಲ ಕೆಲಸಗಳ ಕಾರ್ಯ ಯೋಜನೆ ಮಾಡಿಕೊಡಿ ಎಂದು ಪಿಡಿಓ ಅವರಿಗೆ ಸೂಚಿಸಿದರು. ಮುಖ್ಯಮಂತ್ರಿ ಹಾಗೂ ಪಂಚಾಯತರಾಜ್ಯ ಸಚಿವರ ಜೊತೆಗೆ ಚರ್ಚಿಸಿ ಸರಕಾರದಿಂದ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದರು.
ಅಧಿಕಾರಿಗಳು ಪದೇಪದೇ ಗ್ರಾಪಂಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆಗಳ ಆಲಿಸಿ ಸರಕಾರಿ ಯೋಜನೆಗಳನ್ನು ಜನರಿಗೆ ಸರಿಯಾಗಿ ತಲುಪಿಸಬೇಕು. ಅಲ್ಲಿ ಲೋಪದೋಷ ಕಂಡುಬಂದರೆ ಅಧಿಕಾರಿಗಳ ಮೇಲೆ ನಿರ್ದಾಕ್ಷಣ್ಯದಿಂದ ಕ್ರಮ ಕೈಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಗ್ರಾಪಂ ಅಧ್ಯಕ್ಷ ದೇಸಾಯಿ ಗಾಳಿ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಈ ವೇಳೆ ತಹಶೀಲ್ದಾರ ಪ್ರಕಾಶ ಗಾಯಕ್ಕವಾಡ, ತಾಪಂ ಏಡಿ, ರೂಪಾಲಿ ಬಡಕುಂದರಿ, ಪಿqಬ್ಲೂಡಿ ಬಿಇಓ, ಉಪಾಧ್ಯಕ್ಷ ಲಕ್ಷ್ಮೀ ಕಮತಗಿ, ಕಾಯದರ್ಶಿ ಸಂತೋಷ ತುಕ್ಕಪ್ಪನವರ, ಕ್ಲರ್ಕ ರಾಘು ಪರಮಾಜ, ಸದಸ್ಯರುಗಳಾದ ಯಲ್ಲಪ್ಪಾ ಮೇದಾರ, ಸಂಜೀವ ಫಂಡಿ, ಮಹಾವೀರ ಹುಲಿಕವಿ, ವಿಜಯ ಕುಲಕರ್ಣಿ ಮಹಾವೀರ ಬಸ್ತವಾಡ, ಸಾವಿತ್ರಿ ಗಾಣಗಿ, ಭಗವಂತ ಬಡಿಗೇರ, ಅಣ್ಣಪ್ಪಾ ನೀರಜಕರ, ರಾಮನಗೌಡ ಪಾಟೀಲ, ಸೇರಿದಂತೆ ಗ್ರಾಪಂ ಸಿಬ್ಬಂದಿ ಸಾರ್ವಜನಿಕರಿದ್ದರು.