ಪ್ರವೃತ್ತಿಯಲ್ಲಿ ತೊಡಗಿದಾದ ನಿವೃತ್ತಿ ಬದುಕು ಉಲ್ಲಾಸ
ಗುಳೇದಗುಡ್ಡ,ಜು3: ವೃತ್ತಿ ಬದುಕಿನಿಂದ ನಿವೃತ್ತರಾದವರು ಮನೆಯಲ್ಲಿ ಕೂಡದೇ ಯಾವುದಾದರೂ ಪ್ರವೃತ್ತಿಯಲ್ಲಿ ತೊಡಗಿಕೊಂಡಾಗ ನಿವೃತ್ತರ ಬದುಕು ಉಲ್ಲಾಸಮಯವಾಗಿರುತ್ತದೆ. ನಿವೃತ್ತಿ ಬದುಕು ಭಾರವಾಗದಂತೆ ಸಂತೋಷವಾಗಿ ಕಳೆಯಬೇಕು ಎಂದು ಸ್ಥಳೀಯ ಮರುಘಾಮಠದ ಶ್ರೀ ಕಾಶೀನಾಥ ಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಅಂಬಾಭವಾನಿ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಭಂಡಾರಿ ಕಾಲೇಜಿನ ಪ್ರಾಧ್ಯಾಪಕ ಆರ್.ವಿ. ಪೂಜೇರ ಅವರ ಸೇವಾನಿವೃತ್ತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಪ್ರಾಧ್ಯಾಪಕ ಪೂಜೇರ ಅವರು ಮೂವತ್ಮೂರು ವರ್ಷಗಳವರೆಗೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ ನಿವೃತ್ತರಾಗಿದ್ದು, ಅವರು ಮುಂದಿನ ಬದುಕು ಸುಂದರವಾಗಿರಲಿ ಎಂದು ಹಾರೈಸಿದರು.
ಅಮರೇಶ್ವರ ಮಠದ ಶ್ರೀ ನೀಲಕಂಠ ಶ್ರೀಗಳು ಸಾನಿಧ್ಯ ವಹಿಸಿದ್ದರು. ಜಂಗಮಸಮಾಜದ ಅಧ್ಯಕ್ಷ ಶಿವಾನಂದ ಮಳಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಸಿದ್ದಲಿಂಗಪ್ಪ ಬರಗುಂಡಿ, ಪುರುಷೋತ್ತಮ ಝಂವರ, ಜಗದೀಶ ಸೋನಿ, ಪಿ.ಬಿ. ಕಣವಿ, ಎಂ.ಎಸ್. ಪಾಟೀಲ, ಚಿದಾನಂದ ನಂದಾರ, ಗಂಗಾಧರಯ್ಯ ಹಿರೇಮಠ, ವಿದ್ಯಾ ಹಿರೇಮಠ, ಸರೋಜಾ ಪೂಜೇರ, ಡಾ. ಸಣ್ಣವೀರಣ್ಣ ದೊಡಮನಿ, ಎಂ.ಎನ್. ಕುಂಬಾರ, ಆರ್.ಎಸ್. ವಾಲಿ, ಐ.ಜೆ. ಬೆಳ್ಳಣ್ಣವರ ಮತ್ತಿತರರು ಇದ್ದರು.