ಸ್ಮರಣೋತ್ಸವ ಕಾರ್ಯಕ್ರಮ
ಗುಳೇದಗುಡ್ಡ,ಜು3: ಕತ್ತಲಲ್ಲಿ ಕಳೆದು ಹೋಗುತ್ತಿದ್ದ ಶರಣರ ವಚನಗಳನ್ನು ಹುಡುಕಿ, ಪ್ರಕಟಿಸುವುದಲ್ಲದೇ ವಚನಗಳ ಆಶಯದಂತೆ ಕಾಯಕ, ದಾಸೋಹ ಮೊದಲಾದ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬದುಕಿದ ಫಗು. ಹಳಕಟ್ಟಿಯವರು, ಈ ನಾಡು ಕಂಡ ಶ್ರೇಷ್ಠ ಸಂಶೋಧಕರು ಎಂದು ನಿವೃತ್ತ ಪ್ರಾಧ್ಯಾಪಕ ಪೆÇ್ರ. ಮಹಾದೇವ ನೀಲಕಂಠಮಠ ಹೇಳಿದರು.
ಅವರು ಪಟ್ಟಣದ ತಿಪ್ಪಾ ಅವರ ಮನೆಯಲ್ಲಿ ಬಸವಕೇಂದ್ರದ ವತಿಯಿಂದ ನಡೆದ ಸಾಪ್ತಾಹಿಕ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿಯವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ವಚನಗಳನ್ನು ಸಂಗ್ರಹಿಸಿ, ಸಂಪಾದಿಸಿ, ಪ್ರಸಾರ ಪಡಿಸುವದಲ್ಲದೇ ಶರಣರ ಮೂಲ ಆಶಯದಂತೆ ಸರಳ ಸಾರ್ಥಕ ಬದುಕು ಸಾಗಿಸಿದವರು ಫ.ಗು. ಹಳಕಟ್ಟಿಯವರು ಎಂದರು.
ಕಾರ್ಯಕ್ರಮದಲ್ಲಿ ಫ.ಗು. ಹಳಕಟ್ಟಿಯವರ ಭಾವಚಿತ್ರಕ್ಕೆ ಗೌರವ ಸಮರ್ಪಿಸಲಾಯಿತು. ಉಪನ್ಯಾಸಕ ಶ್ರೀಕಾಂತ ಗಡೇದ, ಚಿದಾನಂದಸಾ ಕಾಟವಾ ವಚನ ಚಿಂತನ ಮಾಡಿದರು. ನಿವೃತ್ತ ಪ್ರಾಚಾರ್ಯ ಸಿದ್ದಲಿಂಗಪ್ಪ ಬರಗುಂಡಿ, ರಾಚಣ್ಣ ಕೆರೂರ, ಪುತ್ರಪ್ಪ ಬೀಳಗಿ, ಮಹಾನಿಂಗಪ್ಪ ಕರನಂದಿ, ಪಾಂಡಪ್ಪ ಕಳಸಾ, ಅಶೋಕ ಸವದಿ, ಶಂಕರ ಸಣಪಾ, ಮುರಿಗೇಶ ಶೇಖಾ ಜಯಶ್ರೀ ಬರಗುಂಡಿ, ವಿಶಾಲಾಕ್ಷಿ ಗಾಳಿ. ದಾನಮ್ಮ ಕುಂದರಗಿ ಇದ್ದರು.