ವಿ.ಎಸ್.ಎಸ್.ಎನ್ ಅಧ್ಯಕ್ಷರಾಗಿ ಜಯಮ್ಮ ಆಯ್ಕೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.03: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಯಮ್ಮ ಆಯ್ಕೆಯಾದರು.
ಈ ಹಿಂದಿನ ಅಧ್ಯಕ್ಷರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅವಿರೋದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ವೆಂಕಟರಾಜೇಗೌಡ ಆಯ್ಕೆಯಾದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ರೇವಣ್ಣ, ಸತೀಶ್, ಪರಮೇಶ್, ಕಾಂತೇಗೌಡ, ವೆಂಕಟೇಶ್, ರೂಪಾ, ಚಿನ್ನಸೋಮಾಚಾರಿ, ನಾಗರಾಜು, ಸಂಘದ ಸಿಇಓ ಅರುಣ್ ಕುಮಾರ್, ಮೇಲ್ವಿಚಾರಕ ರಾಘವೇಂದ್ರ , ಮುಖಂಡರಾದ ಬಿ.ಸಿ.ರಮೇಶ್, ಪ್ರಸನ್ನ ಕುಮಾರ್, ಬಿ.ವಿ.ಮಾದವ.ಸಿಬ್ಬಂದಿಗಳಾದ ನಾಗರಾಜು, ಸುಧಾಕರ್, ಜವರೇಗೌಡ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದಗದು ಅಭಿನಂದಿಸಿದರು.