ಶಿಕ್ಷಣ, ನೀರು, ರಸ್ತೆ, ವಿದ್ಯುತ್‍ಗೆ ಹೆಚ್ಚಿನ ಒತ್ತು: ಸುನೀಲಗೌಡ
ಸಂಜೆವಾಣಿ ವಾರ್ತೆ,
ವಿಜಯಪುರ, ಜು.3: ನೀರು, ರಸ್ತೆ, ವಿದ್ಯುತ್ ಮತ್ತು ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಮಂಗಳವಾರ ತಿಕೋಟಾ ತಾಲ್ಲೂಕಿನ ಲೋಹಗಾಂವ, ಸೋಮದೇವರಹಟ್ಟಿ, ಬಾಬಾನಗರ ಮತ್ತು ಬಿಜ್ಜರಗಿಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಚಿವ ಎಂ. ಬಿ. ಪಾಟೀಲ ಅವರು ಕೈಗೊಂಡಿರುವ ನೀರಾವರಿ ಯೋಜನೆಗಳಿಂದಾಗಿ ಜಿಲ್ಲೆಯಲ್ಲಿ ನೀರಿನ ಬವಣೆ ತಪ್ಪಿದೆ. ಮುಖ್ಯ ರಸ್ತೆಯಿಂದ ಹಿಡಿದು ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನೂ ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಗುಣಮಟ್ಟದ ವಿದ್ಯುತ್ ಪೂರೈಸಲು ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಗ್ರಾಮೀಣ ಭಾಗದ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒಗದಿಸುವ ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಮೂಲಕ ರೈತರು ಮತ್ತು ಜನಸಾಮಾನ್ಯರ ಬಾಳು ಹಸನಾಗಲು ಶ್ರಮಿಸಲಾಗುತ್ತಿದೆ ಎಂದು ಅವರು ಹೇಳಿದರು.
ತಿಕೋಟಾ ತಾಲೂಕಿನ ಲೋಹಗಾಂವನಲ್ಲಿ ಕೆಎನ್‍ಎನ್‍ಎಲ್ ವತಿಯಿಂದ ರೂ. 3.60 ಕೋ. ವೆಚ್ಚದಲ್ಲಿ ಲೋಹಗಾಂವ ಪಶ್ಚಿಮ ಕಾಲುವೆ ಎಸ್ಕೇಪ್- ದಿಂದ ಲೋಹಗಾಂವ ನಾಲಾದಿಂದ ಹಳ್ಳದ ಚೂಟ್ ನಿರ್ಮಾಣ ಕಾಮಗಾರಿ, ಸೋಮದೇವರಹಟ್ಟಿಯಲ್ಲಿ ಸೋಮದೇವರಹಟ್ಟಿ ಕೆರೆಯಿಂದ ತಿಕೋಟಾ ಕೆರೆವರೆಗೆ ಕೆಎನ್‍ಎನ್‍ಎಲ್ ವತಿಯಿಂದ ನಿರ್ಮಿಸಲಾಗುತ್ತಿರುವ ರೂ. 3.81 ಕೋ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ, ಬಿಜ್ಜರಗಿಯಲ್ಲಿ ಕೆ.ಎನ್.ಎನ್.ಎಲ್ ವತಿಯಿಂದ ರೂ. 2 ಕೋ. ವೆಚ್ಚದ ಬಿಜ್ಜರಗಿ- ಸಿದ್ದನಾಥ ರಸ್ತೆ ಸುಧಾರಣೆಗೆ ಭೂಮಿ ಪೂಜೆ, ಬಾಬಾನಗರದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನ್ನು ಸುನೀಲಗೌಡ ಪಾಟೀಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ರಾಜುಗೌಡ ಪಾಟೀಲ, ಸಾಹೀರಾಬಾನು ಏಳ್ಳಾಪೂರ, ಅಶೋಕ ರುದ್ರಗೌಡರ, ಈರಣಗೌಡ ರುದ್ರಗೌಡರ, ಎಚ್. ಎಲ್. ಬಿದರಿ, ಅಮೋಗಿ ಪೂಜಾರಿ, ಅಪ್ಪಾರಾಯ ಬಗಲಿ, ದೀಪಿಕಾ ಬಿದರಿ, ತುಕ್ಕಪ್ಪ ಹಿರೇಕುರುಬರ, ಯಲ್ಲಾಲಿಂಗ ಹೊನವಾಡ, ಸುಭಾಷಗೌಡ ಪಾಟೀಲ, ಮಲ್ಲಿಕಾರ್ಜುನ ಲೋಣಿ, ಅಶೋಕ ರುದ್ರಗೌಡರ, ಜ್ಯೋತೆಪ್ಪ ಆಯತವಾಡ, ಅಶೋಕ ಬಿರಾದಾರ, ಎಕ್ಸಿಕ್ಯೂಟಿವ್ ಎಂಜಿನಿಯರ್ ಪ್ರವೀಣ ಹುಣಸಿಕಟ್ಟಿ, ಅಪ್ಪಾಲಾಲ ಚವ್ಹಾಣ, ಗುರು ಮಾಳಿ, ಶಾಂತಯ್ಯ ಮಠ, ಅರವಿಂದ ನಾಯಕ, ಸುಭಾಷಗೌಡ ಪಾಟೀಲ, ಮಲ್ಲಿಕಾರ್ಜುನ ಲೋಣಿ, ಜಯರಾಮ ಲಮಾಣಿ, ಬಾಬು ರೂಪಲ, ವಿಠ್ಠಲ ಪೂಜಾರಿ, ರಾಮು ಮಸಳಿ, ಶಂಕರ ಚನಗೊಂಡ, ಶ್ರೀಕಾಂತ ಭಜಂತ್ರಿ, ರಾಜಶೇಖರ ಸುಣಗಾರ ಮುಂತಾದವರು ಉಪಸ್ಥಿತರಿದ್ದರು.