ಶಾಲೆಯ ಮಕ್ಕಳ ಸಮಸ್ಯೆ ಆಲಿಸಿದ ಶಾಸಕ ದರ್ಶನ್
ಸಂಜೆವಾಣಿ ವಾರ್ತೆ
ನಂಜನಗೂಡು: ಜು.03:- ನಗರದ ನಗರ ಸಭೆಗೆ ಸೇರಿದ 6ನೇ ವಾರ್ಡಿನಲ್ಲಿ ನೂತನವಾಗಿ ನಿರ್ಮಿಸಿರುವ ನೀರಿನ ಘಟಕ ಶಾಸಕ ದರ್ಶನ್ ಧ್ರುವನಾರಾಯಣ್ ಉದ್ಘಾಟಿಸಿದರು.
ನಂತರ ನಗರದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಕ್ಕೆ ಭೇಟಿ ನೀಡಿ ಶಾಲೆಯ ಮೂಲಭೂತ ಸೌಕರ್ಯ ಬಗ್ಗೆ ಮತ್ತು ಶಾಲೆಯ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿದರು.
ನಂತರ ಮಾತನಾಡಿ ಮನುಷ್ಯ ಆರೋಗ್ಯವಾಗಿ ಇರಬೇಕಾದರೆ ಶುದ್ಧವಾದ ನೀರನ್ನು ಕುಡಿಯಬೇಕು ನೀರಿನ ಸಮಸ್ಯೆ ಯಾವುದೇ ವಾರ್ಡಿನಲ್ಲಿ ಆಗಬಾರದು ಪ್ರತಿಯೊಬ್ಬರು ಶುದ್ಧ ನೀರನ್ನು ಕುಡಿಯಬೇಕು ನಗರಸಭೆ ಸದಸ್ಯರಾದ ಗಾಯತ್ರಿ ಅವರು ಮನವಿ ಮೇರೆಗೆ ವಾರ್ಡಿನಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ ಅದನ್ನು ಎಲ್ಲರೂ ಕೂಡ ಕಾಪಾಡಿಕೊಂಡು ಶುದ್ಧ ನೀರನ್ನು ಕುಡಿದು ಆರೋಗ್ಯವಾಗಿ ಇರಬೇಕೆಂದು ತಿಳಿಸಿದರು.
ನಂತರ ನಗರದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳು ಮತ್ತು ಮೂಲಭೂತ ಸೌಕರ್ಯ ಸಮಸ್ಯೆ ಬಗ್ಗೆ ಸ್ಥಳ ಪರಿಶೀಲಿಸಿದರು ಶಾಸಕರ ಮುಂದೆ ಅಲ್ಲಿನ ಶಿಕ್ಷಕಿಯರು ಮತ್ತು ಸಿಬ್ಬಂದಿಗಳು ಶಾಲೆಗೆ ಬೇಕಾದಂತ ಮೂಲಭೂತ ಸೌಕರ್ಯಗಳ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು ಶಾಲೆಯ ಸುತ್ತ ಅತಿ ಎತ್ತರದ ಕಾಂಪೌಂಡ್ ನಿರ್ಮಾಣ ಹೆಚ್ಚಿನ ಕಂಪ್ಯೂಟರ್ ಹಾಗೂ ಈಗ ಬರುತ್ತಿರುವ ನೀರು ಸರಬರಾಜು ಸಾಲುವುದಿಲ್ಲ ಇನ್ನು ಹೆಚ್ಚಿನ ನೀರಿಗಾಗಿ ಬೋರ್ವೆಲ್ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯ ಬಗ್ಗೆ ತಿಳಿಸಿದರು ಆದಷ್ಟು ಬೇಗ ಮಾಡಿಕೊಡುವಂತೆ ಮನವಿ ಮಾಡಿದರು.
ಶಾಸಕರು ಶಾಲೆಯ ಹೊರಗಡೆ ಒಳಗಡೆ ಪರಿಶೀಲಿಸಿ ಮತ್ತು ವಿದ್ಯಾರ್ಥಿಗಳನ್ನು ಮಾತನಾಡಿಸಿ ನಂತರ ಮಾತನಾಡಿ ಈ ಶಾಲೆಯಲ್ಲಿ ಗುಲ್ಬರ್ಗ ಹಾವೇರಿ ಗುಂಡ್ಲುಪೇಟೆ ಇನ್ನಿತರ ಸ್ಥಳಗಳಿಂದ ಬಂದು ವಿದ್ಯಾರ್ಥಿಗಳು ಓದುತ್ತಿದ್ದಾರೆ ಇಲ್ಲಿ ಉತ್ತಮವಾದ ವಾತಾವರಣ ಇದೆ ಗುಣಮಟ್ಟದ ಶಿಕ್ಷಣ ನೀಡಬೇಕು ನೀವು ನೀಡುತ್ತಿರುವ ಮನವಿಯನ್ನು ಆದಷ್ಟು ಬೇಗ ನಿಮ್ಮ ಶಾಲೆಗೆ ಒದಗಿಸಿಕೊಡುತ್ತೇನೆ ನೀವುಗಳು ಕೂಡ ಬಂದಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರಿಗೆ ಯಾವುದೇ ರೀತಿಯ ಅಡೆತಡೆ ಇಲ್ಲದೆ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಡಬೇಕೆಂದರು ನೀವು ಕೊಟ್ಟಿರುವ ಮನವಿಯನ್ನು ಆದಷ್ಟು ಬೇಗ ಹೆಚ್ಚಿನ ಅನುದಾನದಿಂದ ನಿಮಗೆ ಬಗೆಹರಿಸಿಕೊಡುತ್ತೇನೆ ಎಂದರು.
ಸ್ಥಳದಲ್ಲಿಯೇ ನೀರಿನ ಸಮಸ್ಯೆಗೆ ನಗರಸಭೆ ಆಯುಕ್ತ ನಂಜುಂಡಸ್ವಾಮಿಗೆ ಫೆÇೀನ್ ಕಾಲ್ ಮೂಲಕ ಕರೆಸಿ ತಕ್ಷಣ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದರು ಸ್ಥಳಕ್ಕೆ ನಗರಸಭೆ ಆಯುಕ್ತ ನಂಜುಂಡಸ್ವಾಮಿ ಮತ್ತು ಇಂಜಿನಿಯರ್ ಕುಮಾರ್ ಸ್ಥಳಕ್ಕೆ ಆಗಮಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸುತ್ತಿದ್ದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭೆ ಆಯುಕ್ತ ನಂಜುಂಡಸ್ವಾಮಿ, ಬ್ಲಾಕ್ ಅಧ್ಯಕ್ಷರುಗಳಾದ ಕುರಹಟ್ಟಿ ಮಹೇಶ್, ಶಂಕರ್, ಸೋಮು, ರವಿ, ಗುರುಮಲ್ಲಪ್ಪ, ನಗರಸಭೆ ಸದಸ್ಯರಾದ ಗಾಯತ್ರಿ, ರೆಹನಾ ಭಾನು, ಸಿದ್ದೀಕ್, ಮಾದೇವಪ್ರಸಾದ್, ರವಿ ಸೇರಿದಂತೆ ಇತರರಿದ್ದರು.