ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ: ಜನ ಸಂಪರ್ಕ ಸಭೆ
ಸಂಜೆವಾಣಿ ವಾರ್ತೆ
ಹನೂರು ಜು 3 :- ಪಟ್ಟಣದ ಉಪ ವಿಭಾಗ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಛೇರಿ ಅವರಣದಲ್ಲಿ “ಜನ ಸಂಪರ್ಕ ಸಭೆ” ನಡೆಯಿತು. ಸಭೆಯಲ್ಲಿ ಸಾರ್ವಜನಿಕರಿಂದ ವಿದ್ಯುತ್ ಸಂಬಂಧಿಸಿದಂತೆ ಸಮಸ್ಯೆಗಳ ಕುರಿತು ಹದಿನೇಳು ದೂರುಗಳನ್ನು ಸಲ್ಲಿಸಿದ್ದಾರೆ.
ಸಭೆಯಲ್ಲಿ ವಿದ್ಯತ್ ತಂತಿಗಳು ಜೋತು ಬಿದ್ದಿರುವುದನ್ನು ಸರಿ ಪಡಿಸಿ ತೊಂದರೆ ಯಾಗದಂತೆ ಮುಂಜಾಗ್ರತೆ ವಹಿಸಬೇಕು. ರಾತ್ರಿ ವೇಳೆ 3 ಗಂಟೆ ವಿದ್ಯುತ್ ತೆಗೆದು ಹಾಕುತ್ತೀರಾ ಇದರಿಂದ ಕಾಡಂಚಿನ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಪಂಪ್ ಸೆಟ್ ಜಮೀನುಗಳಲ್ಲಿ ಕೆಟ್ಟು ಹೊದ ಟ್ರಾನ್ಸ್ ಫಾರ್ಮ್ ದುರಸ್ಥಿ ಪಡಿಸಿ ಅಥವಾ ಹೊಸದಾಗಿ ಅಳವಡಿಸಲು ದೂರು ನೀಡಿದ್ದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರು ದೂರಿದ್ದಾರೆ.
ಕಣ್ಣೂರು ಗ್ರಾಮದಲ್ಲಿ ಕಳೆದ 2 ವರ್ಷ ದಿಂದ ಟಿ.ಸಿ ಕೆಟ್ಟು ಹೋಗಿ ಕುಡಿಯುವ ನೀರಿಗೆ ತೊಂದರೆಯಾಗಿದೆ ಬಗ್ಗೆ ದೂರು ಸಲ್ಲಿಸಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಇದರಿಂದ ಗ್ರಾಮದಲ್ಲಿ ನೀರು ಸರಬರಾಜು ಮಾಡಲು ತೊಂದರೆಯಾಗಿದೆ. ಇನ್ನಾದರೂ ಹೊಸದಾಗಿ ಟ್ರಾನ್ಸ್ಫಾರಂ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದರೆ ನೀರು ಸರಬರಾಜು ಮಾಡಲು ಅನುಕೂಲವಾಗುವುದು ಎಂದು ದೂರು ನೀಡಿದರು.
ವಡಕೆ ಹಳ್ಳ ಗ್ರಾಮದ ಓಂ ಶಕ್ತಿ ಕಾಲೋನಿಯ ಪರಿಶಿಷ್ಟ ಜಾತಿಯ ಜನರ ಕಾಲೋನಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಿ ಹಾಗೂ ಎಂ ಟಿ ದೊಡ್ಡಿ ಗ್ರಾಮಕ್ಕೆ ಅಕ್ರಮ ಸಕ್ರಮದಡಿಯಲ್ಲಿ ಟಿ ಸಿ ಅಳವಡಿಸಿ ಕೊಡಿ ರಾತ್ರಿ ವೇಳೆಯಲ್ಲಿ ತೋಟಗಳಿಗೆ ಅಕ್ರಮ ಸಕ್ರಮ ದಡಿಯಲ್ಲಿ ನಿರಂತರ ಜ್ಯೋತಿ ಕಲ್ಪಿಸಿಕೊಡಿ ಎಂದು ದೂರು ಸಲ್ಲಿಸಿದರು.
ರೈತರ ಸಾರ್ವಜನಿಕರು ಅಹವಾಲು ಸ್ವೀಕರಿಸಿದ ಕಾರ್ಯಪಾಲಕ ಇಂಜಿನಿಯರ್ ತಬಸುಮಾ ಅಪ್ಸಾನು ಬಾನು ಅವರು ಮಾತನಾಡಿ.
ಕಳೆದ ಜನ ಸಂಪರ್ಕ ಸಭೆಯಲ್ಲಿ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ 17 ದೂರು ಬಂದಿದ್ದು, ನಮ್ಮ ಇಲಾಖೆಯ ಚೆಸ್ಕಾಂ ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಇಂದಿನ ಸಭೆಯಲ್ಲಿ ನೀಡಿರುವ ದೂರುಗಳ ಬಗ್ಗೆ ಕ್ರಮ ಕೈಗೊಂಡು ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಹನೂರು ತಾಲೂಕು ಕೇಂದ್ರ ಪಟ್ಟಣದ ಚೆಸ್ಕಾಂ ಇಲಾಖೆಗೆ ದಿನ ನಿತ್ಯ ದೂರುಗಳನ್ನು ಸಲ್ಲಿಸಲು ಬರುವ ಗ್ರಾಹಕರು ಸಾರ್ವಜನಿಕರು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸ್ಪಂದಿಸಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆಂದು ಎ.ಇ.ಇ ರಂಗಸ್ವಾಮಿ ಅವರ ಕಾರ್ಯ ವೈಖರಿಯ ಬಗ್ಗೆ ಸಭೆಯಲ್ಲಿ ಹಾಜರಿದ್ದರು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್, ಶಂಕರ್, ಸಹಾಯಕ ಇಂಜಿನಿಯರ್ ತಾಂತ್ರಿಕ ರಂಗಸ್ವಾಮಿ, ಸಹಾಯಕ ಇಂಜಿನಿಯರ್ ಆನಂದ್, ಲೆಕ್ಕಧಿಕಾರಿ ವಿನೋದ್ ಕುಮಾರ್, ರೈತ ಮುಖಂಡರು, ಸಾರ್ವಜನಿಕರು ಇದ್ದರು.