ಶಾಲೆ ಮೇಲ್ದರ್ಜೆಗೆರಿಸಲು ಒತ್ತಾಯ
ಕೋಲಾರಜು.೩:ನಂಗಲಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಡ ಶಾಲೆಗೆ ಮೇಲ್ದರ್ಜೆಗೆರಿಸಿ ೯ ಮತ್ತು ೧೦ ನೇ ತರಗತಿ ಮಾಡಿ ಪ್ರಾರಂಭ ಮಾಡಿ ಖಾಸಗಿ ಶಾಲೆಗಳ ಹಾವಳಿಯಿಂದ ಬಡ ರೈತ ಕೂಲಿಕಾರ್ಮಿಕರ ಮಕ್ಕಳ ಭವಿಷ್ಯ ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ಮಾಜಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್‌ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಹಿಂದಿನ ಬಿ.ಜೆ.ಪಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಮುಳಬಾಗಿಲು ಗಡಿ ಭಾಗದ ನಂಗಲಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಬೇಟಿ ನೀಡಿ ಕಟ್ಟಡದ ಅವ್ಯವಸ್ಥೆ ಮಕ್ಕಳ ಪರಿಸ್ಥಿತಿಯನ್ನು ನೋಡಿ ಎನ್.ಜಿ.ಒ ಸಂಸ್ಥೆಯಿಂದ ಗುಣಮಟ್ಟದ ಕಟ್ಟಡಕ್ಕೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಅದರಂತೆ ಶಾಲೆಯಲ್ಲಿ ೩೮೦ ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿರುವುದು ಸಂತೋಷಕರ ವಿಚಾರ ಎಂದು ೯ ಮತ್ತು ೧೦ ನೇ ತರಗತಿಗೆ ಅನುಮತಿ ನೀಡಿ ಸರ್ಕಾರಿ ಶಾಲೆಯನ್ನು ಉಳಿಸುತ್ತೇವೆಂಬ ಮಾತು ಕೊಟ್ಟ ತಾವುಗಳು ಸರ್ಕಾರ ಬದಲಾದ ನಂತರ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಆದರೆ ಅನುಮತಿ ಮಾತ್ರ ಸಿಗುತ್ತಿಲ್ಲ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ದೂರು ನೀಡಿದರು.
೧೦ ಸಾವಿರ ಜನಸಂಖ್ಯೆವುಳ್ಳ ಗಡಿಭಾಗಕ್ಕೆ ಹೊಂದಿಕೊಂಡಿರುವ ಸರ್ಕಾರಿ ಶಾಲೆ ಅನುಮತಿಯ ಕಡತ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಉಪ ನಿರ್ದೇಶಕರಿಗೆ ಉಪ ನಿರ್ದೇಶಕರಿಂದ ಡಯಟ್ ಪ್ರಾಂಶುಪಾಲರಿಗಿ ಇಲ್ಲಿಂದ ಸರ್ಕಾರದ ಶಿಕ್ಷಣ ಕಾರ್ಯದರ್ಶಿರವರ ಟೇಬಲ್ ಮೇಲೆ ಇರಬೇಕಾದ ಕಡತವನ್ನು ನಂಗಲಿಯಲ್ಲಿರುವ ಖಾಸಗಿ ಹಾಗೂ ಅನುದಾನಿತ ಶಾಲೆಗಳ ಮಾಲೀಕರು ತಮ್ಮ ಪ್ರಭಾವ ಬಳಸಿ ಕಡತವನ್ನೇ ಇಲ್ಲದಂತೆ ಮಾಡುವ ಹಂತಕ್ಕೆ ಹೋಗಿದೆ ಎಂದರೆ ಇನ್ನೂ ಯಾವ ಮಟ್ಟದಲ್ಲಿ ಸರ್ಕಾರಿ ಶಾಲೆ ಮುಚ್ಚಲು ಖಾಸಗಿ ಶಾಲೆಗಳು ಮುಂದಾಗಿದ್ದಾವೆಂದು ಚರ್ಚಿಸಬೇಕಾದ ವಿಚಾರವಾಗಿದೆ ಎಂದರು.
ನಂಗಲಿ ಕಿಶೋರ್, ಧರ್ಮ, ಅಜಯ್, ದೇವ, ನಾಗೇಶ್, ನಂದನ್ ಗ್ರಾಮಸ್ಥರು ಉಪಸ್ಥಿತರಿದ್ದರು.