ಎಸ್‍ಬಿಐನ ನೂತನ ಮುಖ್ಯ ವ್ಯವಸ್ಥಾಪಕರಾಗಿ ನೇಮಕ
ಸಂಜೆವಾಣಿ ವಾರ್ತೆ
ಹನೂರು ಜು 3 :- ತಾಲ್ಲೂಕಿನ ಮಾರ್ಟಳ್ಳಿ ಮೂಲದ ಶ್ರೀ ಲೂಯಿಸ್ ರೊಸಾರಿಯೊ ರವರು ಚಾಮರಾಜನಗರ ಎಸ್.ಬಿ.ಐ.ನ ಪ್ರಾದೇಶಿಕ ಮುಖ್ಯ ವ್ಯವಸ್ಥಾಪಕರಾಗಿ (ಕ್ರೆಡಿಟ್ ಮತ್ತು ಎನ್.ಪಿ.ಎ.ಎಂ) ನೇಮಕಗೊಂಡಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚಾಮರಾಜನಗರ ಹಾಗೂ ರಾಮನಗರ ಜಿಲ್ಲೆಗೆ ಮುಖ್ಯ ವ್ಯವಸ್ಥಾಪಕರಾಗಿ ಶ್ರೀ ಲೂಯಿಸ್ ರೊಜಾರಿಯೊ ರವರು ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಇವರು ಜಿಲ್ಲೆಯ 52 ಶಾಖೆಗಳ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಾರೆ.ಈ ಎಲ್ಲಾ ಶಾಖೆಗಳಿಗೂ (ಕ್ರೆಡಿಟ್ ಮತ್ತು ಎನ್.ಪಿ.ಎ.ಎಂ) ಮುಖ್ಯ ವ್ಯವಸ್ಥಾಪಕರಾಗಿರುವರು. ಅವರಲ್ಲಿ ಮಾತನಾಡಿದಾಗ ಅವರು ಹೆಚ್ಚಾಗಿ ಕೃಷಿ ಸಾಲ ,ಶಿಕ್ಷಣ ಸಾಲ ,ವ್ಯವಹಾರಿಕ ಸಾಲ ,ಕೈಗಾರಿಕಾ ಉದ್ಯಮಗಳಿಗೆ ಸಾಲ ನೀಡಲಾಗುವುದು ಹಾಗೂ ಇನ್ನಿತರ ಸಾಲಗಳಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ತಿಳಿಸಿದರು.