ಎನ್.ಗೋಪಾಲ್ ಭೈರಪ್ಪ ಗೆ:ಎ.ಎಸ್.ಐ ಹುದ್ದೆಗೆ ಮುಂಬಡ್ತಿ
ಸಂಜೆವಾಣಿ ವಾರ್ತೆ
ಹನೂರು. ಜು 3 :- ಚಾಮರಾಜನಗರ ಜಿಲ್ಲಾ ಪೆÇಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿವಿಲ್ ಹೆಡ್ ಕಾನ್ಸಟೇಬಲ್ ಅವರುಗಳಿಗೆ ಸೇವಾ ಜೇಷ್ಟತೆಯ ಹಾಗೂ ಪರಿಷೃತ ಮೀಸಲಾತಿ ರೋಸ್ಟರ್ ಅನ್ವಯ ಅರ್ಹತೆಯ ಆಧಾರದ ಮೇಲೆ ಎ.ಎಸ್.ಐ ಹುದ್ದೆಗೆ ಮುಂಬಡ್ತಿಯನ್ನು ನೀಡಿ ಆದೇಶಿಸಲಾಗಿದೆ.
ಕೊಳ್ಳೇಗಾಲ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಸಿವಿಲ್ ಹೆಡ್ ಕಾನ್ಸ್ಟೇಬಲ್ (ಸಿ.ಎಚ್.ಸಿ11) ಕರ್ತವ್ಯ ನಿರ್ವಹಿಸುತ್ತಿರುವ ಎನ್.ಗೋಪಾಲ್ ಅವರಿಗೆ ಎ.ಎಸ್.ಐ ಹುದ್ದೆಗೆ ಮುಂಬಡ್ತಿ ನೀಡಿ ಕೊಳ್ಳೇಗಾಲ ಗ್ರಾಮಾಂತರ ಪೆÇಲೀಸ್ ಠಾಣೆಗೆ ವರ್ಗಾಯಿಸಿ ಆದೇಶಿಸಲಾಗಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಪೆÇಲೀಸ್ ಠಾಣೆಯಲ್ಲಿ ಸಿವಿಲ್ ಹೆಡ್ ಕಾನ್ಸ್ಟೇಬಲ್ (ಸಿ.ಎಚ್.ಸಿ 21) ಕರ್ತವ್ಯ ನಿರ್ವಹಿಸುತ್ತಿರುವ ಭೈರಪ್ಪ ಎಸ್.ಎಲ್ ಅವರನ್ನು ಎ.ಎಸ್.ಐ ಹುದ್ದೆಗೆ ಮುಂಬಡ್ತಿಯನ್ನು ನೀಡಿ ರಾಮಾಪುರ ಪೆÇಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.