ಪೆÇಲೀಸ್ ಸಿಬ್ಬಂದಿ ಸಾಕಿದ್ದ ನಾಯಿಯಿಂದಲೇ ಮೂವರಿಗೆ ಕಡಿತ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.03- ಪೆÇಲೀಸ್ ಸಿಬ್ಬಂದಿ ಹಾಲು, ಬ್ರೆಡ್ ಕೊಟ್ಟು ಸಾಕಿದ್ದ ನಾಯಿಯಿಂದಲೇ ಮೂವರು ಕಡಿತಕ್ಕೊಳಗಾದ ಘಟನೆ ಗುಂಡ್ಲುಪೇಟೆ ಪೆÇಲೀಸ್ ಠಾಣಾ ಆವರಣದಲ್ಲಿ ನಡೆದಿದೆ.
ಸಿಬ್ಬಂದಿಯೇ ಆಹಾರ ನೀಡುತ್ತ ಸಾಕಿದ್ದ ಬೀದಿ ನಾಯಿ ಇದಾಗಿದ್ದು, ಠಾಣೆಯ ಇನ್ಸ್‍ಪೆಕ್ಟರ್, ಶಿಕ್ಷಕ ಹಾಗೂ ಮತ್ತೊಬ್ಬರಿಗೆ ಕಡಿದು ಗಾಯಗೊಳಿಸಿದೆ.
ಮೊಬೈಲ್ ಕಳೆದುಕೊಂಡಿದ್ದ ಶಿಕ್ಷಕರೊಬ್ಬರು ದೂರು ಕೊಡಲು ಠಾಣೆಗೆ ಬಂದಿದ್ದು, ಪೆÇಲೀಸ್ ಕಾನ್ಸ್‍ಟೇಬಲ್ ವೊಬ್ಬರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಹಿಂಬದಿಯಿಂದ ಬಂದು ಬಲಗಾಲಿಗೆ ಕಚ್ಚಿತ್ತು. ಇವರು ದೂರು ನೀಡುವುದನ್ನು ಬದಿಗೊತ್ತಿ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಪಡೆದಿದ್ದಾರೆ. ಇದಾದ ನಂತರ ಸ್ನೇಹಿತರೊಂದಿಗೆ ಬಂದಿದ್ದ ಮತ್ತೊಬ್ಬನನ್ನು ನಾಯಿ ಕಚ್ಚಿದೆ.
ಅಷ್ಟರಲ್ಲೇ ಠಾಣೆಗೆ ಬಂದ ಪೆÇಲೀಸ್ ಇನ್ಸ್‍ಪೆಕ್ಟರ್ ಪರಶಿವಮೂರ್ತಿ ಅವರನ್ನೂ ಬೀದಿನಾಯಿ ಕಚ್ಚಿದ್ದು, ಇವರು ಕೂಡ ಚಿಕಿತ್ಸೆಗೆ ತೆರಳಿದ್ದಾರೆ.
ಠಾಣೆ ಬಳಿಯೇ ಇದ್ದ ಬೀದಿನಾಯಿಗೆ ಈ ಹಿಂದೆ ಹುಚ್ಚುನಾಯಿ ಕಡಿತಕೊಳಕ್ಕಾಗಿದ್ದ ಹಿನ್ನೆಲೆ ಚುಚ್ಚುಮದ್ದು ಕೊಡಿಸಲಾಗಿತ್ತು. ಇದರಿಂದ ಯಾವುದೇ ತೊಂದರೆ ಮಾಡದೆ ನಾಯಿ ಠಾಣೆ ಬಳಿ ಇರುತ್ತಿತ್ತು. ಆದರೆ ಸೋಮವಾರ ಇದ್ದಕ್ಕಿದ್ದಂತೆ ಇನ್ಸ್‍ಪೆಕ್ಟರ್ ಸೇರಿಮೂವರನ್ನು ಕಡಿದು ಗಾಯಗೊಳಿಸಿತು. ನಂತರದಲ್ಲಿ ನಾಯಿಯನ್ನು ಹಿಡಿಸುವ ಪ್ರಯತ್ನ ನಡೆಸುವಷ್ಟರಲ್ಲಿ ನಾಯಿ ತಾನಾಗಿಯೇ ಮೃತಪಟ್ಟಿದೆ.