ಸನ್ಮಾರ್ಗದ ಹಾದಿಯನ್ನು ಅಳವಡಿಸಿಕೊಳ್ಳಲು ಪತ್ರಿಕೆಗಳು ನೀಡುವ ಜ್ಞಾನ ತುಂಬಾ ಅವಶ್ಯಕವಾಗಿದೆ :ಸುರೇಶ್‍ಋಗ್ವೇದಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.03- ಭಾμÉ, ಶಬ್ದ ಭಂಡಾರ, ಪದಗಳ ಸಂಪತ್ತು, ಸಂಸ್ಕøತಿ, ಪರಂಪರೆ, ಜೀವನ ಮೌಲ್ಯಗಳು, ಸನ್ಮಾರ್ಗದ ಹಾದಿಯನ್ನು ಅಳವಡಿಸಿಕೊಳ್ಳಲು ಪತ್ರಿಕೆಗಳು ನೀಡುವ ಜ್ಞಾನ ತುಂಬಾ ಅವಶ್ಯಕವಾಗಿದೆ. ಪತ್ರಿಕೆಗಳ ಮೂಲಕ ಮಾನವ ಸಮೃದ್ಧ ವಿಕಾಸ ವ್ಯಕ್ತಿತ್ವ ಪೂರಿತ ಜೀವನವನ್ನು ನಿರ್ವಹಣೆ ಮಾಡಬಹುದು ಎಂದು ಸಂಸ್ಕೃತಿ ಚಿಂತಕ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್‍ಎನ್‍ಋಗ್ವೇದಿ ತಿಳಿಸಿದರು.
ಅವರು ಪತ್ರಿಕಾ ದಿನಾಚರಣೆ ಅಂಗವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕೆಗಳ ಮಹತ್ವ ಹಾಗೂ ಪತ್ರಿಕಾಕ್ಷೇತ್ರದಲ್ಲಿ ದುಡಿಯುತ್ತಿರುವ ಸರ್ವರಿಗೂ ಕೃತಜ್ಞತೆ ಸಲ್ಲಿಸುವ ಸಮಾರಂಭದಲ್ಲಿ ಮಾತನಾಡುತ್ತಾ, ಭಾμÉ ನಿರಂತರವಾಗಿ ಬೆಳೆಯಲು ಪತ್ರಿಕೆಗಳು ಹಾಗೂ ಮಾಧ್ಯಮಗಳು ಪರಿಣಾಮಕಾರಿಯಾಗಿದೆ. ಭಾμÉಗಳು ಬಳಕೆ ಇಲ್ಲದೆ ವಿನಾಶದತ್ತ ಸಾಗುತ್ತಿರುವ ಸಂದರ್ಭದಲ್ಲಿ ಪತ್ರಿಕೆಗಳು ಜೀವಂತ ಶಕ್ತಿಯಾಗಿ ಭಾμÉ, ಸಂಸ್ಕೃತಿ ಬೆಳೆಯಲು ಮಹತ್ತರ ಕೊಡುಗೆಯನ್ನು ನೀಡಿದೆ. ರಾಷ್ಟ್ರ ಹಾಗೂ ರಾಜ್ಯಗಳ ವಿಕಾಸಕ್ಕೆ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿ, ಜ್ಞಾನ ದೃಷ್ಟಿಯ ವೈಚಾರಿಕ ಚಿಂತನೆಗಳ, ಧಾರ್ಮಿಕ ಮೌಲ್ಯಗಳ ಹಾಗೂ ಜೀವನದ ಚಿಂತನೆಗಳ ರಹಸ್ಯಗಳನ್ನು ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಭಾವನೆ ಹಾಗೂ ಜ್ಞಾನವನ್ನು ಸಮಾಜಕ್ಕೆ ಅರ್ಪಿಸುವ ಪತ್ರಿಕೆಗಳು ಸಮಾಜದ ಕಣ್ಮಣಿಯಾಗಿವೆ. ಪತ್ರಿಕೆಗಳ ಮೂಲಕ ನಿರಂತರವಾಗಿ ನೂರಾರು ಸಮಸ್ಯೆಗಳ ನಡುವೆಯೂ ದುಡಿಯುತ್ತಿರುವ ಹಾಗೂ ಸೇವೆ ಸಲ್ಲಿಸುತ್ತಿರುವ ಸರ್ವರಿಗೂ ಅಭಿನಂದನೆಗೆ ಅರ್ಹರು. ಸಮಾಜ ಸದಾಕಾಲ ಇವರಿಗೆ ಚಿರಋಣಿಯಾಗಿರಬೇಕು. ಕನ್ನಡ ಸಾಹಿತ್ಯ ಪರಿಷತ್ತು ಭಾμÉಯ ಬೆಳವಣಿಗೆಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಪತ್ರಿಕೆಗಳು ಸಾವಿರಾರು ಶಬ್ದಗಳ ವಿಶ್ಲೇಷಣೆಯ ಮೂಲಕ ಮಹಾನ್ ರಹಸ್ಯಗಳನ್ನು ಭವಿಷ್ಯದ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಪತ್ರಿಕೆಗಳನ್ನು ಪ್ರೀತಿಸಿ ಜ್ಞಾನವನ್ನು ಅರಳಿಸಿಕೊಳ್ಳಿ ಎಂದು ಋಗ್ಬೇದಿ ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಹಾಗೂ ಪತ್ರಿಕೆ ವಿತರಕ ಶಿವಲಿಂಗ ಮೂರ್ತಿ ಮಾತನಾಡಿ ಪತ್ರಿಕೆಗಳು ಬಹಳ ಸಮಸ್ಯೆಯಲ್ಲಿದೆ. ಪತ್ರಿಕಾ ವರದಿಗಾರರು, ವಿತರಕರು ಭದ್ರತೆಇಲ್ಲದ ಕಾರ್ಯ ನಿರ್ವಹಣೆ ನಡೆಸುತ್ತಿದ್ದಾರೆ. ಪತ್ರಕರ್ತರ ಹಾಗೂ ಪತ್ರಿಕಾಕ್ಷೇತ್ರದಲ್ಲಿ ದುಡಿಯುತ್ತಿರುವವರ ಸೇವೆಯನ್ನು ಸರ್ಕಾರ ಮತ್ತು ಸಮಾಜ ಭದ್ರಪಡಿಸಬೇಕಿದೆ. ಪತ್ರಿಕೆಗಳನ್ನು ಕೊಂಡು ಓದುವ ಮೂಲಕ ಪತ್ರಿಕೆ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದರು.
ಕನ್ನಡ ಹೋರಾಟಗಾರರಾದ ಶ್ರೀನಿವಾಸ ಗೌಡರವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಪತ್ರಿಕಾ ದಿನಾಚರಣೆಯನ್ನುಆಚರಿಸುವ ಮೂಲಕ ಪತ್ರಿಕಾ ಕ್ಷೇತ್ರದ ಸರ್ವರನ್ನು ಗೌರವಿಸಿ ಅವರಿಗೆ ಸಮಾಜದ ಪ್ರೀತಿ,ಹಾಗು ಸ್ಪೂರ್ತಿ ಸಲ್ಲಿಸುತ್ತಿರುವುದು ಬಹಳ ಸಂತೋಷವಾಗಿದೆ. ಕನ್ನಡ ಪತ್ರಿಕೆಯ ಅಭಿವೃದ್ಧಿಗಾಗಿ ದುಡಿಯುತ್ತಿರುವ ಸರ್ವರಿಗೂ ಅಭಿನಂದನೆಗಳನ್ನು ಸಮಾಜ ಸದಾಕಾಲ ಅರ್ಪಿಸುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಬಿಕೆ ಆರಾಧ್ಯ, ರವಿಚಂದ್ರ ಪ್ರಸಾದ್, ಸುರೇಶ್‍ಗೌಡ, ಪರಮೇಶ್ವರಪ್ಪ, ಬೊಮ್ಮಾಯಿ ಪಣ್ಯದ ಹುಂಡಿರಾಜು, ಬಂಡಿಗೆರೆ ಸಿದ್ದೇಶ್, ನಂಜುಂಡಸ್ವಾಮಿ ಇದ್ದರು.