ಘಟಕ ಕಾಲೇಜು ಯೋಚನೆ ಕೈಬಿಡಲು ಒತ್ತಾಯ
ಕೋಲಾರ,ಜು.೨- ಕೋಲಾರ ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಬಾಲಕರ ಕಾಲೇಜ್) ಇದನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಾನ್ಸ್ಟಿಟೂಯೆಂಟ್ ಕಾಲೇಜ್ ಅಥವಾ ಸಾಂವಿಧಾನಿಕ ಕಾಲೇಜು ಅಥವಾ ಘಟಕ ಕಾಲೇಜು ಎಂಬುದಾಗಿ ಸೇರಿಸಿಕೊಳ್ಳಲು ಹುನ್ನಾರ ನಡೆಸುವದನ್ನ ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಿತ ದೃಷ್ಟಿಯಿಂದ ಈ ಯೋಚನೆಯನ್ನು ಕೈ ಬಿಡಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೋಲಾರ ಜಿಲ್ಲಾ ಶಾಖೆ ತೀವ್ರವಾಗಿ ಒತ್ತಾಯಿಸುತ್ತದೆ.
ಇದಕ್ಕೆ ಪ್ರೋತ್ಸಾಹ ಕೊಡುತ್ತಿರುವ ಕಾಣದ ಕೈಗಳನ್ನ ಕೋಲಾರ ಜಿಲ್ಲೆಯ ಜನತೆಯ ಪರವಾಗಿ ಖಂಡಿಸುತ್ತೇವೆ ೭೫ ವರ್ಷಗಳ ಇತಿಹಾಸವುಳ್ಳ ಈ ಕಾಲೇಜು ಅನೇಕ ಅಧಿಕಾರಿಗಳನ್ನು ರಾಜಕಾರಣಿಗಳನ್ನ ಪ್ರಬುದ್ಧ ಜ್ಞಾನಿಗಳನ್ನ ಸೃಷ್ಟಿ ಮಾಡಿ ಆಚೆ ಕಳಿಸಿರುವ ಸಂಸ್ಥೆ ಇದರ ಮೇಲೆ ಉತ್ತರ ವಿಶ್ವವಿದ್ಯಾಲಯ ವಕ್ರದೃಷ್ಟಿ ಬಿದ್ದಿರುವುದು ತೀವ್ರ ಖಂಡನೀಯ. ಕೆಲ ಅಧ್ಯಾಪಕರು ಸರ್ಕಾರದ ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಹಾಗೂ ನಿವೃತ್ತಿ ವಯಸ್ಸು ಇನ್ನೂ ಎರಡು ವರ್ಷ ಹೆಚ್ಚು ಇದಕ್ಕೆ ಕೈಜೋಡಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ಅರೋಪಿಸಿದೆ.
ಕೋಲಾರ ಜಿಲ್ಲೆಯ ಬಡಮಕ್ಕಳು ರೈತ ಮಕ್ಕಳು ವಿದ್ಯೆಯಿಂದ ವಂಚಿತರಾಗುವ ಸಾಧ್ಯತೆ ಇದೆ ವಿಶ್ವವಿದ್ಯಾಲಯವು ತಮಗೆ ಮನಸ್ಸು ಬಂದಂತೆ ಶುಲ್ಕವನ್ನು ಹೆಚ್ಚಿಸಿಕೊಳ್ಳಬಹುದು ಇದಕ್ಕಿಂತ ಮಿಗಿಲಾಗಿ ಕಾಲೇಜಹಂತದಲ್ಲೇ ಅಂಕಪಟ್ಟಿ ಮೌಲ್ಯಮಾಪನ ಎಲ್ಲವೂ ಆಗಿರುವುದರಿಂದ ಪ್ರತಿಭೆಗೆ ಅವಕಾಶ ಸಿಗದೇ ಜಾತಿಯ ಸೋಂಕು ಹೆಚ್ಚಾಗಿ ಅನೇಕ ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗಬಹುದು ಕೋಲಾರಕ್ಕೆ ವಿಶ್ವವಿದ್ಯಾಲಯವು ಹತ್ತಿರ ಇರುವಾಗ ಈ ತೀರ್ಮಾನ ಅವೈಜ್ಞಾನಿಕವಾಗಿದೆ ಜಿಲ್ಲೆಯ ಜನಪ್ರತಿನಿಧಿಗಳು ರೈತಾಪಿ ಸಂಘಟನೆಯ ಮಿತ್ರರು ಕನ್ನಡ ಪರ ಸಂಘಟನೆಗಳು ದಲಿತ ಪರ ಸಂಘಟನೆಗಳು ಅದರಲ್ಲೂ ಕೋಲಾರ ನಗರದ ಜನತೆ ಹಾಗೂ ಹಳೆ ವಿದ್ಯಾರ್ಥಿಗಳು ಬುದ್ಧಿಜೀವಿಗಳು ಕವಿಗಳು ಲೇಖಕರು ಈ ಅವೈಜ್ಞಾನಿಕ ತೀರ್ಮಾನವನ್ನ ಕೂಡಲೇ ಕೈಬಿಡಲು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಕ.ದ.ಸಂ.ಸ. ಒತ್ತಾಯಿಸಿದೆ.