ಮುಡಾ ಹಗರಣ- ಸಚಿವ ಬೈರತಿ ರಾಜಿನಾಮೆಗೆ ಆಗ್ರಹ
ಕೋಲಾರ,ಜು,೩-ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ಅವರು ಮೈಸೂರಿನ ಮುಡದಲ್ಲಿ ನಡೆದಿರುವ ಸಾವಿರಾರು ಕೋಟಿ ರೂ ಹಗರಣಕ್ಕೆ ಮೂಲ ಕಾರಣಕರ್ತರಾಗಿವ ಹಿನ್ನಲೆಯಲ್ಲಿ ಇದರ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡ ಬೇಕೆಂದು ಬಿಜೆಪಿ ಮುಖಂಡ ಕೆಂಬೋಡಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ಮಾದ್ಯಮದವರಿಗೆ ಪತ್ರಿಕಾ ಹೇಳಿರುವ ಅವರು ಮೈಸೂರಿನ ಮುಡದಲ್ಲಿ ಶೇ ೫೦೧೫೦ ಅನುಪಾತದಡಿ ನಿಯಮ ಬಾಹಿರವಾಗಿ ಸರ್ಕಾರದ ಅದೇಶವನ್ನು ಧಿಕ್ಕರಿಸಿ ಸುಮಾರು ೫ ಸಾವಿರ ನಿವೇಶನಗಳನ್ನು ನೊಂದಣಿಯಾಗದವರಿಗೆ ಹಂಚಿಕೆ ಮಾಡಿರುವುದು ದಾಖಲೆಗಳ ಸಮೇತ ರುಜುವಾತು ಅಗಿರುವುದ ಜಗಜ್ಯಾಹಿರವಾಗಿದೆ.ನಾಮಕವಸ್ಥೆಗೆ ಸಭೆಗಳನ್ನು ನಡೆಸಿ ತಮ್ಮ ಎಡ-ಬಲ ಕಳಂಕಿತರನ್ನು ಕೊಳ್ಳರಿಸಿ ಕೊಂಡು ಸಭೆಗಳನ್ನು ಮಾಡಿ ಮೂಗಿಗೆ ತುಪ್ಪ ಸವರುವಂತ ಕೆಲಸವನ್ನು ಮಾಡುವ ಮೂಲಕ ಹಗರಣದ ರೂವರಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ಕಂಡರೆ ಬೇಲಿಯೇ ಎದ್ದು ಹೊಲ ಮೇಯ್ದೆಂದಾಗೆ ಅಗಿದೆ ಎಂದು ಟೀಕಿಸಿದ್ದಾರೆ.
ನಗರಾಭಿವೃದ್ದಿ ಇಲಾಖೆಯಡಿ ಬರುವ ಮುಡಾ ಪ್ರಾಧಿಕಾರದ ಅಧಿಕಾರಿಗಳು,ಜನಪ್ರತಿನಿಧಿಗಳು ಮಧ್ಯವರ್ತಿಗಳೊಂದಿಗೆ ಸೇರಿ ಕಾನೂನು ಬಾಹಿರವಾಗಿ ನಿವೇಶಗಳನ್ನು ಹಂಚಿಕೆ ಮಾಡುವ ಮೂಲಕ ರಾಜ್ಯ ಸರ್ಕಾರದ ಬಂಡಾವಳವನ್ನು ಬೆಳಕಿಗೆ ತಂದಿದೆ. ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿನ ೧೮೭ ಕೋಟಿ ಹಗರಣದ ಬೆನ್ನ ಹಿಂದೆಯೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿರುವುದು ವಿಪರ್ಯಸದ ಸಂಗತಿಯಾಗಿದೆ ಎಂದಿದ್ದಾರೆ.
ಮೈಸೂರಿನ ಪ್ರಕರಣವನ್ನು ತನಿಖೆ ನಡೆಸಲು ಸಿ.ಬಿ.ಐಗೆ ಒಪ್ಪಿಸ ಬೇಕೆಂದು ಆಗ್ರಹ ಪಡೆಸಿರುವ ಅವರು ಈ ಹಿಂದೆ ಬಿಜೆಪಿ ಮೇಲೆ ಆರೋಪಿಸುತ್ತಿದ್ದ ಕಾಂಗ್ರೇಸ್‌ನವರು ಈಗಾ ಮಾಡುತ್ತಿರುವುದೇನು? ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಸಹ ಎದುರುಗಡೆ ಇರುವವರ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ಟೀಕಿಸಿದಂತೆ ಇದೆ ಎಂದು ವ್ಯಂಗವಾಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರವು ಜನರಿಗೆ ೫ ಗ್ಯಾರೆಂಟಿ ಯೋಜನೆಯ ಅಮಿಷವುಡ್ಡಿ ಅಧಿಕಾರಕ್ಕೆ ಬಂದಿದೆ. ಲೋಟ ನೀಡಿ ಚೆಂಬು ಹೊಡೆಯುವಂತ ಯೋಜನೆಗಳನ್ನು ಕಾಂಗ್ರೇಸ್ ಸರ್ಕಾರದ ಆಡಳಿತದಲ್ಲಿ ಹಂತ,ಹಂತವಾಗಿ ಬೆಳಕಿಗೆ ಬರುತ್ತಿದೆ. ಎಸ್.ಡಿ.ಎಸ್.ಟಿ. ಮೀಸಲಾತಿ ಸಾವಿರಾರು ಕೋಟಿ ಹಣವನ್ನು ಪ್ರಥಮವಾಗಿ ದುರ್‍ಬಳಿಸಿ ಕೊಂಡಿತು, ನಂತರದಲ್ಲಿ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿನ ೧೮೭ ಕೋಟಿ ರೂಗಳನ್ನು ಹಗರಣ ಬೆಳಕಿಗೆ ಬಂದಿತು, ಅಕ್ರಮವಾಗಿ ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡುವಂತೆ ಒತ್ತಡ ಹೇರಿದ ಹಿನ್ನಲೆಯಲ್ಲಿ ಅಧಿಕಾರಿ ಆತ್ಮಹತ್ಯೆಗೆ ಕಾರಣರಾಗಿದ್ದಾರೆ. ಇದಕ್ಕೆ ಬಲವಾದ ಸಾಕ್ಷಾದಾರದ ಎಲ್ಲಾ ದಾಖಲೆಗಳು ಇರುವ ಹಿನ್ನಲೆಯಲ್ಲಿ ಕಾಂಗ್ರೇಸ್ ಸರ್ಕಾರವನ್ನು ಕೊಡಲೇ ವಜಾ ಮಾಡ ಬೇಕು ಎಂದು ಆಗ್ರಹಿಸಿದರು.