ಹೊನ್ನುಡಿ ಪತ್ರಿಕೆ ಜಯದೇವಪ್ಪ ನಿಧನ
ಕೋಲಾರ,ಜು,೩-ಜಿಲ್ಲೆಯ ಹೊನ್ನುಡಿ ಪತ್ರಿಕೆಯ ಪಾಲುದಾರ ಆರ್.ಡಿ.ಜಯದೇವಪ್ಪ (೭೩) ಅವರು ಜು,೧ ರ ಸೋಮವಾರ ರಾತ್ರಿ ೯.೩೦ರಲ್ಲಿ ನಿಧನರಾಗಿದ್ದಾರೆ.
ನಗರದ ಕಠಾರಿಪಾಳ್ಯದ ನಾಗರಕುಂಟೆಯ ನಿವಾಸಿಯಾಗಿರುವ ಜಯದೇವಪ್ಪ ಅವರು ಕಳೆದ ೩-೪ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ದೈವಾಧೀನರಾದರು,
ಜಯದೇವಪ್ಪ ಅವರು ಹೊನ್ನಡಿ ಜಿಲ್ಲಾ ಪತ್ರಿಕೆಯ ಪಾಲುದಾರರಾಗಿದ್ದು ನಗರದ ಶ್ರೀ ಭುವನೇಶ್ವರಿ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದರು, ನಗರದ ಅರ್ಬನ್ ಬ್ಯಾಂಕ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು, ಕಳೆದ ೧೯೭೭ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜನತಾಪಕ್ಷದಲ್ಲಿ ಗುರುತಿಸಿ ಕೊಂಡಿದ್ದರು, ನಗರದ ಶ್ರೀ ಬಸವೇಶ್ವರ ಭಕ್ತ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದರು, ವೀರಶೈವ ಸಮಾಜದಲ್ಲಿ ಅರಳೇಪೇಟೆ ಬಸವೇಶ್ವರ ದೇವಾಲಯ, ವೀರಶೈವ ರುದ್ರಭೂಮಿಗೆ ಮುಂತಾದವುಗಳಿಗೆ ಹೋರಾಟ ನಡೆಸಿದ್ದಲ್ಲದೆ ನಗರದ ಇತರೆ ಸಾಮಾಜಿಕ, ಧಾರ್ಮಿಕ, ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು,
ಜಯದೇವಪ್ಪನವರ ಪುತ್ರಿ ವಿದೇಶದಲ್ಲಿರುವ ಕಾರಣ ಮೃತರ ದೇಹವನ್ನು ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿಟ್ಟಿದ್ದು, ಬುಧವಾರ(ಇಂದು) ಬೆಳಿಗ್ಗೆ ಕಠಾರಿಪಾಳ್ಯದ ನಾಗರಕುಂಟೆಯ ( ಸ್ವಗೃಹ) ನಿವಾಸದ ಬಳಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು, ಮಧ್ಯಾಹ್ನ ೨ ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.
ಶ್ರೀಯುತರು ಪತ್ನಿ, ಓರ್ವ ಪುತ್ರಿ, ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅನೇಕ ಗಣ್ಯರು ಅಗಮಿಸಿ ಅಂತಿಮ ದರ್ಶನ ಪಡೆದು ಸಂತಾಪ ವ್ಯಕ್ತ ಪಡೆಸಿದರು,