ವೈದ್ಯರು – ವಿಜ್ಞಾನಿಗಳನ್ನು ಸ್ಮರಿಸಿ
ಕೋಲಾರ ಜು.೩- ಉತ್ತಮ ಹಾಗೂ ಉದಾತ್ತ ಮೌಲ್ಯಗಳ ವಿಜ್ಞಾನಿಗಳು ಮತ್ತು ವೈದ್ಯರ ಸೇವೆಯು ಇಂದು ದೇಶದ ಪ್ರಗತಿಗೆ ಪೂರಕವಾಗಿದ್ದು, ಈ ದೆಸೆಯಲ್ಲಿ ವಿಜ್ಞಾನಿಗಳ ನೆನಪು ಇಂದಿನ ಯುವ ಸಮುದಾಯಕ್ಕೆ ಅಗತ್ಯ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಜಿ. ಶ್ರೀನಿವಾಸ್ ತಿಳಿಸಿದರು.
ನಗರದ ಸಂಪೂರ್ಣ ಹೋಟೆಲ್ ಸಭಾಂಗಣದಲ್ಲಿಂದು ಜ್ಞಾನ ವಿಜ್ಞಾನ ಸಮಿತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ವೈದ್ಯರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ವಿಜ್ಞಾನಿಗಳ ನೆನಪು ಮಾಡಿಕೊಳ್ಳುವುದರ ಜೊತೆಗೆ ವಿದ್ಯಾರ್ಥಿ ಯುವ ಸಮುದಾಯವು ದೇಶಕ್ಕಾಗಿ ದುಡಿದ ಮಹಾನ್ ವ್ಯಕ್ತಿಗಳ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಭಾರತ ರತ್ನ ಸಿ ಎನ್ ಆರ್ ರಾವ್ . ರಘುನಂದ ಆದರ್ಶ ಪುರುಷ ದೇಶದಲ್ಲಿ ವಿಜ್ಞಾನ ಕ್ಷೇತ್ರ ಉನ್ನತ ಮಟ್ಟಕ್ಕೆ ಬರಬೇಕು, ಚೀನಾ ದಕ್ಷಿಣ ಕೊರಿಯಾದಂತಹ ರಾಷ್ಟ್ರಗಳಿಗಿಂತ ಮುಂಚೂಣಿಯಲ್ಲಿ ನಮ್ಮ ದೇಶ ಕಾಣಿಸಿಕೊಳ್ಳಬೇಕು ಎಂದು ಆಶಿಸಿದರು.
ಸನ್ಮಾನ ಸ್ವೀಕರಿಸಿದ ಡಾಅಜಯ್ ಕುಮಾರ್ ಜವಳಿ ಮಾತನಾಡಿ ಸೇವಾ ಮನೋಭಾವದಿಂದ ದುಡಿಯುವ ಜನರನ್ನು ಗುರುತಿಸಿ ಗೌರವಿಸುವ ಮನೋಭಾವ ರೂಢಿಸಿಕೊಂಡಿರುವುದು ಸ್ತುತ್ಯಾರ್ಹ ಸಂಗತಿ ಎಂದರು.
ತಾಲ್ಲೂಕು ಅಧ್ಯಕ್ಷ ಮಯೂನ್ ಮಾತನಾಡಿ ವೈಜ್ಞಾನಿಕ ಯುಗದಲ್ಲಿ ವಿದ್ಯಾರ್ಥಿಗಳ ಆದಿಯಾಗಿ ವಯಸ್ಸಿನ ಮಿತಿಯಿಲ್ಲದೇ ಜ್ಞಾನ ದಾಸೋಹಿಗಳಾಗಬೇಕು. ಸದೃಢ ಸಮೃದ್ದಿ ಭಾರತವನ್ನು ನಿರ್ಮಿಸಲು ಸನ್ನದ್ದಾರುಗುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಶರಣಪ್ಪ ಜಮಾದಾರ್, ಜಿಲ್ಲಾ ಸಂಚಾಲಕ ಡಿ.ಎನ್ ಮುಕುಂದ ಶಿಕ್ಷಣ ಸಂಯೋಜಕ ಕೆ.ಶ್ರೀನಿವಾಸ್, ಖಜಾಂಚಿ ಕೆ.ವಿ ಜಗನ್ನಾಥ, ಉಪಾಧ್ಯಕ್ಷೆ ಕೆ.ಸಿ.ಪದ್ಮಾವತಿ ಸಹಕಾರ್ಯದರ್ಶಿ ಎಸ್ ಸುರೇಶ್ ಕುಮಾರ್, ತಾಲ್ಲೂಕು ಉಪಾಧ್ಯಕ್ಷರಾದ ಬಿ.ಮೋಹನ್, ಮುಖಂಡರಾದ ಏಕಲವ್ಯ,ಸಿ.ಎಂ ಪ್ರಕಾಶ ಉಪಸ್ಥಿತರಿದ್ದರು.