ಮಹಾತ್ಮಾಗಾಂಧಿ ನಗರದಲ್ಲಿ ಸಾಂಸ್ಕøತಿಕ ಉತ್ಸವ
ಕಲಬುರಗಿ,ಜು.2-ಆಳಂದ ರಸ್ತೆಯ ಮಹಾತ್ಮಾ ಗಾಂಧಿ ನಗರದಲ್ಲಿ ದುರ್ಗಾದೇವಿ ಸಂಗೀತ ನಾಟ್ಯ ಸಾಂಸ್ಕøತಿಕ ಕಲಾ ಸಂಘದ ವತಿಯಿಂದ ಸಾಂಸ್ಕøತಿಕ ಉತ್ಸವ ಕಾರ್ಯಕ್ರಮ ಜರುಗಿತು.
ಕನ್ನಡಪರ ಹೋರಾಟಗಾರ ಸಂಗಮನಾಥ ಹಿರೇಗೌಡ ಮತ್ತು ಶ್ರೀರಾಮ ಸೇನೆಯ ಜಿಲ್ಲಾ ಗೌರವಾಧ್ಯಕ್ಷ ಶರಣು ಗುತ್ತೇದಾರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಸಮ್ಮ ದೇವನೂರ, ಗುಲಬರ್ಗಾ ಡ್ಯಾನ್ಸ್ ಸಂಘದ ಅಧ್ಯಕ್ಷ ಅಕ್ಷಯ ಕುಮಾರ, ಹಿರಿಯ ಮುಖಂಡ ನಾಗಭೂಷಣ ಉಪಸ್ಥಿತರಿದ್ದರು. ಅಕ್ಷಯಕುಮಾರ ತಂಡದವರಿಂದ ಸಾಮಾಜಿಕ ನೃತ್ಯ, ಆಕಾಶವಾಣಿ, ದೂರದರ್ಶನ ಸಂಗೀತ ಕಲಾವಿದರಿಂದ ಸುಮಧುರ ಸಂಗೀತ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷೆ ಶಾಂತಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.