ವಚನ ಸಾಹಿತ್ಯಕ್ಕೆ ಬೆಳಕು ಕೊಟ್ಟ ಮಹಾ ಚೇತನ್ ಹಳಕಟ್ಟಿಯವರು
ಕಲಬುರಗಿ:ಜು.2: 12ನೇ ಶತಮಾನದ ಶರಣರ ವಚನಗಳನ್ನು ನಾವಿಂದು ನೋಡುತ್ತೇವೆ ಓದುತ್ತೀವೆ ಎಂದರೆ ವಚನ ಸಾಹಿತ್ಯವನ್ನು ಸಂಶೋಧನೆ ಮಾಡಿ ಅದಕ್ಕೆ ಒಂದು ರೂಪ ಕೊಟ್ಟು. ಬೆಳಕಿಗೆ ತಂದ ವಚನ ಪಿತಾಮಹ ಫಗು ಹಳಕಟ್ಟಿವರ ಶ್ರಮ ನಾವು ಮರೆವುವಂತಿಲ್ಲ ಎಂದು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಆಳಂದ ವಿಧಾನಸಭೆ ಶಾಸಕ ಬಿ.ಆರ್.ಪಾಟೀಲ್ ಅವರು ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಪಂಚಾಯತ್, ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲ್ಲಿ ಡಾ.ಫ.ಗು. ಹಳಕಟ್ಟಿಯವರ 145 ನೇ ಜನ್ಮದಿನ “ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ” ಯ ಮಂಗಳವಾರದಂದು ಇಲ್ಲಿನ ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಭಾವಚಿತ್ರಕ್ಕೆ ಪೂಜೆ ಪುμÁ್ರ್ಪಚನೆ ಹಾಗೂ ಜೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಡಾ.ಫ.ಗು. ಹಳಕಟ್ಟಿ ಸರಳ ಜೀವನ ಉದಾತ್ತ ಚಿಂತನದ ಬದುಕಿಗೆ ದೃμÁ್ಟಂತವಾಗಿ ನಾಡು-ನಡಿಗೆ ಮಹತ್ವದ ಸೇವೆಗೈದ ಮಹಾನುಭಾವಿ ಡಾ. ಫಕೀರಪ್ಪ ಗುರುಬಸಪ್ಪಾ ಹಳಕಟ್ಟಿ ನಾಡು ಸದಾ ನೆನೆಸಬೇಕಾದ ಮಹಾ ಕನ್ನಡಿಗ, ಕಲ್ಯಾಣದಲ್ಲಿ ಕ್ರಾಂತಿಯಾದಾಗ ಅದೆμÉ್ಟೂೀ ವಚನಗಳ ತಾಡೋಲೆಗಳು ಬೆಂಕಿಗೆ ಸುಟ್ಟು. ಹೊದವು ಅಳಿದುಳಿದ ವಚನದ ತಾಡೋಲೆಗಳನ್ನು ರಕ್ಷಿಸಿದರು ಹರಿದ ಸುಟ್ಟು. ಹೋದ ವಚನದ ತಾಡೋಲೆಗಳನ್ನು ಸಂಗ್ರಹಿಸಿ ಸಂಶೋಧನೆ ಮಾಡಿ ವಚನ ಸಾಹಿತ್ಯ ಬೆಳಕಿಗೆ ತಂದರು ನಂತರ ವಚನ ಸಾಹಿತ್ಯವನ್ನು ಈಗಿನ ಯುವ ಪೀಳಿಗೆಯವರಿಗೆ ಮುಖ್ಯವಾಗಿ ಅವರ ಬಗ್ಗೆ ಸೆಮಿನಾರ, ಡಿಬೇಟ್, ಚರ್ಚೆ ಸಂವಾದ ಮಾಡಿಸಬೇಕು ಜಾತಿಗಳ ಧರ್ಮಗಳ ಮೇಲೆ ಜನರು ಮೊರೆಹೊಗುತ್ತಿದ್ದಾರೆ ಎಂದು ಅಸಮಾಧನ ವ್ಯಕ್ತಪಡಿಸಿದರು.
ಪೆÇ್ರೀ: ಮೀನಾಕ್ಷಿ ಬಾಳಿ ಅವರು ಮಾತನಾಡಿ, ಮಹಾಪ್ರಭುಗಳೂ ಬಹುಮುಖ ಪ್ರತಿಭೆಯುಳ್ಳ ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು. ಶಿಕ್ಷಣ, ಬ್ಯಾಂಕಿಂಗ್ ಸಂಸ್ಥೆಯ ಸ್ಥಾಪನೆ, ಸಾಹಿತ್ಯ, ರಾಜಕಾರಣ ಪ್ರತ್ತಿಕೋದ್ಯಮ, ಒಕ್ಕಲುತನ ಹಾಗು ಫಕೀರಪ್ಪ ಅವರು ಮೂರು ವರ್ಷದವರು ಇದ್ದಾಗ ಅವರ ತಾಯಿ ನಿಧನರಾದರು. ಆದರೆ ವಿಜಯಪುರದಲ್ಲಿ ಗೋಳಗುಮ್ಮಟಕ್ಕಿಂತ ಪ್ರಸಿದ್ದವಾದ ಇನ್ನೊಂದು ಗುಮ್ಮಟವಿದೆ, ಅದುವೇ ವಚನ ಗುಮ್ಮಟ ಹಳಕಟ್ಟಿ ಫಕೀರಪ್ಪ” ಎಂದು ಉದ್ಗಾರ ತೆಗೆದಿದ್ದರು.
ಸಮಾಜದ ಹಿತದೃಷ್ಟಿಯಿಂದ ಹಳಕಟ್ಟಿ ಅವರು ಕಾನೂನು ಪದವಿಯನ್ನು ಪಡೆದರು ಹಾಗೂ ಸರಕಾರಿ ಪ್ರಾಸಿಕ್ಯೂಟರ್, ಸರಕಾರಿ ಪ್ಲೀಡರ್ ಹುದ್ದೆಗೆ ನೇಮಕರಾದರು ಹೀಗೆ ಅವರ ಜೀವವನ್ನು ಬಹಳ ಸರಳ ಮತ್ತು ಸುಗಮವಾಗಿ ಜೀವನ ನಡೆಸಿದರು. ಎಂದು ವಿಶೇಷ ಉಪನ್ಯಾಸ ನೀಡಿದರು.
ದಕ್ಷಿಣ ಕಲಬುರಗಿ ವಿಧಾನಸಭಾ ಶಾಸಕ ಅಲ್ಲಮ ಪ್ರಭು ಪಾಟೀಲ್ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ದತ್ತಪ್ಪ ಸಾಗನೂರ, ಸೇರಿದಂತೆ ವಚನ ಸಾಹಿತ್ಯ ಸಮಿತಿ ಅಧ್ಯಕ್ಷರು ಶರಣಪ್ಪ ನಾಗಪ್ಪ ಜೆನವೇರಿ, ಸಮಾಜ ಮುಖಂಡರಾದ ರವೀಂದ್ರ ಶಹಾಬಾದಿ, ವಡ್ಡಣಗೇರೆ ಹಾಗೂ ಶಂಕರ ಹೂಗಾರವರು ನಾಡಗೀತೆ ಹಾಡಿದರು. ವಿನೋದ ಜೆನವೇರಿ ವಂದರ್ನಾಪಣೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಮಾಜ ಮುಖಂಡರು ಭಾಗವಹಿಸಿದ್ದರು.