ಪಠ್ಯಪುಸ್ತಕದಲ್ಲಿ ರಾಜಕೀಯ ಬೇಡ: ಸಿಎಂಗೆ ಮನವಿ
ಕಲಬುರಗಿ,ಜು.2- ಶಾಲಾ ಪಠ್ಯಪುಸ್ತಕದಲ್ಲಿ ವೀರಶೈವ ಪದವನ್ನು ತೆರವು ಮಾಡಿ, ವೀರಶೈವ ಲಿಂಗಾಯತರ ನಡುವೆ ಗೊಂದಲ ಸೃಷ್ಟಿಸಿ ಜಾತಿ ಜಾತಿಗಳನ್ನು ಎತ್ತಿಕಟ್ಟುವ ಹೀನ ಕೆಲಸಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಅಖೀಲ ಬಾರತ ವೀರಶೈವ ಲಿಂಗಾಯತ ಮಹಾಸಬಾ ಜಿಲ್ಲಾ ಯುವ ಘಟಕ ಗೌರವ ಅದ್ಯಕ್ಷರು, ವೀರಶೈವ ಲಿಂಗಾಯತ ಸ್ವಾಭೀಮಾನಿಗಳ ಬಳಗ ಅದ್ಯಕ್ಷರಾದ ಎಂ ಎಸ್ ಪಾಟೀಲ ನರಿಬೋಳ ಅವರು ಆರೋಪಿಸಿದ್ದಾರೆ.
ಕನ್ನಡ ಓದಲು, ಮಾತನಾಡಲು ಬಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವೀರಶೈವ ಲಿಂಗಾಯತರಿಗೆ ಅವಮಾನ ಮಾಡಿ ಉದ್ಧಟತನ ತೋರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ವೀರಶೈವ ಲಿಂಗಾಯತ ಸಮಾಜವನ್ನೇ ಪದೇ ಪದೆ ಟಾರ್ಗೆಟ್ ಮಾಡುವ ಸಿದ್ದರಾಮಯ್ಯ ಅವರು ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಟಾರ್ಗೆಟ್ ಮಾಡುವುದು, ಅವಕಾಶಗಳಿಂದ ವಂಚಿತರನ್ನಾಗಿ ಮಾಡುವುದನ್ನು ರಾಜಕೀಯ ಕುತಂತ್ರ ಎಂದು ಭಾವಿಸಿದ್ದಾರೆ.
ಇತಿಹಾಸಕ್ಕೆ ಮತ್ತು ನಡೆದುಕೋಂಡು ಬಂದಿರುವ ಪರಂಪರೆಗೆ ಧಕ್ಕೆಯಾಗುವ ವೀಚಾರಗಳನ್ನು ಮುಗ್ದ ವೀಧ್ಯಾರ್ಥಿಗಳ ತಲೆ ತುಂಬಬಾರದು ಎಂದು ಪಠ್ಯ ಪರಿಷ್ಕರಣ ಸಮಿತಿಗೆ ನಿರ್ದೇಶನ ನೀಡಬೆಕು ನಿರ್ಲಕ್ಷಿಸಿದರೆ ವೀರಶೈವ ಲಿಂಗಾಯತ ಮಹಾಸಬಾ ಮತ್ತು ಸಮಾದಜ ಎಲ್ಲ ಒಳಪಂಗಡಗಳ ಸಂಘಟನೆಗಳು ಸೇರಿ ಉಗ್ರ ಹೋರಾಟ ಮಾಡಬೆಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.