5 ರಂದು ಶಿವಾನುಭವ ಚಿಂತನಾ ಗೋಷ್ಠಿ
ಕಲಬುರಗಿ,ಜು.2-ಮಣ್ಣೆತ್ತಿನ ಅಮಾವಸೆ ನಿಮಿತ್ಯ ಜು.5 ರಂದು ಜಿಲ್ಲೆಯ ವಿವಿಧ ಮಠಗಳಲ್ಲಿ ಶಿವಾನುಭವ ಚಿಂತನಾ ಗೋಷ್ಠಿ ಜರುಗಲಿದೆ. ಅಂದು ಅಬ್ಬೇತುಮಕೂರಿನ ವಿಶ್ವರಾಧ್ಯ ಮಠದಲ್ಲಿ ರಾತ್ರಿ 8:30ಕ್ಕೆ 470ನೇ ಶಿವಾನುಭವ ಗೋಷ್ಠಿ ನಡೆಯಲಿದೆ. ಡಾ.ಗಂಗಾಧರ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಧಾರ್ಮಿಕ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಜೇವರ್ಗಿ ತಾಲೂಕಿನ ಶಾಖಾಪೂರ ವಿಶ್ವರಾಧ್ಯ ತಪೋವನ ಮಠದಲ್ಲಿ ರಾತ್ರಿ 8:00ಕ್ಕೆ 360ನೇ ಗೋಷ್ಠಿ ನಡೆಯಲಿದೆ. ಡಾ.ಸಿದ್ದರಾಮ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಪ್ರವಚನ ನೀಡಲಿದ್ದಾರೆ. ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯ ಚಿಕ್ಕವಿರೇಶ್ವರ ಹಿರೇಮಠ ಸಂಸ್ಥಾನದಲ್ಲಿ ರಾತ್ರಿ 8:00ಕ್ಕೆ 305ನೇ
ಗೋಷ್ಠಿ ನಡೆಯಲಿದೆ. ಡಾ.ರೇವಣಸಿದ್ದ ಶಿವಾರ್ಚಾಯರು ನೇತೃತ್ವ ವಹಿಸಲಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಅಪ್ಪನ ಶಾಖಾ ಮಠದಲ್ಲಿ ಜೂಲೈ 11 ರಂದು ರಾತ್ರಿ 8:50 ಕ್ಕೆ 287ನೇ ಶಿವಾನುಭವ ಗೋಷ್ಠಿ ನಡೆಯಲಿದೆ. ಅಬ್ಬೇತುಮಕೂರ ಮಠದ ಡಾ.ಗಂಗಾಧರ ಸ್ವಾಮೀಜಿರವರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ವಿಶ್ವರಾಧ್ಯ ಸೇವಾ ಸಮಿತಿ ನಗರ ಘಟಕದ ವಕ್ತಾರ ಬಸವರಾಜ ಶೀಲವಂತರವರು ಪತ್ರಿಕೆ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.