ಬೆಳ್ಳಂಬೆಳಗ್ಗೆ ಫುಟ್ಪಾತ್ ತೆರವು ಕಾರ್ಯಚರಣೆ
ಹುಮನಾಬಾದ್ : ಜು 2 : ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಂಗಳವಾರ ಬೆಳ್ಳಂಬೆಳಗೆ ತಹಸಿಲ್ದಾರ್ ಅಂಜುಮ್ ತಬಸುಮ್ ನೇತೃತ್ವದಲ್ಲಿ ಫುಟ್ಪಾತ್ ತೆರವು ಕಾರ್ಯಚರಣೆ ಬಿರುಸಿನಿಂದ ನಡೆಯಿತು.
ಅಂಬೇಡ್ಕರ ವೃತ್ತ, ಸರ್ದಾರ್ ವಲ್ಲಭಾಯಿ ಪಟೇಲ್ ವೃತ್ತ, ಬಾಲಾಜಿ ಮಂದಿರ, ಬಸವೇಶ್ವರ ವ್ರತ್ತ ಸೇರಿದಂತೆ ವಿವಿಧ ಪ್ರಮುಖ ರಸ್ತೆಗಳಲ್ಲಿನ ಅಂಗಡಿಗಳ ಮುಂಭಾಗದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ ವ್ಯವಸ್ಥೆಯಲ್ಲಿ ಫುಟ್ಪಾತ್ ತೆರವು ಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಅಂಜುಮ್ ತಬಸುಮ್, ಸಿಪಿಐ ಗುರು ಪಾಟೀಲ್, ಪಿಎಸ್‍ಐ ತಿಮ್ಮಯ್ಯ, ಸಂಚಾರಿ ಪಿಎಸ್‍ಐ ಬಸವರಾಜ್, ಸಿಬ್ಬಂದಿಗಳಾದ ಸೂರ್ಯಕಾಂತ, ರಾಜಶೇಖರ, ವಿಜಯಕುಮಾರ ಹಾಗೂ ಇತರರಿದ್ದರು.