ಸೆ.30ರಿಂದ ಮಲೆ ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಮಹಾಲಯ ಜಾತ್ರೆ
ಸಂಜೆವಾಣಿ ವಾರ್ತೆ
ಹನೂರು ಸೆ 27 :– ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 2024ನೇ ಸಾಲಿನಲ್ಲಿ ನಡೆಯುವ ಮಹಾಲಯ, ದಸರಾ, ದೀಪಾವಳಿ ಜಾತ್ರೆ ಹಾಗೂ ಕಾರ್ತಿಕ ಸೋಮವಾರ ಜಾತ್ರೆಗಳು ಸೆ. 30 ರಿಂದ ನಡೆಯಲಿದ್ದು, ಜಾತ್ರಾ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ.
ಸೆ.30ರಂದು ಮಹಾಲಯ ಜಾತ್ರಾ ಮಹೋತ್ಸವವು ಪ್ರಾರಂಭವಾಗುತ್ತದೆ. ಅ.1 ರಂದು ಚತುರ್ದಶಿ, ಶ್ರೀ ಸ್ವಾಮಿಗೆ ಎಣ್ಣೆಮಜ್ಜನ ಹಾಗೂ ವಿಶೇಷ ಸೇವೆ, ಉತ್ಸವಾದಿಗಳು, 2 ರಂದು ಮಹಾಲಯ ಅಮಾವಾಸ್ಯೆ ವಿಶೇಷ ಸೇವೆ ಮತ್ತು ಉತ್ಸವಾದಿಗಳು ನಡೆಯಲಿವೆ.
ಅ.3 ರಂದು ದಸರಾ ಜಾತ್ರಾ ಮಹೋತ್ಸವದ ಅಂಗವಾಗಿ ಶರನವರಾತ್ರಿ ಆರಂಭ, ಉಯ್ಯಾಲೋ ತ್ಸವ ಪ್ರಾರಂಭ, 11 ರಂದು ಮಹಾನವಮಿ, ಆಯುಧ ಪೂಜೆ, 12ರಂದು ವಿಜಯದಶಮಿ, ಕುದುರೆ ವಾಹನೋತ್ಸವ, ದಶಮಿ ಪೂಜೆಗಳು ಜರುಗಲಿವೆ.
ಅ.29ರಂದು ದೀಪಾವಳಿ ಜಾತ್ರೆ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ. 30 ರಂದು ಶ್ರೀ ಸ್ವಾಮಿಗೆ ಎಣ್ಣೆಮಜ್ಜನ ಹಾಗೂ ವಿಶೇಷ ಸೇವೆ ಉತವಾದಿಗಳು, 31ರಂದು ನರಕ ಚತುರ್ದಶಿ, ವಿಶೇಷ ಸೇವೆ ಮತ್ತು ಉತ್ಸವಾದಿಗಳು, ನ.1ರಂದು ದೀಪಾವಳಿ ಅಮಾವಾಸ್ಯೆ, ಹಾಲರುವೆ ಉತ್ಸವ, ವಿಶೇಷ ಸೇವೆ ಮತ್ತು ಉತ್ಸವಾದಿಗಳು ಹಾಗೂ 2ರಂದು ಬೆಳಿಗ್ಗೆ 7.50 ರಿಂದ 9 ಗಂಟೆಯವರೆಗೆ ದೀಪಾವಳಿ ಮಹಾರಥೋತ್ಸವ ನಡೆಯಲಿದೆ.
ನ.4ರಂದು ಮೊದಲನೇ ಕಾರ್ತಿಕ ಸೋಮವಾರ, 11ರಂದು ಎರಡನೇ ಕಾರ್ತಿಕ ಸೋಮವಾರ, 18 ರಂದು ಮೂರನೇ ಕಾರ್ತಿಕ ಸೋಮವಾರ, 25ರಂದು ನಾಲ್ಕನೇ ಕಾರ್ತಿಕ ಸೋಮವಾರದ ರಾತ್ರಿ ಶ್ರೀ ಮಹದೇಶ್ವರ ಜ್ಯೋತಿದರ್ಶನ, 29ರಂದು ಶ್ರೀ ಸ್ವಾಮಿಗೆ ಎಣ್ಣೆಮಜ್ಜನ ಸೇವೆ, ಕಾರ್ತಿಕ ಅಮಾವಾಸ್ಯೆ ಹಾಗೂ ಡಿಸೆಂಬರ್ 1ರಂದು ವಿಶೇಷ ಸೇವೆ ಉತ್ತವಾದಿಗಳು ಜರುಗಲಿವೆ. ಎಂದು ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.