ಸಾಲ ಸೌಲಭ್ಯವನ್ನು ಕಲ್ಪಿಸಲು ಅಕ್ಕಮಹಾದೇವಿ ಅಭಿವೃದ್ಧಿ ಸಹಕಾರ ಸಂಘ
ಸಂಜೆವಾಣಿ ವಾರ್ತೆ
ತಿ.ನರಸೀಪುರ.ಸೆ.27– ನೇರ ಸಾಲ ಸೌಲಭ್ಯವನ್ನು ಕಲ್ಪಿಸಲು ಅಕ್ಕಮಹಾದೇವಿ ಅಭಿವೃದ್ಧಿ ಸಹಕಾರ ಸಂಘವನ್ನು ಸ್ಥಾಪಿಸಲಾಗಿದ್ದು, ಸಂಘದ ಷೇರುದಾರರಾಗುವ ಮೂಲಕ ಆರ್ಥಿಕ ಸಾಲ ಸೌಲಭ್ಯವನ್ನು ಪಡೆಯಬೇಕು ಎಂದು ಸಂಘದ ಅಧ್ಯಕ್ಷ ಕೆ.ಜಿ.ಶಿವಪ್ರಸಾದ್ ಹೇಳಿದರು.
ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಅಕ್ಕಮಹಾದೇವಿ ಅಭಿವೃದ್ಧಿ ಸಹಕಾರ ಸಂಘದ ಕಚೇರಿಯಲ್ಲಿ ನಡೆದ 2023 24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ತಾಲೂಕು ಮಟ್ಟದಲ್ಲಿ ಅಹಂಕಾರಿ ಬ್ಯಾಂಕನ್ನ ಆರಂಭಿಸುವ ಚಿಂತನೆಯನ್ನು ಈ ಹಿಂದೆಯೇ ಮಾಡಲಾಗಿತ್ತು. ಷೇರುದಾರರು ಹಾಗೂ ಠೇವಣಿ ಹಣದ ಪ್ರಮಾಣ ಕಡಿಮೆಯಾಗಿದ್ದರಿಂದ ನಮ್ಮ ಯೋಜನೆಗೆ ಹಿನ್ನಡೆಯಾಗಿದೆ ಎಂದರು.
ಸಂಘದಿಂದ ಈಗಾಗಲೇ ಹಲವರಿಗೆ ಸಾಲ ಸೌಲಭ್ಯವನ್ನು ಕಲ್ಪಿಸಲಾಗಿದೆ. 2023-24ನೇ ಸಾಲಿನಲ್ಲಿ 1.32 ಲಕ್ಷ ನಿವ್ವಳ ಲಾಭವನ್ನು ಗಳಿಸಿದ್ದೇವೆ. ಗ್ರಾಮೀಣ ಜನತೆಗೂ ಸಹಕಾರಿ ಸಂಸ್ಥೆಗಳ ಸೇವಾ ಸೌಲಭ್ಯವನ್ನು ಕಲ್ಪಿಸಲಿಕ್ಕೆ ಷೇರುಧಾರರಾಗಲು ಮುಕ್ತ ಅವಕಾಶವನ್ನು ನೀಡಲಾಗಿದೆ. ಮುಂದಿನ ವರ್ಷದಿಂದ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕೆ.ಜಿ.ಶಿವಪ್ರಸಾದ್ ತಿಳಿಸಿದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ಬಣ್ಣ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ಉಪಾಧ್ಯಕ್ಷೆ ಸುಧಾ, ನಿರ್ದೇಶಕರಾದ ಮಹದೇವಮ್ಮ, ಎಂ.ಎಸ್.ಶಿವಮೂರ್ತಿ, ಸಿ.ಬಿ.ಹುಂಡಿ ಚಿನ್ನಸ್ವಾಮಿ, ಎಂ. ಇ.ಮಂಜುನಾಥ್, ಎನ್.ಲೋಕೇಶ್, ನಾಗೇಂದ್ರ, ಪ್ರಭುಸ್ವಾಮಿ, ಮಲ್ಲೇಶ್, ಪ್ರಸನ್ನ ಕುಮಾರ್, ಚಿಕ್ಕ ಮಾದಯ್ಯ, ಕಾರ್ಯದರ್ಶಿ ಎಂ.ಮಹದೇವಸ್ವಾಮಿ ಹಾಗೂ ಸದಸ್ಯರುಗಳು ಇದ್ದರು.