2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ
ಸಂಜೆವಾಣಿ ವಾರ್ತೆ
ತಿ.ನರಸೀಪುರ.ಸೆ.27- ಗ್ರಾಮೀಣಾಭಿವೃದ್ಧಿ ಬ್ಯಾಂಕಿನಿಂದ ಸಾಲಪಡೆದ ರೈತರು ಸಕಾಲದಲ್ಲಿ ಸಾಲ ಮರುಪಾವತಿಸಿದಾಗ ಮಾತ್ರವೇ ಲಾಭಾಂಶಗಳಿಸಲು ಸಾಧ್ಯ ಎಂದು ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷ ಕೆಂಪಯ್ಯನಹುಂಡಿ ಎಂ. ಮಹದೇವಣ್ಣ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಬ್ಯಾಂಕು ಕಳೆದ 88 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ.ತಾಲೂಕಿನಾದ್ಯಂತ ರೈತ ಸಮುದಾಯಕ್ಕೆ ಅರ್ಥ ಪೂರ್ಣವಾದ ನಿರಂತರವಾದ ಸೇವೆಯನ್ನು ಒದಗಿಸುತ್ತಾ ಬರುತ್ತಿದೆ ಎಂದರು.ನಮ್ಮ ಗ್ರಾಮೀಣಾಭಿವೃದ್ದಿ ಬ್ಯಾಂಕ್ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಸಾಲ ವಸೂಲಾತಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು,ರಾಜ್ಯದಲ್ಲಿ 10 ನೇ ಸ್ಥಾನ ಪಡೆದುಕೊಂಡಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
2024 ರ ಅಂತ್ಯಕ್ಕೆ 5960 ಎ ತರಗತಿ ಸದಸ್ಯರನ್ನು ಹೊಂದಿರುವ ಸಂಘವು 88.04 ಲಕ್ಷ ಷೇರು ಬಂಡವಾಳ ಹೊಂದಿರುತ್ತದೆ.ಸದರಿ ವರ್ಷದಲ್ಲಿ235.93 ಲಕ್ಷ ರೂ.ಗಳ ಹೊಸ ಸಾಲ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.2023-24 ನೇ ಸಾಲಿಗೆ 235.92 ಲಕ್ಷ ರೂ.ಗಳ ಆರ್ಥಿಕ ಹಂಚಿಕೆ ನೀಡಲಾಗಿದ್ದು,ಮುಂದಿನ ವರ್ಷ ಸುಮಾರು 5 ಕೋಟಿ ರೂ.ಗಳ ಸಾಲ ಸೌಲಭ್ಯ ವಿತರಿಸುವ ಗುರಿ ಹೊಂದಲಾಗಿದೆ,ಸಂಯುಕ್ತ ಯೋಜನೆ,ರೇಷ್ಮೆ ಯೋಜನೆ,ಕೋಳಿ ಸಾಗಣಿಕೆ ಯೋಜನೆ,ವೈಯಕ್ತಿಕ ಹೈನುಗಾರಿಕೆ ಯೋಜನೆಗಳಲ್ಲಿ 10 ಲಕ್ಷದವರೆಗೆ ಶೇ 3 ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಲಭ್ಯವಿದ್ದು,ರೈತ ಭಾಂದವರು ಯೋಜನೆಯ ಪ್ರಯೋಜನ ಪಡೆಯುವಂತೆ ಕರೆ ನೀಡಿದರು.
ಸಂಘದ ವ್ಯವಸ್ಥಾಪಕ ಎನ್.ಮಹೇಶ್ ಸಂಘದ ವಾರ್ಷಿಕ ವರದಿ ಮಂಡಿಸಿ ಬ್ಯಾಂಕ್2023-24 ನೇ ಸಾಲಿಗೆ 95.02 ರೂ.ಗಳ ಲಾಭಗಳಿಸಿದ್ದು 2023 ನೇ ಸಾಲಿನಲ್ಲಿ ನಷ್ಟವಾದ 105.66 ಲಕ್ಷ ರೂ.ಗಳ ನಷ್ಟವಿದ್ದು,ಲಾಭದಲ್ಲಿ ನಿವ್ವಳ ನಷ್ಟ ಕಳೆದು 10.64 ಲಕ್ಷ ರೂ.ಗಳ ನಿವ್ವಳ ನಷ್ಟ ಹೊಂದಿರುತ್ತದೆ.ಒಟ್ಟಾರೆ ಪ್ರಸಕ್ತ ಸಾಲಿನಲ್ಲಿ ಸಂಘವು ಪ್ರಸಕ್ತ ಸಾಲಿಗೆ 95.02 ಲಕ್ಷ ರೂ.ಗಳ ನಿವ್ವಳ ಲಾಭಗಳಿಸಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಸಂಘದ ಉಪಾಧ್ಯಕ್ಷ ಬಿ.ಎಂ.ಲಿಂಗರಾಜು, ನಿರ್ದೇಶಕರಾದ ಕೆ.ವಜ್ರೇಗೌಡ,ಎಂ.ಎಸ್.ಶಿವಮೂರ್ತಿ, ಬಿ.ಸಿ.ಪಾರ್ಥಸಾರಥಿ, ಎನ್.ಎನ್.ಮಹದೇವ ಸ್ವಾಮಿ,ಟಿ.ಎಸ್.ಸಿದ್ದರಾಜು, ಎನ್.ಲಿಂಗಪ್ಪಾಜಿ,ಎಂ.ನಾಗರತ್ನ,ಗಂಗಮ್ಮ,ಎಂ.ಮಲ್ಲಿಕಾರ್ಜುನ ಸ್ವಾಮಿ,ವಿರೂಪಾಕ್ಷ,ಪ್ರೇಮ್ ಕುಮಾರ್,ಸುಂದರ್,ಸಂಘದ ಪ್ರಭಾರ ಲೆಕ್ಕಣಿಗ ಪ್ರಭುಸ್ವಾಮಿ, ಬೆರಳಚ್ಚುಗಾತಿ ಟಿ.ಎಂ.ನಾಗರತ್ನ ಬಾಯಿ,ತನುಜ,ಬಿ.ಶಂಕರ ಸೇರಿದಂತೆ ಷೇರುದಾರರು,ಸದಸ್ಯರು ಮತ್ತಿತರಿದ್ದರು.