ಶಿಕ್ಷಕ ವೃತ್ತಿ ಸರ್ವೋಚ್ಚ ಪರಮ ಪವಿತ್ರ ವೃತ್ತಿ: ಅಕ್ಕಮಹಾದೇವಿ ಅಮ್ಮನವರು
ಚಿಕ್ಕಪಡಸಲಗಿ (ತಾ: ಜಮಖಂಡಿ) :ಜು.2: ಶಿಕ್ಷಕ ವೃತ್ತಿ ಕೇವಲ ವೃತ್ತಿಯನ್ನಾಗಿ ಪರಿಗಣಿಸದೇ ನಿಷ್ಟೆ ಬದ್ದತೆಯ ಕಾರ್ಯಕ್ಷಮತೆಯ ಸೇವಾ ಮನೋಭಾವದಿಂದ ಕಾಯಕ ಗೈದು ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸುವ ಗುರುತರ ಹೊಣೆಗಾರಿಕೆ ಶಿಕ್ಷಕ ಸಮೂಹದ ಮೇಲಿದೆ ಎಂದು ಚಿಕ್ಕಪಡಸಲಗಿ ಮಠದ ಮಾತೋಶ್ರೀ ಅಕ್ಕಮಹಾದೇವಿ ಅಮ್ಮನವರು ಹೇಳಿದರು.
ಇಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಬಸವರಾಜ ಅನಂತಪುರ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸುದೀರ್ಘ 39 ವರ್ಷಗಳಕಾಲ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಪ್ರಯುಕ್ತ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ಮರಣೀಯ ಬಿಳ್ಕೋಡುಗೆ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಸಮಾಜದಲ್ಲಿ ಶಿಕ್ಷಕ ವೃತ್ತಿಗೆ ಎಲ್ಲಿಲ್ಲದ ಪ್ರಾಮುಖ್ಯತೆ, ಗೌರವಯುತ ಸ್ಥಾನ ಮಾನಗಳಿವೆ.ಎಲ್ಲಕ್ಕಿಂತಲೂ ಮಿಗಿಲಾಗಿ ಅದು ಸರ್ವಶ್ರೇಷ್ಠ ಪರಮಪವಿತ್ರವಾಗಿದೆ.ಹೀಗಾಗಿ ಶಿಕ್ಷಕ ವೃತ್ತಿಯಲ್ಲಿ ಪ್ರಾಮಾಣಿಕತೆಯುಳ್ಳ ಸೇವೆಯೇ ಮೌಲ್ಯಾಧಾರಿತವಾಗಿದೆ.ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸಿ ಭವ್ಯತೆಯ ಬೆಳಕು ಗುರುಬಳಗ ಮೂಡಿಸಬೇಕು.ಇಲ್ಲಿ ಅನಂತಪುರ ಗುರುಗಳು ಗೈದ ಸೇವೆ ಮಾದರಿಯಾಗಿದೆ. ಅವರ ಸೇವಾ ನಿವೃತ್ತಿ ಜೀವನ ಶುಭಕರವಾಗಲೆಂದು ಹಾರೈಸಿದರು.
ಸ್ವಾವಲಂಬಿ ಬದುಕಿಗೆ ಶಿಕ್ಷಣ ಬೇಕು.ಹೊಸತನ ಕಲಿಯುವ ಹಾಗೂ ಕಲಿಸುವ ಅಭಿಲಾಷೆ ಶಿಕ್ಷಕರಲ್ಲಿರಬೇಕು.ಉತ್ತಮ ನೈತಿಕತೆಯುಳ್ಳ ಗುಣಮಟ್ಟದ ಶಿಕ್ಷಣ ಇಂದಿನ ಮಕ್ಕಳಿಗೆ ಬೇಕು.ಭವ್ಯ ಭಾರತದ ನಿಮಾ9ಣಕ್ಕೆ ಮೊದಲು ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಗುಣಾತ್ಮಕ ಕಲಿಕೆಯ ಶಿಕ್ಷಣ ಹಾಗೂ ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ. ಇಂಥ ಶಿಕ್ಷಣ ಈ ಶಾಲೆಯಲ್ಲಿ ಮಕ್ಕಳಿಗೆ ದೊರೆಯುತ್ತಿರುವದು ಸಂತಸದ ವಿಚಾರ ಎಂದರು.
ಮುಖ್ಯ ಅತಿಥಿ ಮುದ್ದೇಬಿಹಾಳ ಎಮ್.ಜಿ.ವ್ಹಿ.ಸಿ. ಕಾಲೇಜಿನ ಪೆÇ್ರ, ಎಂ.ಎ.ಬಿರಾದಾರ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶಿಕ್ಷಕರು ಉತ್ಕಟ ಬೋಧನಾ ಇಚ್ಛಾಶಕ್ತಿ ತೋರಬೇಕು. ಬದ್ದತೆ ಇಲ್ಲದ ಕಾಯಕ ನಿಷ್ಪ್ರಯೋಜಕ. ಅವುಗಳಿಗೆ ಬೆಲೆ,ಅರ್ಥವಿಲ್ಲ. ಆದರೆ ಇಲ್ಲಿ ಬಸವರಾಜ ಅನಂತಪುರ ಗುರುಗಳು ಕಾಯಕ ಶ್ರಮದ ಶ್ರದ್ಧೆಯಿಂದ ವ್ಯಕ್ತಿತ್ವದ ಮೆರುಗು ಪಡೆದಿದ್ದಾರೆ. ಸ್ಥಾನಮಾನಕ್ಕಿಂತ ಸ್ವಚ್ಛತೆಯ ಶ್ರದ್ಧೆ ಬಹಳ ಮುಖ್ಯ. ಹಿರಿತನಕ್ಕಿಂತ ಪ್ರಾಮಾಣಿಕತೆ ಮುಖ್ಯ. ಬೆಲೆಬಾಳುವ ವಸ್ತುಗಳಿಗಿಂತ ಶುದ್ಧೀಕರಣದ ನಡೆ,ನುಡಿ,ಭಾವ,ನೋಟ ಮೌಲ್ಯಗಳು ಬಹುಮುಖ್ಯ. ಅನಂತಪುರ ಅವರು ಗೈದ ಕಾಯಕ ಮರೆಯಲಾಗದು.ಅಮೂರ್ತವಾಗಿ ಕೆಲಸ,ಕಾಯಕ ಮಾಡಿದ್ದಾರೆ. ಅವರ ನಡೆ,ನುಡಿ ಗಟ್ಟುಗಳು ಭಿನ್ನವಾಗಿವೆ.ಪ್ರತಿಸ್ಪಂದನೆ ಭಾವ ಹಿತಕರವಾಗಿದೆ.ಅವರ ಕಾಯಕ ಕರ್ತವ್ಯದ ಮಿಡಿತಗಳು ಎಲ್ಲರಿಗೂ ಪ್ರಿಯವಾಗಿವೆ.ಸಹಜಭಾವದ ಅನಂತಪುರ ಗುರುಗಳ ವಿಶ್ರಾಂತ ಜೀವನ ಭಗವಂತನ ಅನುಗ್ರಹದಿಂದ ಸುಖಿ ಅನಂತಮಯವಾಗಿರಲಿ. ಇಂದಿನ ಬಿಳ್ಕೋಡುಗೆ ಘಳಿಗೆ ನಿಜಕ್ಕೂಅವಿಸ್ಮರಣೀಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಜಮಖಂಡಿ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಬೋಸಲೆ ಮಾತನಾಡಿ, ಸರಳ,ಸಜ್ಜನ ವ್ಯಕ್ತಿತ್ವದ ಗುಣಗಳಿಂದ ಅನಂತಪುರ ಅವರು ಗುರುತಿಸಿಕೊಂಡಿದ್ದಾರೆ.ಮಕ್ಕಳ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ.ಈ ಹಿರಿಯ ಪರಿಶ್ರಮ ಜೀವಿ ಮಕ್ಕಳ ಕ್ರೀಡಾಸಕ್ತಿಗೆ ಉತ್ತೇಜಿಸಿದ್ದಾರೆ. ಜವಾಬ್ದಾರಿಯಿಂದ, ಸನ್ನಡೆತೆಯಿಂದ ಕರ್ತವ್ಯ ಪಾಲನೆ ಮಾಡಿ ಬದುಕಿನ ಮೌಲ್ಯ ಗೌರವ ಹೆಚ್ಚಿಸಿಕೊಂಡು ಆದರ್ಶರಾಗಿ ನಿವೃತ್ತಿ ಹೊಂದುತ್ತಿರುವುದು ಸಂತಸ.ದೈಹಿಕ ಶಿಕ್ಷಣದ ಕಾಯಕ ವೃತ್ತಿಗೆ ಅವರು ದಕ್ಷತೆಯಿಂದ ಜೀವ ಸಮಪಿ9ಸಿದ್ದಾರೆ.ವಿಶ್ರಾಂತ ಬದುಕು ಕೂಡಾ ಹಸನತೆಯಿಂದ ಸಾಗಲಿ ಎಂದು ಶುಭ ಹಾರೈಸಿದರು.
ಹಿರೇಪಡಸಲಗಿ ಸಿ.ಆರ್.ಪಿ.ಆರ್.ಎಚ್.ಮದ್ನೂರ, ಶಿಕ್ಷಕ ಜೈಪಾಲ ದೈಗೊಂಡ ಮಾತನಾಡಿ, ಅನಂತಪುರ ಅವರ ವೃತ್ತಿ ಜೀವನವು ನಮ್ರತೆಯಿಂದ ಸಾಗಿದೆ. ಅನನ್ಯ ಸಾಮಥ್ರ್ಯಕ್ಕೆ ಮಾದರಿಯಾಗಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪುರ, ತಮ್ಮ ಸೇವಾ ವೃತ್ತಿ ತೃಪ್ತಿಕರವಾಗಿದೆ. ಅದಕ್ಕೆಲ್ಲ ಗದುಗಿನ ಲಿಂ.ತೋಂಟದ ಸಿದ್ದಲಿಂಗ ಪೂಜ್ಯರ ಹಾಗೂ ತೋಂಟದ ಡಾ.ಸಿದ್ದರಾಮ ಮಹಾಸ್ವಾಮಿಗಳವರ ಕೃಪಾಶೀವಾ9ದ ಮತ್ತು ಸಂಸ್ಥೆಯ ಕ್ರಿಯಾಶೀಲ ಕಾರ್ಯದಶಿ9ಗಳಾದ ಪೆÇ್ರ,ಎಸ್.ಎಸ್.ಪಟ್ಟಣಶೆಟ್ಟರ ಗುರುಗಳ ಸ್ಪೂತಿ9ಯೇ ಕಾರಣ. ಸೇವಾ ವೃತ್ತಿ ಜೀವನದಲ್ಲಿ ಸಹಕರಿಸಿ ಪೆÇ್ರೀತ್ಸಾಹಿಸಿ ಪ್ರೀತಿಭಾವ ತೋರಿದ ಸಹೋದ್ಯೋಗಿಗಳೆಲ್ಲರಿಗೂ, ಗ್ರಾಮದ ಸಹೃದಯಿ ಜನತೆಗೂ ಗಣ್ಯರಿಗೂ,ಪಾಲಕ ಬಳಗದವರಿಗೂ ತಾವು ಚಿರಋಣಿ ಎಂದು ಕೃತಜ್ಞತೆ ಸಲ್ಲಿಸಿದರು.
ನಿವೃತ್ತ ದೈಹಿಕ ಶಿಕ್ಷಕ ಮಹದೇವ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪೆÇೀಲೀಸ್ ಅಧಿಕಾರಿ ಕೆ.ಜಿ.ಅನಂತಪುರ, ಯಲ್ಲರಟ್ಟಿ ತಿಪ್ಪಣ್ಣ ಕವಟಕೊಪ್ಪ,ಅಜು9ಣಗಿಯ ಡಾ.ಎಚ್.ಬಿ.ಹುಕ್ಕೇರಿ, ವಿಶ್ರಾಂತ ಶಿಕ್ಷಕ ಭಗವಂತರಾಯ ಆಲಗೊಂಡ, ಅಪ್ಪು ಧರಿಗೌಡ, ಬಾಹುಬಲಿ ನ್ಯಾಮಗೌಡ,ಸದಾಶಿವ ಕುಂಬಾರ, ಶಾಂತಪ್ಪ,ರಾಜು ಮಾಳಿ, ಮಹಾಲಿಂಗ ಹುದ್ದಾರ, ರಾಜ್ಯ ಪ್ರಶಸ್ತಿ ವಿಜೇತ ಶರಣಪ್ಪ ಅರೆವ್ವಗೋಳ ಮೊದಲಾದವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಮಡಿವಾಳ ಮಾಚಿದೇವ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ರಾಯಪ್ಪ ಸಣ್ಣಮನಿ, ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ಶಿವಶರಣ ಹರಳಯ್ಯ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್.ಎಸ್.ಅರಬಳ್ಳಿ.ಎಸ್.ಜಿ.ಬಾಳೇಕುಂದ್ರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಕಲ್ಯಾಣಿ, ಹೈಸ್ಕೂಲಿನ ವೀರಣ್ಣ ದೇಸಾಯಿ, ಸದಾಶಿವ ಸಿದ್ದಾಪುರ, ಲೋಹಿತ ಮಿಜಿ9, ಗುರುಮಾತೆಯರಾದ ಎಸ್.ಎಂ.ಹತ್ತಳ್ಳಿ,ಕವಿತಾ ಅಂಬಿ,ಪಿ.ವ್ಹಿ.ತೇಲಸಂಗ, ಅಕ್ಷರ ದಾಸೋಹದ ಅಡುಗೆ ಸಿಬ್ಬಂದಿಗಳು, ಶಾಲಾ,ಕಾಲೇಜುಗಳ ಗುರುಬಳಗ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸ್ವಾತಿ ಯಲಗುದ್ರಿ,ಕೀತಿ9 ಕಲ್ಯಾಣಿ ಅನಿಸಿಕೆ ವ್ಯಕ್ತಪಡಿಸಿದರು. ಜಮಖಂಡಿ ತಾಲ್ಲೂಕಿನ ಎಲ್ಲ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಭಾಗವಹಿಸಿ ಅನಂತಪುರ ಗುರುಗಳಿಗೆ ಶುಭ ಹಾರೈಸಿದ್ದು ವಿಶೇಷ.
ಶಿಕ್ಷಕ ಸುರೇಶ ಸಂತಿ ಸ್ವಾಗತಿಸಿದರು.ಸದಾಶಿವ ಸಿದ್ದಾಪುರ ನಿರೂಪಿಸಿದರು.ಲೋಹಿತ ಮಿಜಿ9 ವಂದಿಸಿದರು.
ಸ್ಮರಣೀಯ ಕ್ಷಣ..ಭಾವುಕ ತೃಣ ! ಈ ಬೀಳ್ಕೊಡುವ ಸಮಾರಂಭ ಅಭೂತಪೂರ್ವ ವಿಶೇಷತೆಗೆ ಸಾಕ್ಷಿಯಾಯಿತು. ದೈಹಿಕ ಶಿಕ್ಷಣ ಶಿಕ್ಷಕ ಅನಂತಪುರ ಅವರು ನಿವೃತ್ತಿ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳು,ಗುರು,ಹಿರಿಯರು, ಗುರುಮಾತೆಯರು,ಗ್ರಾಮದ ಜನತೆ,ಹಿತೈಷಿಗಳ ಕಣ್ಗಾವಲು ತೇವಗೊಂಡವು. ವಿದ್ಯಾರ್ಥಿಗಳ ಮನಗಳು ಭಾವುಕತೆಯಲ್ಲಿ ಮಿಂದವು.ಮಕ್ಕಳು ಸರತಿ ಸಾಲಿನಲ್ಲಿ ಬಂದು ತಮ್ಮ ಮೆಚ್ಚಿನ ಗುರುವಿನ ಪಾದಸ್ಪರ್ಶಕ್ಕೆ ತೆಲೆಬಾಗಿದರು. ವಿನಮ್ರತೆಯಿಂದ ನಮಿಸಿದರು. ಧನ್ಯತೆಭಾವದಲ್ಲಿ ತೇಲಿ ಮನಸ್ಸು ಸಮಾಧಾನಿಸಿಕೊಂಡರು. ಗುರುವಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಪೆÇೀಟೋಗಳನ್ನು ಕ್ಲಿಕಿಸಿಕೊಂಡು ಖುಷಿ ಹಂಚಿಕೊಂಡರು. ಕಾರ್ಯಕ್ರಮಕ್ಕೂ ಮುನ್ನ ಬಸವರಾಜ ಅನಂತಪುರ, ಶ್ರೀಮತಿ ಲಕ್ಷ್ಮೀ ಬಸವರಾಜ ಅನಂತಪುರ ದಂಪತಿಗಳು ತೇರೆದ ಕಾರೊಂದರಲ್ಲಿ ಮಕ್ಕಳೆಡೆ ಕೈಯಾಡಿಸುತ್ತಾ,ನಮಿಸುತ್ತಾ ಶಾಲಾವರಣದಲ್ಲಿ ಸುತ್ತಾಕ್ಕಿದ್ದು,ಮಕ್ಕಳು ಅದನ್ನು ಕಂಡು ಶಿಳ್ಳೆ,ಚಪ್ಪಾಳೆ, ಕೇಕೆ ಹಾಕಿ ಸ್ವಾಗತಿಸಿದರು.ವೈವಿಧ್ಯತೆ ಅಪರೂಪದ ದೃಶ್ಯಕ್ಕೆ ಬಿಳ್ಕೋಡುಗೆ ಘಳಿಗೆ ಸಾಕ್ಷಿಯಾಗಿತ್ತು.
ಚಿನ್ನದೊಂದಿಗೆ ಸನ್ಮಾನ ! ಅನಂತಪುರ ದಂಪತಿಗಳಿಗೆ ಬಂಗಾರ ಹಾಕಿ ಸಂಪ್ರೇಮದಿಂದ ಸನ್ಮಾನಿಸಿ ಅಗಸಿಬಾಗಿಲ ಶಿಕ್ಷಕಿ ಶ್ರೀಮತಿ ವನಿತಾ ಹಾಗೂ ಪೆÇ್ರ,ಮಲ್ಲಿಕಾರ್ಜುನ ಬಿರಾದಾರ ಅಭಿಮಾನದ ಧನ್ಯತೆ ಮೆರೆದರು. ಶಿಕ್ಷಕ ಬಳಗ ನೆನಪಿನ ಸವಿಕಾಣಿಕೆಗಳನ್ನು ನೀಡಿ ಸನ್ಮಾನಿಸಿ ಗೌರವಿಸಿದರು. ಸಿಹಿ ಭೋಜನದ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯಿತು.