ಅಟಲ್‍ಬಿಹಾರಿ ವಾಜಪೇಯಿ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ
ವಿಜಯಪುರ,ಜು.2:ಸಿದ್ದೇಶ್ವರ ಸಂಸ್ಥೆ ಅಂಗವಾದ ಅಟಲ್ ಬಿಹಾರಿ ವಾಜಪೇಯಿ ಶಾಲೆಯಲ್ಲಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.
ವೈದ್ಯೋ ನಾರಾಯಣ ಹರಿಯ ಎಂಬಂತೆ ಶಾಲೆಯಲ್ಲಿ ಮಕ್ಕಳು ತಮ್ಮ ನೃತ್ಯ ಹಾಗೂ ಭಾಷಣ ದೊಂದಿಗೆ ವೈದ್ಯರ ದಿನಾಚರಣೆ ಅರಿವನ್ನು ಮೂಡಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿ ಅಕ್ಕಿ ಆಸ್ಪತ್ರೆ ಸ್ತ್ರೀ ರೋಗ ತಜ್ಞೆ ರಾಜೇಶ್ವರಿ ಖೂಬಾ ಅವರು ವೈದ್ಯರ ದಿನಾಚರಣೆ ಅಂಗವಾಗಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ದೇಹವನ್ನು ಸದೃಢ ಹಾಗೂ ಉಲ್ಲಾಸದಿಂದ ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ ಹಾಗೂ ಯೋಗದ ಮಹತ್ವವನ್ನು ತಿಳಿಸಿದರು.
ಅದೇ ರೀತಿಯಾಗಿ ಶಾಲೆಯ ಪ್ರಾಂಶುಪಾಲೆ ಐಶ್ವರ್ಯ ಸಂಗಮ ಅವರು ದೇಹದಲ್ಲಿ ಅನಾರೋಗ್ಯ ಉಂಟಾದಾಗ ಸ್ವ ಚಿಕಿತ್ಸೆ ಪಡೆಯದೆ, ವೈದ್ಯರ ಸಲಹೆ ಪಡೆದುಕೊಳ್ಳುವುದು ಅತ್ಯುತ್ತಮ ಎಂದು ತಿಳಿಸಿದರು.
ಅಟಲ್ ಬಿಹಾರಿ ವಾಜಪೇಯಿ ಶಾಲೆಯ ನಾಮನಿರ್ದೇಶಕ ಬಸವರಾಜ ಸೂಗೂರು ಅವರು ಮಕ್ಕಳನ್ನು ಉದ್ದೇಶಿಸಿ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಯೋಗ, ಪೌಷ್ಟಿಕ ಆಹಾರ ಅತಿ ಮುಖ್ಯ ಎಂದು ತಿಳಿಸಿದರು.