ಕೇಂದ್ರದಿಂದ ಮೂರು ಅಪರಾಧ ಕರಾಳ ಕಾನೂನು ಜಾರಿ:ಎಸ್‍ಯುಸಿಐ ಖಂಡನೆ
ವಿಜಯಪುರ,ಜು.2:ಸಾರ್ವಜನಿಕ ಅಭಿಪ್ರಾಯ ಮತ್ತು ನ್ಯಾಯಶಾಸ್ತ್ರಜ್ಞರ ಮತ್ತು ಇತರ ಗಣ್ಯ ವ್ಯಕ್ತಿಗಳ ಧ್ವನಿಯನ್ನು ಧಿಕ್ಕರಿಸಿ, ಕೇಂದ್ರ ಬಿಜೆಪಿ ಸರ್ಕಾರ ಮೂರು ಕರಾಳ ಅಪರಾಧ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಎಸ್‍ಯುಸಿಐ ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನರೆಡ್ಡಿ ಖಂಡಿಸಿದ್ದಾರೆ.
ಈ ಹಿಂದೆ ವಸಾಹತುಶಾಹಿ ಆಳ್ವಿಕೆಯಲ್ಲಿ ಜಾರಿಯಾದ ಶಾಸನಗಳ ಬದಲಿಯಾಗಿ ಈ ಕಾನೂನುಗಳು ಎಂದು ಹೇಳಲಾಗಿದ್ದರೂ, ವಾಸ್ತವವಾಗಿ ಇವು ಹೆಚ್ಚು ಕಠೋರ ಮತ್ತು ನಿರ್ದಯವಾಗಿದ್ದು ಹಾಗೂ ದೇಶವನ್ನು ಪೆÇಲೀಸ್ ರಾಜ್ ಆಗಿ ಪರಿವರ್ತಿಸಲು ಉದ್ದೇಶಿಸಿವೆ. ಕಳೆದ ಹತ್ತು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಅಘೋಷಿತ ತುರ್ತುಪರಿಸ್ಥಿತಿ ಮತ್ತು ಫ್ಯಾಸಿಸ್ಟ್ ನಿರಂಕುಶ ಆಡಳಿತವನ್ನು ಮುಂದುವರಿಸಲು ಹಾಗೂ ದುಡಿಯುವ ಜನರ ಬದುಕನ್ನು ಮತ್ತಷ್ಟು ವಿನಾಶಕಾರಿಯಾಗಿಸಲು ಬಿಜೆಪಿ ಸರ್ಕಾರವು ನಿರ್ಧರಿಸಿದೆ ಎಂಬುದು ಸ್ಪಷ್ಟವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾನೂನುಗಳನ್ನು ತಕ್ಷಣವೇ ರದ್ದುಗೊಳಿಸಬೇಕು. ಎಲ್ಲಾ ಜನತಾಂತ್ರಿಕ-ಮನಸ್ಸಿನ ಜನರು, ನ್ಯಾಯಶಾಸ್ತ್ರಜ್ಞರು ಮತ್ತು ಬುದ್ಧಿಜೀವಿಗಳು ಈ ಕಾನೂನುಗಳ ರದ್ದತಿಗೆ ಒಗ್ಗಟ್ಟಿನ ಧ್ವನಿಯನ್ನು ಎತ್ತುವಂತೆ ಅವರು ಕರೆ ನೀಡಿದ್ದಾರೆ.