ಪೋಲಿಸ್ ಇಲಾಖೆಯ ಕಾರ್ಯ ಶ್ಲಾಘನೀಯವಾದದ್ದು :ಸಚೀನ ಚಲುವಾದಿ
ಕೆಂಭಾವಿ:ಜು.2:ಸಾರ್ವಜನಿಕರ ಹಿತಕ್ಕಾಗಿ ಅನೇಕ ಇಲಾಖೆಗಳಿದ್ದರು ಅವುಗಳಲ್ಲಿ ಪೆÇೀಲಿಸ್ ಇಲಾಖೆ ಕಾರ್ಯ ಅತ್ಯಂತ ಮಹತ್ವವಾದದ್ದು ನೊಂದು ಬಂದವರ ಕಣ್ಣೀರೊರೆಸುವ ಕೆಲಸ ನಮ್ಮದು ಎಂದು ಸಿಪಿಆಯ್ ಸಚೀನ ಚಲುವಾದಿ ಹೇಳಿದರು ರವಿವಾರ ಕೆಂಭಾವಿ ಠಾಣೆಯ ಅಪರಾಧ ವಿಭಾಗದ ಪಿಎಸ್‍ಐ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವೆಂಕಣ್ಣ ಶಹಪೂರಕರ್ ಅವರ ಬಿಳ್ಕೋಡುಗೆ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು 35 ವರ್ಷಗಳ ಕಾಲ ಇಲಾಖೆಯಲ್ಲಿ ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲದೆ ಕಾರ್ಯ ನಿರ್ವಹಿಸಿದ ವೆಂಕಣ್ಣ ಅವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಹೇಳಿದರು.ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೆಂಕಣ್ಣ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು .ನಂತರ ಮಾತನಾಡಿದ ವೆಂಕಣ್ಣ ಶಹಪೂರಕರ್ ನನ್ನ ವೃತ್ತಿ ಜೀವನದಲ್ಲಿ ನನ್ನ ಕುಟುಂಬದವರಿಗಿಂತ ಇಲಾಖೆಯ ಕೆಲಸಕ್ಕೆ ನಾನು ಬಹಳ ಒತ್ತು ಕೊಟ್ಟಿದ್ದೇನೆ ಸೇವಾವಧಿಯಲ್ಲಿ ಅಧಿಕಾರಗಳ ಮತ್ತು ಸಿಬ್ಬಂದಿಗಳ ಸಹಕಾರ
ಯಾವತ್ತು ಮರೆಯುವುದಿಲ್ಲ ಎಂದು ಭಾವುಕ ನುಡಿಗಳನ್ನು ನುಡಿದರು ಈ ಸಂದರ್ಭದಲ್ಲಿ ಕೆಂಭಾವಿ ಠಾಣೆಯ ಪಿಎಸ್ ಐ ರಾಜಶೇಖರ ರಾಠೋಡ,ಸೇರಿದಂತೆ ಹುಣಸಗಿ ಶಹಾಪೂರ ಸುರಪೂರ ಠಾಣೆಯ ಪಿಎಸ್‍ಐ ಗಳಾದ ಭಾಗಣ್ಣ .ಚಂದ್ರಕಾಂತ ,ಹಣಮಂತ್ರಾಯ ,ಸಿದ್ದಣ್ಣ,ಕೃಷ್ಣ ಸುಬೇದಾರ,ಅಯ್ಯೂಬ ಸೇರಿದಂತೆ ಕೆಂಭಾವಿಕೊಟ್ಯ
ಠಾಣೆಯಲ್ಲಿ ಯಾವುದೇ ರೀತಿಯ ಕೆಲಸ ಕಾರ್ಯಗಳಿರಲ್ಲಿ ವೆಂಕಣ್ಣನವರು ಮೊದಲಿಗೆ ಹೋಗಿ ಜನರ ಸಮಸ್ಯೆಗಳಗೆ ಸ್ಪಂದಿಸುತ್ತಿದ್ದರು ಹಿರಿಯ ವಯಸ್ಸಿನವರಾದ ಅವರು ಎಲ್ಲರೊಂದಿಗೆ ಉತ್ತಮ ಬಾಂದವ್ಯ ಹೊಂದಿದವರು ಅನೇಕ ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ವೆಂಕಣ್ಣನವರ ಪಾತ್ರ ಮುಖ್ಯವಾದದ್ದು ಇವರ ಸಲಹೆ ಸಹಕಾರ ಯುವ ಸಿಬ್ಬಂದಿಗಳಿ ಅಗತ್ಯವಾಗಿದೆ .
ರಾಜಶೇಖರ ರಾಠೋಡ
ಪಿಎಸ್‍ಐ ಕೆಂಭಾವಿ ಠಾಣೆ