ಮರಿಗೆಮ್ಮ ದೇವಿ ಕಳಸಾರೋಹಣ ಕಾರ್ಯಕ್ರಮ: ಬಂಡೆಪ್ಪ ಖಾಶೆಂಪುರ್ ಭಾಗಿ
ಬೀದರ್ :ಜು.02: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದಲ್ಲಿ ಭಾನುವಾರ ನಡೆದ ಮರಿಗೆಮ್ಮ ದೇವಿ ಮಂದಿರದ ಕಳಸಾರೋಹಣ ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡರು.
ಕಳೆದ ಅನೇಕ ದಿನಗಳಿಂದ ಮರಿಗೆಮ್ಮ ದೇವಿ ಮಂದಿರದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಭಾನುವಾರ ಮಧ್ಯಾಹ್ನ ಗ್ರಾಮದ ವಿವಿಧೆಡೆ ಭಾಜಾ – ಭಜೇಂತ್ರಿಗಳೊಂದಿಗೆ ಜಿನಿಜಿನಿ ಮಳೆಯ ನಡುವೆಯೇ ಮೆರವಣಿಗೆಯೊಂದಿಗೆ ಕಳಸವನ್ನು ಮಂದಿರಕ್ಕೆ ತರಲಾಯಿತು.
ಬಳಿಕ ಗ್ರಾಮಸ್ಥರ ಸಮ್ಮುಖದಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಮರಿಗೆಮ್ಮ ದೇವಿ ಮಂದಿರಕ್ಕೆ ಕಳಸ ಏರಿಸುವ ಮೂಲಕ ಕಳಸಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಕಾರ್ಯಕ್ರಮದ ನಿಮಿತ್ತವಾಗಿ ಗ್ರಾಮದಲ್ಲಿ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಬಾಬುರಾವ್ ತಮಗೊಂಡ, ಮಾರುತಿ ವಗ್ಗೆ, ಮಾರುತಿ ಬಸಗೊಂಡ, ವಿಶ್ವನಾಥ ಬಾಲೇಬಾಯಿ, ಶರಣಪ್ಪ ಖಾಶೆಂಪುರ್, ಭಜರಂಗ ತಮಗೊಂಡ, ಯೊಗೇಶ್ ವಗ್ಗೆ, ಮಲ್ಲು ಮುದಕಪ್ಪನವರ್, ರಾಜು ವಗ್ಗೆ ಸೇರಿದಂತೆ ಅನೇಕರಿದ್ದರು.