ಸಮಾಜ ಸೇವಕಿ ರೂಪಾ ಜಿ ಅಲ್ಲೂರ ಸನ್ಮಾನ
ಕಲಬುರಗಿ:ಜು.2: ಇತ್ತಿಚೆಗೆ ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ವತಿಯಿಂದ ಆಯೋಜಿಸಿದ್ದ ಶರಣ ಸಾಹಿತ್ಯ ಮತ್ತು ಸಾಂಸ್ಕøತಿಕ ಸಮ್ಮೇಳನದಲ್ಲಿ ಸೇಡಂನ ಸಮಾಜ ಸೇವಕಿ ರೂಪಾ ಜಿ ಅಲ್ಲೂರ ಅವರನ್ನು ಸಾಮಾಜಿಕ ಕ್ಷೇತ್ರದಲ್ಲಿನ ಸೇವೆ ಗುರುತಿಸಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ನೀಲೂರ ಶ್ರೀಗಳು, ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ, ಸಮ್ಮೇಳನದ ಸಂಚಾಲಕ ಪೆÇ್ರ ಯಶವಂತರಾಯ ಅಷ್ಠಗಿ,ಡಾ ಕಲ್ಯಾಣರಾವ ಜಿ ಪಾಟೀಲ್,ಡಾ ಸಿದ್ದರಾಮ ಹೊನ್ಕಲ್, ಸಾಹಿತಿ ಅಪ್ಪಾರಾವ ಅಕ್ಕೊಣಿ,ಡಾ ಆನಂದ ಸಿದ್ದಾಮಣಿ, ಗುಂಡಪ್ಪ ಬಿ ಅಲ್ಲೂರ,ಅಂಬಾರಾಯ ಮಡ್ಡೆ, ಬಸವಂತರಾಯ ಕೋಳಕೂರ್ , ಅಂಬಾರಾಯ ಕೋಣೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.