ನಾಗಮಾರಪಳ್ಳಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ
ಬೀದರ್:ಜು.2: ನಗರದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿ ಸೋಮವಾರ ವೈದ್ಯರ ದಿನ ಆಚರಿಸಲಾಯಿತು.
ಆಸ್ಪತ್ರೆಯ ನಿರ್ದೇಶಕ ತರುಣ್ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ವೈದ್ಯರ ಕೊಡುಗೆಯನ್ನು ಕೊಂಡಾಡಿದರು. ರೋಗಿಗಳ ಪ್ರಾಣ ಉಳಿಸಲು ವೈದ್ಯರು ನಡೆಸುವ ಪ್ರಯತ್ನಕ್ಕೆ ಬೇರೆ ಯಾವುದೂ ಸರಿಸಾಟಿಯಿಲ್ಲ. ಈ ಕಾರಣಕ್ಕಾಗಿಯೇ ವೈದ್ಯರನ್ನು ದೇವರನ್ನಾಗಿ ಕಾಣಲಾಗುತ್ತದೆ ಎಂದು ಹೇಳಿದರು.
ಆರೋಗ್ಯ ಕ್ಷೇತ್ರ ಅತ್ಯಂತ ಮಹತ್ವದ್ದಾಗಿದೆ. ಒಟ್ಟಾರೆ, ದೇಶದ ಅಭಿವೃದ್ಧಿಯಲ್ಲಿ ಈ ಕ್ಷೇತ್ರದ ಕೊಡುಗೆ ಹೆಚ್ಚಿದೆ. ಆರೋಗ್ಯ ಉತ್ತಮವಾಗಿದ್ದರಷ್ಟೇ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಈ ಹಿನ್ನೆಲೆಯಲ್ಲಿ ವೈದ್ಯರ ಪಾತ್ರ ಹಿರಿದಾಗಿದೆ ಎಂದು ತರುಣ್ ನಾಗಮಾರಪಳ್ಳಿ ಹೇಳಿದರು.
ಸಮಾರಂಭದಲ್ಲಿ ಆಸ್ಪತ್ರೆಯ ವೈದ್ಯರನ್ನು, ಸಿಬ್ಬಂದಿಯನ್ನು ಸನ್ಮಾನಿಸಿ, ಗೌರವಸಲಾಯಿತು. ಡಾ. ವೈಜನಾಥ ತೂಗಾವೆ, ಡಾ.ಬಿ.ಎಸ್. ಪ್ರಭಾ, ಆಸ್ಪತ್ರೆಯ ಸಿಇಒ ಕೃಷ್ಣಾರೆಡ್ಡಿ, ಡಾ. ತೇಜಸ್ವಿನಿ, ಡಾ. ಭಾಗ್ಯಶ್ರೀ, ಡಾ. ಸುಷ್ಮಾ ಮತ್ತಿತರ ಗಣ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.