ಸೀರೆತೊಟ್ಟು ವಿಜೃಂಭಿಸಿದ ಕಾಲೇಜು‌ ವಿದ್ಯಾರ್ಥಿನಿಯರು
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨; ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ.  ಸದಾ ಓದು, ಕ್ಲಾಸು ಎಂದು ಬಿಜಿಯಾಗಿದ್ದ ವಿದ್ಯಾರ್ಥಿನಿಯರಿಂದು ರಿಲ್ಯಾಕ್ಸ್ ಮೂಡಿಗೆ ಜಾರಿದ್ದು, ಕುಣಿದು ಕುಪ್ಪಳಿಸಿದರು. ಪ್ರತಿನಿತ್ಯ ಸಮವಸ್ತ್ರದಲ್ಲಿ ಕಾಲೇಜಿಗೆ ಆಗಮಿಸುತ್ತಿದ್ದ ವಿದ್ಯಾರ್ಥಿನಿಯರು ಸೀರೆತೊಟ್ಟು ಕಂಗೊಳಿಸಿದರಲ್ಲದೇ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.ಸರ್ಕಾರಿ ಕಾಲೇಜಿನಲ್ಲಿ ಇದೇ ಪ್ರಥಮ‌ ಬಾರಿಗೆ  ಎಥ್ನಿಕ್ ಡೇ ಆಯೋಜನೆ ಮಾಡಿದ್ದು ಇದರಿಂದ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಅನಾವರಣಕ್ಕೆ ಅನುಕೂಲವಾಗಲಿದೆ  ಪ್ರಾಂಶುಪಾಲರು ಮಂಜುನಾಥ್, ತಿಳಿಸಿದರುವಿದ್ಯಾರ್ಥಿನಿಯರೊಂದಿಗೆ ಶಿಕ್ಷಕರು ಕೂಡ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇದೇ ಮೊದಲ ಬಾರಿಗೆ ಸರ್ಕಾರಿ ಕಾಲೇಜಿನಲ್ಲಿ ಎಥ್ನಿಕ್ ಡೇ ಆಯೋಜನೆ ಮಾಡಿದ್ದು ವಿದ್ಯಾರ್ಥಿನಿಯರು ಸಖತ್ ಎಂಜಾಯ್ ಮಾಡಿದರು. ಈ ರೀತಿ ಕಾರ್ಯಕ್ರಮ ಆಯೋಜನೆ ಮಾಡುವುದರಿಂದ ಮನಸ್ಸು ರಿಲ್ಯಾಕ್ಸ್ ಆಗತ್ತದೆ ಅಲ್ಲದೇ ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಅದರ ಮಹತ್ವ ಸಾರುವ ನಿಟ್ಟಿನಲ್ಲಿ ಅನುಕೂಲವಾಗಿದೆ ಎಂದರು .