ವಿದ್ಯಾರ್ಥಿಗಳು ಸಮಾಜ ಸೇವೆ ಮಾಡುವ ಗುಣ ಬೆಳೆಸಬೇಕು: ಗಿರಡ್ಡಿ.
ಸಂಜೆವಾಣಿ ವಾರ್ತೆ
ಕುಕನೂರು, ಜು.02 : ಶಿಕ್ಷಕರಾದವರು ಸದೃಢರಾಗಬೇಕು, ಸದೃಢ ಶಿಕ್ಷಣ ನೀಡಬೇಕು, ನೈತಿಕ ಮೌಲ್ಯಗಳನ್ನು ಕಲಿಸಬೇಕು. ಅರಿವೇ ಗುರುವಾಗಬೇಕು.  ವಿದ್ಯಾರ್ಥಿಗಳು ಸಮಾಜ ಸೇವೆ ಮಾಡುವಂತರಾಗ ಬೇಕು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಅಶೋಕ ಎ ಗಿರಡ್ಡಿ ಹೇಳಿದರು.
ತಾಲೂಕಿನ ಯರೇಹಂಚಿನಾಳ ಗ್ರಾಮದ ಕರ್ನಾಟಕ ಸಂಸ್ಕೃತಿ ವಿದ್ಯಾಪೀಠ ಫ್ರೌಡ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಎನ್ ಹಿರೇಮಠ ಸೇವಾ ನಿವೃತ್ತಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹುಟ್ಟು ಮತ್ತು ಸಾವಿನ ನಡುವೆ ಹೋರಾಟ ಮಾಡುವುದು ಜೀವನ, ಕಲಿಕೆಯ ಜೀವನ ಸಂತೃಪ್ತಿಯ ಜೀವನ, ನಮ್ಮ ಶಾಲೆಯ ಶಿಕ್ಷಕ ಉಚಿತ ಶಿಕ್ಷಣ ನೀಡುವದನ್ನು ನೋಡಿದ ಅಂದಿನ ಶ್ರೀಗವಿಸಿದ್ದೇಶ್ವರ ಸ್ವಾಮೀಜಿಯರು ಫಲಪ್ರಧಾಯಕ ಸೇವೆ ನಿಮದು ಮುಂದೊಂದು ದಿನ ನಿಮಗೆ ಉತ್ತಮ  ಕಾಲ ಬರುತ್ತದೆ ಎಂದು ಹೇಳಿದ್ದ ಸ್ವಾಮಿಜೀಯರ ಮಾತು ತದ ನಂತರ ನಿಜವಾಗಿದ್ದನ್ನು ಸ್ಮರಿಸಿಕೊಂಡರು.
ಮುಖ್ಯೋಪಾಧ್ಯಾಯ ಎಸ್ ಆಂಜನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು,  ಶಿಕ್ಷಕ ಶಿವಣ್ಣ ಯಾಳಗಿ, ಸಾಹಿತಿ ರವಿತೇಜ ಅಬ್ಬಿಗೇರಿ,  ಶಿಕ್ಷಕ
ವಿ ಎಸ್‌  ಅರಳಿ , ಜಿಎನ್ ಹಿರೇಮಠ , ಹಳೆಯ ವಿದ್ಯಾರ್ಥಿ ಬಸವರಾಜ ಅಂಗಡಿ ಮಾತನಾಡಿದರು‌.
ಕರ್ನಾಟಕ ಸಂಸ್ಕೃತಿ ವಿದ್ಯಾಪೀಠ ಪ್ರೌಢ ಶಾಲೆ ಸಂಸ್ಥೆಯ ಅಧ್ಯಕ್ಷ ಸುಭಾಸ ವಿ ಮಾದಿನೂರು ಸಸಿಗೆ ನೀರು ಹಾಕುವ ಮೂಲಕ‌ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯೋಪಾಧ್ಯಾಯ ಅಂಜನಪ್ಪ,  ನಂದೇಪ್ಪ ಹನಸಿ, ಅಶೋಕ ಎ ಗಿರಡ್ಡಿ, ಸುಭಾಸ ವಿ ಮಾದಿನೂರು, ಶಿವಣ್ಣ ಯಾಳಗಿ, ಜಿಎನ್ ಹಿರೇಮಠ, ರವಿತೇಜ ಅಬ್ಬಿಗೇರ , ಪ್ರಕಾಶ ರಾಠೋಡ್  ಸೇರಿದಂತೆ ಇನ್ನಿತರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಗ್ರಾಮದ ಗಣ್ಯರು ಇದ್ದರು.