ಎನ್ ಟಿ ಬಿ ಹುಟ್ಟುಹಬ್ಬದ : ರೋಗಿಗಳಿಗೆ ಹಣ್ಣು ವಿತರಣೆ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು.2 :- ಕೂಡ್ಲಿಗಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಗ್ರಾಮಾಂತರ ಪ್ರದೇಶಗಳಾದ ಮೂಲೆಕಟ್ಟಿನ ಹಳ್ಳಿಗಳಲ್ಲಿ ಶಾಲೆಗಳ ನಿರ್ಮಾಣ ಮಾಡಿ ಮಕ್ಕಳಿಗೆ ಶಿಕ್ಷಣ ನೀಡಿದ ಶಿಕ್ಷಣ ಪ್ರೇಮಿ ಎನ್ ಟಿ ಬೊಮ್ಮಣ್ಣ ಅವರ ಹುಟ್ಟುಹಬ್ಬದ ದಿನವಾದ ಸೋಮವಾರ ಅವರ ಅಭಿಮಾನಿ ಬಳಗ ಹಾಗೂ ಹಾಲಿ ಶಾಸಕ ಡಾ ಶ್ರೀನಿವಾಸ ಅವರ ಆಪ್ತ ಬಳಗದಿಂದ ಸೋಮವಾರ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ದಿ. ಎನ್ ಟಿ ಬೊಮ್ಮಣ್ಣ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎನ್ ಟಿ ಬೊಮ್ಮಣ್ಣ ಹಾಗೂ  ಪುತ್ರ ಹಾಲಿ ಶಾಸಕ ಡಾ ಶ್ರೀನಿವಾಸ ಅಭಿಮಾನಿ ಮತ್ತು ಆಪ್ತ ಬಳಗದ ಕೆ ಎನ್  ದಿನಕರ,ಕಾಟೆರ್  ಲಂಕೇಶ, ನರಸಿಂಹಪ್ಪ, ಜಾಕೀರ್  ಹಾಗೂ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಮಧು ಇತರರಿದ್ದರು.