ಕನ್ನಡ ರಂಗಭೂಮಿಗೆ ಶ್ರೀಮಂತ ಪರಂಪರೆ ಇದೆ
ಧಾರವಾಡ,ಜು.2: :ಕನ್ನಡರಂಗಭೂಮಿಗೆ ಶ್ರೀಮಂತ ಪರಂಪರೆಇದ್ದು ಸಮಾಜದಅಮೂಲಾಗ್ರ ಬದಲಾವಣೆತರುವ ಶಕ್ತಿ ರಂಗಭೂಮಿಗಿದೆ. ರಂಗಭೂಮಿಒಂದುಜೀವಂತಕಲೆಯಾಗಿದೆಎಂದು ಸಾಹಿತಿ ಪದ್ಮಜಾಉಮರ್ಜಿಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ದಿ.ನಿರ್ಮಲಾ ಶಶಿಧರ ಪಾಟೀಲ ದತ್ತಿ ಅಂಗವಾಗಿ ಕಲಾಸ್ಪರ್ಶ ಸಾಂಸ್ಕøತಿಕ ಸಂಘ, ಧಾರವಾಡಕಲಾವಿದರಿಂದ ಆಯೋಜಿಸಿದ್ದ ಏಕಪಾತ್ರಾಭಿನಯ' ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದಅವರು, ದಿ.ನಿರ್ಮಲಾ ಪಾಟೀಲ ರಂಗಭೂಮಿಕ್ಷೇತ್ರದಲ್ಲಿಯಾವುದೇ ಪಾತ್ರ ನೀಡಿದರೂ ಆ ಪಾತ್ರಗಳಿಗೆ ಜೀವತುಂಬುವ ಕಲೆ ಅವರಿಗೆಕರಗತವಾಗಿತ್ತು.ಉದ್ಯೋಗಸ್ಥೆಯಾಗಿಕುಟುಂಬದವರು ನೀಡಿದ ಸಹಕಾರದಿಂದಅವರು ಶ್ರೇಷ್ಠ ಅಭಿನೇತ್ರಿಯಾಗಲು ಸಾಧ್ಯವಾಯಿತು.ಅವರ ಮನೋಜ್ಞಅಭಿನಯಜನಮಾನಸದಲ್ಲಿಇನ್ನೂ ಬೆಳಗಬೇಕಾಗಿತ್ತು.ಸಣ್ಣ ವಯಸ್ಸಿನಲ್ಲಿಯೇ ಅಗಲಿದ್ದು ಕಲಾ ಲೋಕಕ್ಕೆ ನಷ್ಟವಾಗಿದೆಎಂದರು. ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಕನ್ನಡರಂಗಭೂಮಿಕಲಾವಿದರು ನಮ್ಮ ಸಾಂಸ್ಕøತಿಕ ಪರಂಪರೆಯ ವಾರಸುದಾರರು. ದಿ. ನಿರ್ಮಲಾ ಶಶಿಧರ ಪಾಟೀಲ ದಂಪತಿಗಳಿಬ್ಬರೂ ಕಲೆಯೇ ಸರ್ವಸ್ವವಾಗಿಸಿಕೊಂಡಿದ್ದರು.ಕಲಾವಿದರುಯಾವುದೋಒತ್ತಡಕ್ಕೆ ಸಿಲುಕಿ ದುರ್ವೆಸನಕ್ಕೆ ಬಲಿಯಾಗದೇಕಲೆಯೊಂದಿಗೆತಮ್ಮಆರೋಗ್ಯವನ್ನು ಪೋಷಿಸಿಕೊಳ್ಳಬೇಕು. ಧಾರವಾಡ ನೆಲದಲ್ಲಿ ಹೀಗೆ ದಂಪತಿಗಳಿರ್ವರೂ ಕಲಾ ಸೇವಾ ಮಾಡುತ್ತ ಬಂದ ಪರಂಪರೆಇದೆ.ಏಣಗಿ ಬಾಳಪ್ಪ-ಲಕ್ಷ್ಮೀಬಾಯಿ, ಬಸವಲಿಂಗಯ್ಯ ಹಿರೇಮಠ-ವಿಶ್ವೇಶ್ವರಿ, ಪ್ರಕಾಶಗರುಡ-ರಜನಿ ಗರುಡ ಹೀಗೆ ಶಶಿಕುಮಾರ ಪಾಟೀಲ ನಿರ್ಮಲಾಜೋಡಿಯಾಗಿ ಕಲಾ ಲೋಕಕ್ಕೆ ಅರ್ಪಿಸಿಕೊಂಡಿದ್ದರು ಎಂದರು. ಧಾರವಾಡಕಲಾಸ್ಪರ್ಶ ಸಾಂಸ್ಕøತಿಕ ಸಂಘ ಬಾಲಕಲಾವಿದರಾದ ಕು.ದಿಗಂತತುಂಬರಗುದ್ದಿ, ಕು.ತುಳಸಿ ಮೋಖಾಸಿ, ಕು.ಸುಮಿತ ಭಜಂತ್ರಿ, ನಿರಂಜನತೋರಣಗಟ್ಟಿ, ಶ್ರೀವತ್ಸ, ಕು.ಅಫ್ರೊಜಜಾಲೆಗಾರ ಮುಂತಾದವರು ಸಮಾಜದಜ್ವಲಂತ ಸಮಸ್ಯೆಗಳ ಕುರಿತುಏಕಪಾತ್ರಾಭಿನಯ’ದ ಮನೋಜ್ಞಅಭಿನಯ ನೀಡಿ ಪ್ರೇಕ್ಷಕರನ್ನು ಭಾವುಕರನ್ನಾಗಿ ಮಾಡಿದರು.
ವೀರಣ್ಣಒಡ್ಡೀನ ಸ್ವಾಗತಿಸಿ, ನಿರೂಪಿಸಿದರು.ಸತೀಶತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಂಕರ ಕುಂಬಿ, ಬಿ.ಆಯ್, ಈಳಿಗೇರ, ಎಸ್.ಕೆ.ಕುಂದರಗಿ, ಕೆ.ಎಂ. ಅಂಗಡಿ, ಮಹಾಂತೇಶ ನರೇಗಲ್, ವ್ಹಿ. ಬಿ. ಸಂತೋಜಿ, ಮಹಾಂತೇಶ ಪಾಟೀಲ, ಚನ್ನಮ್ಮ ಪಾಟೀಲ, ಎಂ.ಬಿ. ಹೆಗ್ಗಾರ, ಸಿಕಂದರ ದಂಡಿನ ಸೇರಿದಂತೆ ಮುಂತಾದವರಿದ್ದರು.