ಜು.೨೮ ರಂದು ಪದ್ಮಶಾಲಿ ಸಮಾಜದಿಂದ‌ ಪ್ರತಿಭಾ ಪುರಸ್ಕಾರ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨: ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ (ನೇಕಾರ) ಯುವಕರ ಸಂಘದ ವತಿಯಿಂದ ಇದೇ ಜು.೨೮ ರಂದು ನಗರದ ಎಸ್.ಕೆ.ಪಿ ರಸ್ತೆಯ ಶ್ರೀ ಮಾರ್ಕಂಡೇಶ್ವರ ಸಮುದಾಯ ಭವನದಲ್ಲಿ‌ ಎಸ್.ಎಸ್.ಎಲ್.ಸಿ  ಮತ್ತು ದ್ವಿತೀಯ ಪಿ.ಯು.ಸಿ. ಯಲ್ಲಿ ಹೆಚ್ಚಿನ ಅಂಕಗಳಿಸಿ ಉತ್ತೀರ್ಣರಾದ ಪದ್ಮಶಾಲಿ (ನೇಕಾರ) ಜನಾಂಗದ ಕುಲಭಾಂದವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪಿ.ಜಿ.ಶ್ರೀನಿವಾಸ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜು.೨೮ ರ ಬೆಳಿಗ್ಗೆ ೧೦ ಗಂಟೆಗೆ ಶ್ರೀ ಪ್ರಭುಲಿಂಗ ಸ್ವಾಮಿಗಳು ದೀಪ ಬೆಳಗಿಸಲಿದ್ದು, ಡಾ.ನಂಬಿಯಣ್ಣ.ಬಿ. ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಮಾಜದ ಅಧ್ಯಕ್ಷ ಪಿ.ಜೆ.ನಾಗರಾಜ್, ಸೇಪೂರ್ ಆನಂದ್ ಹಾಗೂ ಜೆ.ಟಿ.ರಾಮಕೃಷ್ಣ ಉಪಸ್ಥಿತಲಿರುವರು ಎಂದರು. ಎಸ್.ಎಸ್.ಎಲ್.ಸಿ  ಮತ್ತು ದ್ವಿತೀಯ ಪಿ.ಯು.ಸಿ. ಯಲ್ಲಿ ಶೇ.೮೦ ಕ್ಕೂ ಹೆಚ್ಚು ಅಂಕಗಳಿಸಿದ ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ (ನೇಕಾರ) ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಜೊತೆಗೆ ಬೆಳಿಗ್ಗೆ ೧೦ ರಿಂದ ೧೧ ರವರೆಗೆ ರಂಗೋಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ‌ ಡಿ.ಎಸ್. ಶ್ರೀನಿವಾಸ, ಮಾರ್ಕಂಡೇಯ ಇ. ನರಾಲ್, ಪಿ.ರುದ್ರೇಶ್ ಇದ್ದರು.