ಅರಿವು ಮೂಡಿಕೆ ಅಭಿಯಾನ
ಕಲಘಟಗಿ,ಜು.2: ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಕಲಘಟಗಿ, ಶಿಕ್ಷಣ ಇಲಾಖೆ ಕಲಘಟಗಿ ಇವರುಗಳ ಆಶ್ರಯದಲ್ಲಿ ಪೆÇೀಕ್ಸೋ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಅರಿವು ಮೂಡಿಸುವ ಅಭಿಯಾನವನ್ನು ಜಿ. ಇ. ಗಲ್ರ್ಸ್ ಇಂಗ್ಲಿಷ್ ಸ್ಕೂಲ್ ಕಲಘಟಗಿಯಲ್ಲಿ ಹಮ್ಮಿಕೊಳಲಾಯಿತು. ಕಾರ್ಯಕ್ರಮವನ್ನು ಹಿರಿಯ ದಿವಾಣಿ ನ್ಯಾಯಾಧೀಶರಾದ
ರವೀಂದ್ರ ಹೊನೋಲೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶ್ರೀಮತಿ ಉಮಾದೇವಿ ಬಸಾಪುರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಣೇಶ ಎನ್, ದಿವಾಣಿ ನ್ಯಾಯಾಧೀಶರು ಮತ್ತು ವಕೀಲರ ಸಂಘದ ಅಧ್ಯಕ್ಷರಾದ ಅಣ್ಣಪ್ಪ ಓಲೇಕಾರ ಇದ್ದರು. ರವಿ ತೋಟಗಂಟಿ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ವಕೀಲರಾದ ಕೆ. ಬಿ. ಗುಡಿಹಾಳ, ಸಿ. ಬಿ. ದಾಸ್ತಿಕೊಪ್ಪ, ಶೋಭಾ ಬಳಿಗೆರ, ಎಸ್. ಜಿ. ಕುಲಕರ್ಣಿ, ಎನ್.ಬಿ. ಮುತ್ತಣ್ಣವರ, ವಾಯ್.ಬಿ. ಹೊಸಮನಿ, ಸಿ.ಡಿ. ಕೋಟಿ, ಪಿ.ಐ. ಕೋಟಿ, ಬಿಆರ್‍ಸಿ ಯ ಕುಮಾರ ಮತ್ತು ಶಾಲೆಯ ಮುಖ್ಯ ಶಿಕ್ಷಕರಾದ ಕೊಂಗಿ ಉಪಸ್ಥಿತರಿದ್ದರು.