`ಕಾಮರ್ಸ್‍ಡೇ’ ಕಾರ್ಯಕ್ರಮ
ನವಲಗುಂದ,ಜು.2: ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬ್ಯಾಂಕ್ ಗಳು ಅಪಾರವಾದ ಕೊಡುಗೆಯನ್ನು ನೀಡುತ್ತಾ ಬಂದಿವೆ. ಎಲ್ಲಿಯವರೆಗೆ ಆರ್ಥಿಕತೆ ಇರುತ್ತೋ ಅಲ್ಲಿಯವರೆಗೂ ಬ್ಯಾಂಕ್ ಗಳು ತಮ್ಮ ಕೊಡುಗೆಯನ್ನು ನೀಡುತ್ತವೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ ಮ್ಯಾನೇಜರ ಗೀತಾ ಕೋಣಪ್ಪನವರ ಹೇಳಿದರು.
ಅವರು ಶಂಕರ ಮಹಾವಿದ್ಯಾಲಯದಲ್ಲಿ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ವಾಣಿಜ್ಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾಮರ್ಸ್ ಡೇ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದರು
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಬಿ. ಕೆ. ಬಂಕಾಪುರ ಮಾತನಾಡಿ
ವಾಣಿಜ್ಯವು ನಾಗರೀಕತೆಯೊಂದಿಗೆ ಹುಟ್ಟಿಕೊಂಡು ಇಂದು ಪ್ರತಿಯೊಂದು ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿ ನಿಂತಿದೆ ಹಾಗೂ ಜಿ.ಡಿ.ಪಿ ಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದರು
ಪ್ರಾಚಾರ್ಯರಾದ ಡಾ. ಎಸ್. ವಿ. ಬಡಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಯ, ಶಕ್ತಿ ಹಾಗೂ ಹಣವನ್ನು ಮೂರು ವರ್ಷಗಳಿಗೆ ಅಥವಾ ಮುಂದಿನ ಹಂತದ ವ್ಯಾಸಂಗಕ್ಕಾಗಿ ಹೂಡಿಕೆ ಮಾಡುತ್ತ ಇದ್ದೀರಿ ಅದಕ್ಕಾಗಿ ನೀವು ಪ್ರತಿಫಲವನ್ನು ಪಡೆಯಬೇಕು ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೈಪೆÇೀಟಿ ನೀಡಲು ಕಾಪೆರ್Çರೇಟ್ ಸಂಸ್ಕೃತಿ ಅಳವಡಿಕೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ನೀಡಿದರು.
ನಂತರ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಯಾವ ಯಾವ ವಲಯದಲ್ಲಿ ಅವಕಾಶಗಳು ಇದಾವೆ ಹಾಗೂ ಅವುಗಳನ್ನು ಹೇಗೆ ಸ್ಪರ್ಧಾತ್ಮಕವಾಗಿ ಎದುರಿಸಬೇಕು ಎಂದು ವಿವರಿಸಲಾಯಿತು.
ಪ್ರಾಧ್ಯಾಪಕರಾದ ಡಾ. ಎಂ. ಎನ್. ಹಾರೋಗೇರಿ, ಡಾ. ಜಿ. ಎಸ್. ಚಿಣಗಿ,. ಅಕ್ಕಮ್ಮ. ಯಮನೂರ. ವಿಜಯಲಕ್ಷ್ಮಿ. ಸಾವಂತ್,ಇರ್ಷಾದ್ ಬೊದ್ಲೆಖಾನ್, ಶರಣು ದೊಡ್ಡಮನಿ ಹಾಗೂ ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ. ಶೀಲಾ ತುಬಚಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿಡಾ. ಪಿ. ಜಿ. ಕೊಪ್ಪದ, ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಾದ ಡಾ. ಆರ್. ಪಿ. ಚವಾಣ್, ಡಾ. ಎ. ಜಿ. ಜಕ್ಕನಗೌಡ್ರ, ಕುಮಾರಿ ಶಂಕ್ರಮ್ಮ ಕಣವಿ, ಸಿಬ್ಬಂದಿಗಳಾದ ಮಹೇಶ್ ಬಿ. ಕೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.